ಮಂಗಳೂರು: ದಿನಾಂಕ 21-04-2023ರಂದು ಶುಕ್ರವಾರ ಶಾಸ್ತ್ರೀಯ ನೃತ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ದರ್ಜೆ ಮುಗಿಸಿದ ಕರಾವಳಿಯ ವಿಭಿನ್ನ ಪ್ರತಿಭೆ, ಪ್ರಸ್ತುತ ಹುಬ್ಬಳ್ಳಿಯಲ್ಲಿ ನೆಲೆಸಿರುವ ವಿದುಷಿ ಧನ್ಯತಾ ವಿನಯ್, ತಾವೇ ತಮ್ಮ ಇಷ್ಟದೈವ ಕಟೀಲು ದೇವಿಯ ಬಗ್ಗೆ ಸಂಯೋಜಿಸಿದ ಅವರ ‘ಭ್ರಾಮರಿ ಶಬ್ದಂ’ ಶ್ಲೋಕ ಸಹಿತವಾಗಿ ಕಟೀಲು ಜಾತ್ರೆಯ ಅಂಗವಾಗಿ ಜರುಗಿದ ಅಷ್ಟಾವಧಾನ ಸೇವೆಯಲ್ಲಿ ಲೋಕಾರ್ಪಣೆಗೊಂಡಿತು.
ಗಾಯಕಿಯಾಗಿ ವಿದುಷಿ ಧನ್ಯತಾ ವಿನಯ್, ನಟುವಾಂಗದಲ್ಲಿ ಮೈಸೂರಿನ ನೃತ್ಯಗುರು ವಿದುಷಿ ಶ್ರೀ ವಿದ್ಯಾಶಶಿಧರ್ ಅವರು ಸಹಕರಿಸಿದರು. ಅಪೂರ್ವ ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ‘ಭ್ರಾಮರಿ ಶಬ್ದಂ’ಗೆ ನೃತ್ಯ ಸಂಯೋಜಿಸಿ ಅದ್ಭುತವಾಗಿ ನರ್ತಿಸಿದರು. ಇದು ನೆರೆದಿದ್ದ ಸಾವಿರಾರು ಮಂದಿ ಪ್ರೇಕ್ಷಕರ ಮನರಂಜಿಸಿತು.