ಕಾಸರಗೋಡು: ಕಾಸರಗೋಡಿನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ಮೇಘ ರಂಜನಾ ಚಂದ್ರಗಿರಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸುವ ‘ಭಜಿಸು ಕನ್ನಡ’ ಕಾರ್ಯಕ್ರಮವು ದಿನಾಂಕ 16-7-2023ರ ಭಾನುವಾರ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮಯೂರ ಮಂಟಪದಲ್ಲಿ ನಡೆಯಲಿದೆ.
ಕೂಡ್ಲುವಿನ ಶ್ರೀಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೆ.ಜಿ.ಶ್ಯಾನುಭೋಗ್ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮವನ್ನು ರಂಗಭೂಮಿ, ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ಶ್ರೀ ಕಾಸರಗೋಡು ಚಿನ್ನಾ ಉದ್ಘಾಟಿಸಲಿದ್ದಾರೆ. ಕುಮಾರಿ ಸಾಕ್ಷಿ ಕೂಡ್ಲು ಪ್ರಾರ್ಥನೆ ಗೈಯಲಿದ್ದು, ‘ಮೇಘ ರಂಜನಾ’ದ ಆಡಳಿತ ನಿರ್ದೇಶಕರಾದ ಶ್ರೀ ಪುರುಷೋತ್ತಮ ಕೊಪ್ಪಲ್ ಸ್ವಾಗತಿಸಲಿರುವರು. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ವೇಣುಗೋಪಾಲ್ ಹಾಗೂ ಕವಯತ್ರಿಯಾದ ಶ್ರೀಮತಿ ದಿವ್ಯಾಗಟ್ಟಿ ಪರಕ್ಕಿಲ ಶುಭಾಶಂಸನೆ ಗೈಯಲಿರುವರು.ಇದೇ ಸಂದರ್ಭದಲ್ಲಿ ಕೀರ್ತನಕಾರರಾದ ಶ್ರೀ ನರಸಿ೦ಹ ಹೊಸ ಮನೆ ಮತ್ತು ರಂಗನಟ ಹಾಗೂ ನಿರ್ದೇಶಕರಾದ ಶ್ರೀ ಉದಯಕುಮಾರ್ ಮನ್ನಿಪ್ಪಾಡಿಯವರನ್ನು ಸನ್ಮಾನಿಸಲಾಗುವುದು. ‘ಮೇಘ ರಂಜನಾ’ದ ನಿರ್ದೇಶಕಿ ಕುಮಾರಿ ಮೇಘನಾ ಕೊಪ್ಪಲ್ ಧನ್ಯವಾದ ಸಮರ್ಪಿಸಿ, ಅಧ್ಯಾಪಕರಾದ ಶ್ರೀ ಕಿರಣ್ ಪ್ರಸಾದ್ ಕೂಡ್ಲು ಕಾರ್ಯಕ್ರಮ ನಿರ್ವಹಿಸಲಿರುವರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿಯರಾದ ಕೃಷ್ಣಿಮಾ, ನಿಶಾ, ಅತುಲ್ಯಾ, ಸಾಧಿಕಾ, ಶ್ರಾವ್ಯ, ಧ್ರುವಿತಾ, ವಿಸ್ಮಿತಾ, ಸಾಕ್ಷಿ,. ಹರ್ಷಿತಾ ಮತ್ತು ಮೇಘನ ಇವರಿಂದ ನೃತ್ಯ ವೈವಿಧ್ಯ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ಹಿನ್ನೆಲೆ ಗಾಯಕ ಶ್ರೀ ರವೀಂದ್ರ ಪ್ರಭು ಮೂಲ್ಕಿ, ಶ್ರೀ ಕಿಶೋರ್ ಪೆರ್ಲ ಮತ್ತು ಅಕ್ಷತಾ ಪ್ರಕಾಶ್ ಇವರಿಂದ ಭಕ್ತಿ, ಭಾವ, ಜನಪದ ಗೀತೆಗಳ ಗಾಯನ ‘ಮೇಘ ಮಲ್ಹಾರ್’ ನಡೆಯಲಿರುವುದು.

