ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ), ಕಾಸರಗೋಡು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ‘ಅಮ್ಮ’ ಇವೆಂಟ್ ಮ್ಯಾನೇಜ್ಮೆಂಟ್ ಕನ್ನಡ ಗ್ರಾಮ ಪಾರೆಕಟ್ಟೆ, ವಿ. ಕೆ. ಎಂ. ಕಲಾವಿದರು (ರಿ.) ಬೆಂಗಳೂರು, ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು, ಸಹಕಾರಲ್ಲಿ ಕರ್ನಾಟಕ ಗಡಿನಾಡ ಉತ್ಸವ, ವಿಶ್ವ ರಂಗಭೂಮಿ ದಿನಾಚರಣೆ – 2025, ಕಾಸರಗೋಡು ಕನ್ನಡ ನಾಟಕೋತ್ಸವ, ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಕಾರ್ಯಕ್ರಮವು ದಿನಾಂಕ 27 ಮಾರ್ಚ್ 2025 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಸಂಸ್ಥಾಪಕ ಪ್ರಧಾನ ಸಂಚಾಲಕರಾದ ಡಾಕ್ಟರ್ ಎಂ. ಜಿ. ಆರ್. ಅರಸ್ ಮಾತನಾಡಿ “ಕಾಸರಗೋಡು ಕನ್ನಡ ಗ್ರಾಮದ ಸ್ಥಾಪನೆಯು ವಿಶ್ವದಲ್ಲೇ ಪ್ರಥಮ. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 2000ದಲ್ಲಿ ಸ್ಥಾಪನೆಗೊಂಡು ರಜತ ಮಹೋತ್ಸವವನ್ನು 2025ರಲ್ಲಿ ಆಚರಿಸುತ್ತಿರುವುದು ಅಭಿನಂದನಾರ್ಹವಾಗಿದೆ. ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯಿಂದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಶಿವರಾಮ ಕಾಸರಗೋಡು ಹಾಗೂ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎಲ್. ಎಸ್. ಶಾಸ್ತ್ರಿ ಅವರಿಬ್ಬರೂ ನಿರಂತರ 25ವರ್ಷ ಕಾಲ ಚು. ಸಾ. ಪ ಅಧ್ಯಕ್ಷರಾಗಿ ಚುಟುಕು ಸಾಹಿತ್ಯವನ್ನು ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರಚಾರ ಹಾಗೂ ಪ್ರಸಾರ ಕಾರ್ಯವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ ಕಾಸರಗೋಡು ಇದರ ಅಧ್ಯಕ್ಷರಾಗಿದ್ದು, ಕೇರಳ ರಾಜ್ಯದ ಕನ್ನಡ ಸಾಂಸ್ಕೃತಿಕ ರಾಯಭಾರಿಯಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಶಿವರಾಮ ಕಾಸರಗೋಡು ಅವರ ಪರಿ ಕಲ್ಪನೆಯಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಕನ್ನಡ ಗ್ರಾಮದ ಸ್ಥಾಪನೆಯೂ ವಿಶ್ವದಲ್ಲೇ ಪ್ರಥಮ” ಎಂದರು.
ನಿಸರ್ಗರಮ್ಯ ಕೇರಳದ ಕನ್ನಡ ನೆಲವಾದ ಕಾಸರಗೋಡಿನ ಕನ್ನಡ ಗ್ರಾಮದ ಪರಿಸರದ ಜೆ. ಪಿ. ನಗರದ ಶ್ರೀ ಕೊರಗಜ್ಜ ಸನ್ನಿಧಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆಯನ್ನು ಕಾಸರಗೋಡು ನಗರ ಸಭಾ ಕೌನ್ಸಿಲರ್ ಶ್ರೀಮತಿ ಶಾರದಾ ಬಿ. ಉದ್ಘಾಟಿಸಿದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಹಾಗೂ ನಾಡೋಜ ಡಾಕ್ಟರ್ ಕಯ್ಯಾರ ಕಿಞ್ಞಣ್ಣ ರೈ ಅವರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ನೂರಾರು ಕವಿ, ಸಾಹಿತಿಗಳು, ಲೇಖಕರು, ಬರಹಗಾರರು ಕಾಸರಗೋಡು – ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದರು.
ಕನ್ನಡ ಗ್ರಾಮದಲ್ಲಿ ರಾಷ್ಟ್ರಧ್ವಜವನ್ನು ಕಾಸರಗೋಡು ನಗರಸಭಾ ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ, ಕನ್ನಡ ಧ್ವಜವನ್ನು ನಗರ ಸಭಾ ಮಾಜಿ ಕೌನ್ಸಿಲರ್ ಶಂಕರ ಕೆ., ಜೆ. ಪಿ. ನಗರ ಚು. ಸಾ. ಪ. ಧ್ವಜವನ್ನು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಶಿವರಾಮ ಕಾಸರಗೋಡು ಧ್ವಜಾರೋಹಣ ಗೈದರು.
ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಚುಟುಕು ಕವಿ ಹರೀಶ ಸುಲಾಯ ಒಡ್ಡಂಬೆಟ್ಟು ವಹಿಸಿದ್ದರು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸುತ್ತಾ 25 ವರ್ಷಗಳಲ್ಲಿ ಆಯೋಜಿಸಿರುವ ಸಮ್ಮೇಳನ ಕಾರ್ಯಕ್ರಮ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ಪ್ರಸ್ತಾವನೆಗೈದರು. ಡಾ. ರತ್ನ ಹಾಲಪ್ಪ ಗೌಡ ನೂತನ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ವಿ. ಸೀತಾಲಕ್ಷ್ಮಿ ವರ್ಮ ವಿಟ್ಲ ಅರಮನೆ ಕೃತಿ ಪರಿಚಯಿಸಿದರು. ಆಯಿಷಾ.ಎ. ಎ. ಪೆರ್ಲ ಕಾಸರಗೋಡಿನ ವೈಶಿಷ್ಟಗಳನ್ನು ಕುರಿತು ಪರಿಚಯಿಸಿದರು.
ಬೆಂಗಳೂರಿನ ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷರಾದ ಡಾ. ಕೆ. ಸಿ. ಬಲ್ಲಾಳ್, ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ವಿ. ಕೆ. ಎಂ. ಕಲಾವಿದರು (ರಿ.) ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಸಿ. ಎಂ. ತಿಮ್ಮಯ್ಯ ಬೆಂಗಳೂರು ಇವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಸರಗೋಡು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಡಾ. ಹರಿಕಿರಣ್ ಬಂಗೇರ, ಕವಿ ಹಾಗೂ ಸಾಹಿತಿಗಳಾದ ಅಪ್ಪಾ ಸಾಹೇಬ ಅಲಿಬಾದಿ, ಅಥಣಿ ಬೆಳಗಾವಿ, ದಯಾಸಾಗರ ಚೌಟ ಮುಂಬಯಿ, ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಇದರ ಪ್ರಧಾನ ಕಾರ್ಯದರ್ಶಿ ಜಯರಾಜ ಶೆಟ್ಟಿ ಚಾರ್ಲ ಮಂಜೇಶ್ವರ, ಕವಿ ಹಮೀದ್ ಹಸನ್ ಮಾಡೂರು,, ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ಶ್ರೀ ಕೃಷ್ಣಯ್ಯ ಅನಂತಪುರ ಹಾಗೂ ಗೌರವ ಅತಿಥಿಗಳಾಗಿ ಗೋಪಾಲಕೃಷ್ಣ ಶಾಸ್ತ್ರಿ, ಅಶ್ವಿನಿ ಕೊಡಿಬೈಲ್ ಸುಳ್ಯ,ಆನಂದ ರೈ ಅಡ್ಕಸ್ಥಳ, ಶಿವಪ್ರಸಾದ ಕೊಕ್ಕಡ, ವೀರಭದ್ರೇಗೌಡ ಮೈಸೂರು, ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್. ನಾಯಕ್, ಸಿಹಾನ ಬಿ. ಎಂ. ಉಳ್ಳಾಲ, ಪುರುಷೋತ್ತಮ ಎಂ. ನಾಯ್ಕ್, ಕೆ. ಸುಬ್ಬಣ್ಣ ಶೆಟ್ಟಿ, ಕೆ. ಗುರುಪ್ರಸಾದ್ ಕೋಟೆಕಣಿ, ಶ್ರೀಕಾಂತ ಕಾಸರಗೋಡು, ಜಯ ಮಣಿಯಂಪಾರೆ ಶುಭ ಹಾರೈಸಿದರು. ಕೆ. ಜಗದೀಶ ಕೂಡ್ಲು ಸ್ವಾಗತಿಸಿ, ಕಾವ್ಯ ಕುಶಲ ಧನ್ಯವಾದವಿತ್ತರು. ಕುಮಾರ ಕೆ. ಕನ್ನಡ ಗ್ರಾಮ ಸಹಕರಿಸಿದರು.