Subscribe to Updates

    Get the latest creative news from FooBar about art, design and business.

    What's Hot

    ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ ಅರ್ಜಿ ಆಹ್ವಾನ

    June 7, 2025

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಸಾಪ 2023-24ನೆಯ ಸಾಲಿನ ‘ಶಾಸನಶಾಸ್ತ್ರ ಡಿಪ್ಲೊಮಾ’ ಅರ್ಜಿಗೆ ಅವಧಿ ವಿಸ್ತರಣೆ | ಅಕ್ಟೋಬರ್ 31ರ ವರೆಗೆ 
    Literature

    ಕಸಾಪ 2023-24ನೆಯ ಸಾಲಿನ ‘ಶಾಸನಶಾಸ್ತ್ರ ಡಿಪ್ಲೊಮಾ’ ಅರ್ಜಿಗೆ ಅವಧಿ ವಿಸ್ತರಣೆ | ಅಕ್ಟೋಬರ್ 31ರ ವರೆಗೆ 

    October 14, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023-24ನೆಯ ಸಾಲಿನ “ಶಾಸನಶಾಸ್ತ್ರ ಡಿಪ್ಲೊಮಾ” ತರಗತಿಗೆ ಅರ್ಜಿಗಳನ್ನು ಸಲ್ಲಿಸಲು  ದಿನಾಂಕ 30-09-2023ರವರೆಗೆ ಅವಕಾಶ ನೀಡಲಾಗಿತ್ತು. ಆದರೆ ಹೆಚ್ಚುವರಿಯಾಗಿ ದಿನಾಂಕ 31-10-2023 ರ ವರೆಗೆ  ದಂಡ ಶುಲ್ಕ ರೂಪಾಯಿ 50.00ಗಳನ್ನು ನೀಡಿ ಅರ್ಜಿ ಸಲ್ಲಿಸಲು ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ಕಲ್ಪಿಸಿದೆ.

    ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ರೂಪಾಯಿ 25.00ರಂತೆ ಶುಲ್ಕ ಪಾವತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ (ಬೆಂಗಳೂರು) ಪಡೆಯಬಹುದು. ಪರೀಕ್ಷಾ ಅರ್ಜಿಗಳನ್ನು ಅಂತರ್ಜಾಲ ತಾಣ www.kasapa.in ಮೂಲಕ ಪಡೆದುಕೊಳ್ಳಬಹುದು.  ಅಂತರ್ಜಾಲ ತಾಣದಲ್ಲಿ ಅರ್ಜಿ ನಮೂನೆಯನ್ನು ಪಡೆದವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ ರೂಪಾಯಿ 25.00ಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುವುದು.

    ಹೆಚ್ಚಿನ ವಿವರಗಳಿಗೆ ಗೌರವಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು -560018. ದೂರವಾಣಿ : 080 26612991, 26623584, 22423867 ಮೂಲಕ ಸಂಪರ್ಕಿಸಬಹುದು.

    “ಶಾಸನಶಾಸ್ತ್ರ ಡಿಪ್ಲೊಮಾ” ಅವಧಿಯು ಒಂಬತ್ತು ತಿಂಗಳದ್ದಾಗಿದ್ದು, ವಾರಕ್ಕೆ 4ದಿನ ತರಗತಿಗಳು ಇರುತ್ತವೆ. (ಮಂಗಳವಾರದಿಂದ ಶುಕ್ರವಾರದ ವರೆಗೆ). ಎಲ್ಲಾ ತರಗತಿಗಳು ಸಂಜೆ ಘಂಟೆ 6.00 ರಿಂದ 7.00 ಗಂಟೆಯವರೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೇ ನಡೆಸಲಾಗುವುದು. ಶಾಸನಶಾಸ್ತ್ರದಲ್ಲಿ ಶಾಸನಗಳ ಲಿಪಿಗಳನ್ನು ಓದುವ, ಶಾಸನಗಳ ಸಂಗ್ರಹ ವಿಧಾನ, ಅಧ್ಯಯನ, ಸಂಪ್ರಬಂಧ ರಚನೆ ಇತ್ಯಾದಿ ಮೌಲಿಕ ಅಂಶಗಳನ್ನು ತರಗತಿಗಳಲ್ಲಿ ಬೋಧಿಸಲಾಗುವುದು. ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕನ್ನಡ ಸಾಹಿತ್ಯ ಪರಿಷತ್ತು ಕೋರಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleದೇರಳಕಟ್ಟೆಯ ನಿಟ್ಟೆಯಲ್ಲಿ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ 29ನೇ ಉಪನ್ಯಾಸ
    Next Article ಪರಿಚಯ ಲೇಖನ | “ಗಾನ ಸಮ್ಮೋಹನ” ದೇವಿಪ್ರಸಾದ್ ಆಳ್ವ ತಲಪಾಡಿ
    roovari

    Add Comment Cancel Reply


    Related Posts

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025

    ಡಾ. ಇಂದಿರಾ ಹೆಗ್ಗಡೆ ಇವರಿಗೆ ‘ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’

    June 7, 2025

    ಮೈಸೂರಿನಲ್ಲಿ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ | ಜೂನ್ 08

    June 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.