ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಹಾಗೂ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಗುಂಡ್ಮಿ ಇದರ ಆಶ್ರಯದಲ್ಲಿ ‘ಕಾದಂಬರಿ ಮರು ಓದು – ವಿಮರ್ಶೆ’ ಕಾರ್ಯಕ್ರಮವು ದಿನಾಂಕ 13-08-2023ರಂದು ಗುಂಡ್ಮಿಯ ಸದಾನಂದ ರಂಗ ಮಂದಿರದಲ್ಲಿ ಸಂಜೆ 4.00ರಿಂದ ನಡೆಯಲಿದೆ.
ಯಕ್ಷ ಕಲಾವಿದರಾದ ಕೆ.ಸೀತಾರಾಮ ಸೋಮಯಾಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕ.ಸಾ.ಸ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ. ಕಲಾ ಕೇಂದ್ರದ ಕಾರ್ಯದರ್ಶಿಯಾದ ವಿ.ರಾಜಶೇಖರ ಹೆಬ್ಬಾರರ ಉಪಸ್ಥಿತಿಯಲ್ಲಿ ಕ.ಸಾ.ಪ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಗುಂಡ್ಮಿ ರಾಮಚಂದ್ರ ಐತಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ ಇವರು ‘ಮಹಾಭಾರತದ ಪಾತ್ರ’ ಕೃತಿಯ ಬಗ್ಗೆ ಹವ್ಯಕ ಭಾಷೆಯಲ್ಲಿ ಮತ್ತು ನಿವೃತ್ತ ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಾನಂದ ಮಯ್ಯ ಇವರು ಡಾ.ಶಿವರಾಮ ಕಾರಂತರ ಕೃತಿಯಾದ ‘ಧರ್ಮರಾಯನ ಸಂಸಾರ’ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

