16 ಮಾರ್ಚ್ 2023 ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ದತ್ತಿ ನಿಧಿ ಪ್ರಶಸ್ತಿ ವಿಜೇತ ಕಾಸರಗೋಡಿನ ಸಾಹಿತಿಗಳ ಕೃತಿಗಳ ಅವಲೋಕನ, ಅಭಿನಂದನೆ ಮತ್ತು ಸಂವಾದ ಕಾರ್ಯಕ್ರಮವು ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ 19-03-2023 ರವಿವಾರ ಬೆಳಗ್ಗೆ ಗಂಟೆ 10ರಿಂದ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಸಂಪನ್ನಗೊಳ್ಳಲಿದೆ. ಸಾಹಿತಿ ಶ್ರೀ ರಾಧಾಕೃಷ್ಣ ಕೆ.ಉಳಿಯತಡ್ಕ ಇವರ ಘನ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸತ್ಯವತಿ ಕೊಳಚಪ್ಪು ಅವರ “ನವಿಲಗರಿ” ಮಕ್ಕಳ ಸಾಹಿತ್ಯ ಕೃತಿಯನ್ನು ಶ್ರೀ ಎ.ಬಿ.ದಿವಾಕರ ಬಲ್ಲಾಳ್ ಅವಲೋಕನ ಮಾಡಲಿದ್ದಾರೆ. ಅದೇ ರೀತಿ ಶ್ರೀಮತಿ ಸ್ನೇಹಲತಾ ದಿವಾಕರ್ ಇವರ “ಆಮೆ” ಕಥಾ ಸಂಕಲನವನ್ನು ಶ್ರೀ ಕಾರ್ತಿಕ್ ಪೆಡ್ರೆ, ಶ್ರೀ ವಿಕ್ರಂ ಕಾಂತಿಕೆರೆಯವರ “ಕಾವೇರಿ ತೀರದ ಪಯಣ” ಅನುವಾದ ಕೃತಿಯನ್ನು ಡಾ. ರತ್ನಾಕರ ಮಲ್ಲಮೂಲೆ, ಶ್ರೀಮತಿ ರಾಜಶ್ರೀ ಟಿ. ರೈಯವರ “ತುಳುನಾಡಿನ ಮೂರಿಗಳ ಆರಾಧನೆ” ಅಧ್ಯಯನ ಕೃತಿಯನ್ನು ಶ್ರೀಮತಿ ಕವಿತಾ ಕೂಡ್ಲು, ಡಾ. ಮುರಲಿ ಮೋಹನ್ ಚೂಂತಾರು ಇವರ “ಸಂಗಾತಿ” ವೈದ್ಯ ಸಾಹಿತ್ಯ ಕೃತಿಯನ್ನು ಕುಮಾರಿ ಸುಜಾತ ಮಾಣಿಮೂಲೆ ಇವರುಗಳು ಅವಲೋಕನ ಮಾಡಲಿದ್ದಾರೆ. ಅವಲೋಕನದ ನಂತರ ನಡೆಯುವ ಕೃತಿಕಾರರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮದಲ್ಲಿ ಶ್ರೀ ಮಲಾರ್ ಜಯರಾಮ ರೈ ಸಾಹಿತಿಗಳನ್ನು ಗೌರವಿಸಲಿದ್ದಾರೆ. ಶ್ರೀ ಟಿ.ಎ.ಎನ್.ಖಂಡಿಗೆ ಇವರು ಸಂವಾದ ನಡೆಸಿಕೊಡುತ್ತಾರೆ.