ಕೋಲಾರ : ಬಿ. ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್, ರೋಟರಿ ಕ್ಲಬ್ ಕೋಲಾರ, ಡಾ. ಕೆ ವಾಮನ್ ರಾವ್ ಬೇಕಲ್ ಸಾರಥ್ಯದ ಕಾಸರಗೋಡು ಕನ್ನಡ ಭವನ ಸಂಯುಕ್ತವಾಗಿ ಆಯೋಜಿಸಿದ ವಿಶ್ವಮಾನವ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ‘ಕಾಸರಗೋಡು – ಕೋಲಾರ ಕನ್ನಡ ಉತ್ಸವ’ ಕಾರ್ಯಕ್ರಮವು ದಿನಾಂಕ 28 ಡಿಸೆಂಬರ್ 2024ರಂದು ಕೋಲಾರದ ಪತ್ರಕರ್ತರ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಭಾಷಣ ಮಾಡಿದ ಕೋಲಾರದ ಸಿವಿಲ್ ನ್ಯಾಯಾದೀಶರಾದ ಶ್ರೀ ಹರ್ಷ ಜಿ. “ಪ್ರತಿಜ್ಞಾಬದ್ದವಾಗಿ ಕನ್ನಡ ಭಾಷೆಯನ್ನು ಕನ್ನಡಿಗರು ಬಳಸಿಕೊಂಡರೆ ಮಾತ್ರ ಕನ್ನಡ ಉಳಿಯಬಲ್ಲುದು” ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕನ್ನಡ ಭವನದ ರೂವಾರಿಗಳಾದ ವಾಮನ್ ರಾವ್ ಬೇಕಲ್ ಇವರು ಮಾತನಾಡಿ “ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಗುರುತರ ಹೊಣೆಗಾರಿಕೆ ಸಂಘ, ಸಂಸ್ಥೆಗಳಿಗಿದ್ದು, ಪರಸ್ಪರ ಸಹಕರಿಸಿ ಕನ್ನಡ ಕಾರ್ಯಗಳನ್ನು ಮಾಡಬೇಕಿದೆ” ಎಂದು ಹೇಳಿದರು.
ಕಾರ್ಯಕ್ರಮವನ್ನು ಬಿ. ಶಿವಕುಮಾರ್ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ಕಾಸರಗೋಡು ಕನ್ನಡ ಭವನದ ಅಂತರ್ ರಾಜ್ಯ ಪ್ರತಿಷ್ಠಿತ ಪ್ರಶಸ್ತಿಯಾದ ‘ಕನ್ನಡ ಪಯಸ್ವಿನಿ ಪ್ರಶಸ್ತಿ’ಯನ್ನು ಗಣ್ಯ ಸಾಹಿತಿ ಕಲಾವಿದರು ಸಂಘಟಕರು ಆದ ರೋ. ಸಿ.ಆರ್. ಅಶೋಕ್, ಶ್ರೀಮತಿ ಶಾಂತಮ್ಮ, ರೋ. ನಾಗನಂದ ಕೆಂಪರಾಜ್, ರೋ. ಹೆಚ್. ರಾಮಚಂದ್ರಪ್ಪ, ಡಾ. ಪೋಸ್ಟ್ ನಾರಾಯಣ ಸ್ವಾಮಿ, ಶ್ರೀ ಪಿ. ನಾರಾಯಣಪ್ಪ, ಶ್ರೀ ಗಣಪತಿ ಹೋಬಳಿದಾರ್ ಬೈಂದೂರು, ಡಾ. ಕೈವಾರ ಶ್ರೀನಿವಾಸ ಇವರಿಗೆ ನೀಡಲಾಯಿತು.
ಶ್ರೀ ಗಿರೀಶ್ ಎಂ.ಎಸ್., ಶ್ರೀಮತಿ ಶೋಭಾ ಕೆ.ಎಸ್., ಶ್ರೀ ಎಂ. ಆನಂದ ರೆಡ್ಡಿ, ಡಾ. ಮುನಿರಾಜು ಎಂ., ಶ್ರೀ ವೆಂಕಟರಾಜು, ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳೂರು, ಶ್ರೀ ನಾರಾಯಣ ಸ್ವಾಮಿ, ಶ್ರೀ ರವೀಂದ್ರನ್ ಪಾಡಿ, ಶ್ರೀ ನಾಗರಾಜ್ ಮದ್ದೋಡಿ, ಶ್ರೀ ಶಿವಾನಂದ ಮಂದಾನವರ, ಶ್ರೀ ಬಿ.ಕೆ. ನಾಗರಾಜ, ಶ್ರೀ ಸುರಕ್ಷಿತ ಗೌಡ, ಕುಮಾರಸಿದ್ದ ಪುಂಡಲೀಕ ಪುಲಾರಿ, ಮನೋಜ್ ಕುಮಾರ್ ಇವರಿಗೆ ‘ವಿಶ್ವಮಾನವ ಕುವೆಂಪು ಕನ್ನಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾದ ರೋ. ನಾಗಾನಂದ ಕೆಂಪರಾಜು, ರೋ. ಎಸ್.ವಿ. ಸುಧಾಕರ್, ಕೆ.ಎಸ್. ಗಣೇಶ್, ಶ್ರೀ ಬಿಜ್ಜಾವರ ಸುಬ್ರಮಣ್ಯ, ವಿ. ಲಕ್ಷ್ಮಯ್ಯ, ಡಾ. ಇಂಚರ ನಾರಾಯಣ ಸ್ವಾಮಿ, ಡಾ. ಶರಣಪ್ಪ ಗಬ್ಬೂರ್, ಶ್ರೀ ಅಜಯ್ ಕುಮಾರ್ ಎ., ರೋ. ಬಿ.ಕೆ. ದೇವರಾಜ್, ಮುನೇಗೌಡ ಎಂ., ರೋ. ಎಸ್.ಎಂ. ಚಂದ್ರಶೇಖರ ಇವರುಗಳು ಶ್ರೀ ಟಿ. ಸುಬ್ಬರಾಮಯ್ಯ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ ಡಾ. ಪ್ರಕಾಶ್, ಡಾ. ನಂಜಪ್ಪ, ಪ್ರಸನ್ನಕುಮಾರ್, ಗೀತಾ ಜಿ., ಗುಲಾಬಿ ರಾಘವೇಂದ್ರ, ರೂಪ ಶಿವಕುಮಾರ್, ಶಾಂತಮ್ಮ, ರಾಜಕುಮಾರ, ಕಾವ್ಯಪ್ರಸಾದ್ ಇವರು ಕುವೆಂಪು ಬಗ್ಗೆ ಕವಿತೆ ಪ್ರಸ್ತುತ ಪಡಿಸಿದರು. ಇವರಿಗೆ ಸ್ಮರಣಿಕೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಕು. ನಿಶ್ಚಲ ಮೇರು ಮಟ್ಟದ ಭರತನಾಟ್ಯ ಪ್ರದರ್ಶನ ನೀಡಿದರು. ಗೀತ ಗಾಯನದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರನ್ನು ಗೌರವಿಸಲಾಯಿತು. ಶ್ರಿಮತಿ ರೇಣುಕಾ ಎಂ. ಕೋಲಾರ ಕಾರ್ಯಕ್ರಮ ನಿರೂಪಿಸಿ, ಶ್ರೀ ಪ್ರಸನ್ನ ಕುಮಾರ್ ಎಂ. ವಂದಿಸಿದರು.