ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಹಮ್ಮಿಕೊಂಡ ಮೂರು ‘ದತ್ತಿ ಉಪನ್ಯಾಸ’ ಕಾರ್ಯಕ್ರಮಗಳು ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ದಿನಾಂಕ 19-05-2023ರಂದು ಅಪರಾಹ್ನ ಗಂಟೆ 4.30ಕ್ಕೆ ನಡೆಯಲಿದೆ.
ಕ.ಸಾ.ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಐತಾಳರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿಗಳೂ ಸಾಂಸ್ಕೃತಿಕ ಚಿಂತಕರೂ ಆದ ಪ್ರೊ. ಉಪೇಂದ್ರ ಸೋಮಯಾಜಿಯವರು ಮಾಡಲಿದ್ದಾರೆ. ಉಡುಪಿ ಜಿಲ್ಲೆಯ ಕ.ಸಾ. ಪರಿಷತ್ತಿನ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರು ಆಶಯ ನುಡಿಗಳನ್ನಾಡುವರು.
ದತ್ತಿ ದಾನಿಗಳಾದ ಸೂರಾಲು ನಾರಾಯಣ ಮಡಿ ಹಾಗೂ ಯಕ್ಷಗಾನ ಕೇಂದ್ರ ಹಂಗಾರಕಟ್ಟೆಯ ಕಾರ್ಯದರ್ಶಿಗಳಾದ ಶ್ರೀ ರಾಜಶೇಖರ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಬ್ರಹ್ಮಾವರ ತಾಲೂಕು ಪ್ರಪ್ರಥಮ ಸಾಹಿತ್ಯ ಜ್ಞಾಪಕಾರ್ಥ ದತ್ತಿ, ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನ ಬೆಣಗಲ್ ದತ್ತಿ, ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನ (ಸಾಯಿಬ್ರ ಕಟ್ಟೆ) ಜ್ಞಾಪಕಾರ್ಥ ದತ್ತಿ ಹೀಗೆ ಮೂರು ದತ್ತಿಗಳಿಂದ ಮೂರು ಉಪನ್ಯಾಸ ಕಾರ್ಯಕ್ರಮಗಳು ಜರಗಲಿವೆ.
ಒಂದನೇ ಉಪನ್ಯಾಸದ ವಿಷಯ ‘ಕಾರಂತ ಕಾದಂಬರಿ ವಿಮರ್ಶೆ’ ಉಪನ್ಯಾಸಕಾರರು ನಿವೃತ್ತ ಮುಖ್ಯ ಶಿಕ್ಷಕರಾದ ಜಿ. ಗಣೇಶ್ ಮೂರ್ತಿ ಹೆಬ್ಬಾರ್.
ಎರಡನೇ ಉಪನ್ಯಾಸದ ವಿಷಯ ‘ಕುಂದಾಪ್ರ ಕನ್ನಡ ಅಂದು-ಇಂದು’ ಉಪನ್ಯಾಸಕಾರರು ಕೋಟದ ವಿವೇಕ ಪದವಿ ಪೂರ್ವ ಕಾಲೇಜು ಇಲ್ಲಿಯ ಉಪನ್ಯಾಸಕಾರರಾದ ಜಿ. ಸಂಜೀವ
ಮೂರನೇ ಉಪನ್ಯಾಸದ ವಿಷಯ ‘ಯಕ್ಷಗಾನದಲ್ಲಿ ಕನ್ನಡ ಅಂದು-ಇಂದು’ ಸಾಂಸ್ಕೃತಿಕ ಚಿಂತಕರಾದ ಡಾ. ಜಿ. ವೈಕುಂಠ ಹೇರ್ಳೆ ಉಪನ್ಯಾಸ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆದರದ ಸ್ವಾಗತವನ್ನು ಕೋರುತ್ತಿದ್ದಾರೆ.
ಕ.ಸಾ.ಪ. ಬೆಂಗಳೂರಿನಿಂದ ನಾಡೋಜ ಡಾ. ಮಹೇಶ ಜೋಷಿ, ರಾಜ್ಯಾಧ್ಯಕ್ಷರು, ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ ಮತ್ತು ಡಾ. ಪದ್ಮಿನಿ ನಾಗರಾಜ್, ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು,
ಕ.ಸಾ.ಪ. ಉಡುಪಿ ಜಿಲ್ಲಾ ಸಮಿತಿಯಿಂದ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಮತ್ತು ನರೇಂದ್ರ ಕುಮಾರ್ ಕೋಟ, ಗೌರವ ಕೋಶಾಧ್ಯಕ್ಷರಾದ ಮನೋಹರ ಪಿ.
ಹಾಗೂ ಕ.ಸಾ.ಪ. ಬ್ರಹ್ಮಾವರ ತಾಲೂಕು ಘಟಕದಿಂದ ಅಧ್ಯಕ್ಷರಾದ ಗುಂಡ್ಮಿ ರಾಮಚಂದ್ರ ಐತಾಳ್, ಗೌರವ ಕಾರ್ಯದರ್ಶಿಗಳಾದ ಪಕೀರಪ್ಪ ಮತ್ತು ಜ್ಯೋತಿ ಪೂಜಾರಿ, ಗೌರವ ಕೋಶಾಧಿಕಾರಿಗಳಾದ ಅಲ್ತಾರು ನಾಗರಾಜ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು.