ಕಾಸರಗೋಡು : ಡಾ. ವಾವನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಸಾರಥ್ಯದ ‘ಸೀತಮ್ಮ ಪುರುಷ ನಾಯಕ ಸ್ಮಾರಕ’ ಕನ್ನಡ ಭವನ ಗ್ರಂಥಾಲಯ (ರಿ.223/2008) ಇದರ ಅಂಗ ಸಂಸ್ಥೆಯಾದ, ಬೆಂಗಳೂರು ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಇವರಿಂದ ದಿನಾಂಕ 02 ಫೆಬ್ರುವರಿ 2025ರಂದು ಉದ್ಘಾಟನೆಗೊಂಡ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಇದರ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಿರುವ ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026ವು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದ ಸಭಾಂಗಣದಲ್ಲಿ ‘ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್. ಅರಸ್’ ವೇದಿಕೆಯಲ್ಲಿ ದಿನಾಂಕ 22 ಫೆಬ್ರುವರಿ 2026 ಭಾನುವಾರ ನಡೆಯಲಿದೆ.
ಕವಿಗೋಷ್ಠಿ, ಯುವ ಕವಿಗೋಷ್ಠಿ, ವಿಚಾರಗೋಷ್ಠಿ, ‘ಕವಿ ಕಾವ್ಯವಿಭೂಷಣ’, ‘ಕವಿ ಕಾವ್ಯ ಕಂಠೀರವ’ ಪ್ರಶಸ್ತಿ ಪ್ರದಾನ ಸಮ್ಮೇಳನ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ, ಸಾಂಸ್ಕೃತಿಕ ಕಲಾ ವೈಭವ, ಯಕ್ಷಗಾನ ಬಯಲಾಟ, 101 ಮಂದಿಯಿಂದ ಪ್ರಾತಃಕಾಲ ಭಜನೆ ಇತ್ಯಾದಿ ಸನಾತನ ಸಂಸ್ಕೃತಿಯೊಂದಿಗೆ ಕಾರ್ಯಕ್ರಮ ನಡೆಸಲು ಆಲೋಚನೆ ನಡೆಯುತ್ತಿದೆ ಎಂದು ಕನ್ನಡ ಭವನದ ಸ್ಥಾಪಕರೂ, ಕೇರಳ ರಾಜ್ಯ-ಚುಟುಕು ಸಾಹಿತ್ಯ ಪರಿಷತ್ತು ಸಂಸ್ಥಾಪಕರೂ ಆದ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾದ್ದು, ಪ್ರಶಸ್ತಿ ಪಡೆಯಲು ಅರ್ಹತೆಯಿದ್ದ ಕವಿ ಶ್ರೇಷ್ಠರು ಸ್ವರಚಿತ ಚುಟುಕು ಕವಿಗಳು 9037173400 ಮೊಬೈಲ್ ಸಂಖ್ಯೆ ವಾಟ್ಸಪ್ ಮೂಲಕ ಸಂಪರ್ಕಿಸಲು ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.
ಪ್ರಶಸ್ತಿ ಪಡೆಯಲು,…. ಕವಿಗೋಷ್ಠಿಯಲ್ಲಿ ಭಾಗವಹಿಸಲು,… ಮೆರವಣಿಗೆಯಲ್ಲಿ ಭಾಗವಹಿಸಲು,….. ಗೌರವ ಸನ್ಮಾನ ಸ್ವೀಕರಿಸಲು ತಾತ್ಪರ್ಯ ಇರುವ ಕನ್ನಡ ಕವಿ ಶ್ರೇಷ್ಠರು ಕೂಡಲೇ 9037173400 ಸಂಖ್ಯೆಗೆ ವಾಟ್ಸಪ್ ನಲ್ಲಿ ನಿಮ್ಮ ಹೆಸರನ್ನು ಕಾಯ್ದಿರಿಸಿ.
