ಬೆಂಗಳೂರು : ಕಥಾಬಿಂದು ಪ್ರಕಾಶನದ ವತಿಯಿಂದ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ’ವು ದಿನಾಂಕ 21-01-2024ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಕನ್ನಡ ತಿಲಕ ರಾಜ್ಯ ಪ್ರಶಸ್ತಿ’ ಪ್ರದಾನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ‘ಕಥಾಬಿಂದು ಸಾಹಿತ್ಯ ಮಾಲೆ -2’ 40 ಕೃತಿಗಳು ಅನಾವರಣಗೊಳ್ಳಲಿವೆ.
ಈ ಸಾಹಿತ್ಯ ಸಮ್ಮೇಳನವನ್ನು ಶಿವಮೊಗ್ಗದ ಹಿರಿಯ ಸಾಹಿತಿ ಶ್ರೀಮತಿ ಗಾಯತ್ರಿ ಸುರೇಂದ್ರ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಆನಂದ ನಿಲಯ ಪ್ರಕಾಶನದ ಶ್ರೀ ಆನಂದ್ ಕೊರಟಿಯವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಶ್ರೀ ವಾಮನ್ ರಾವ್ ಬೇಕಲ್ ಇವರ ಅಧ್ಯಕ್ಷತೆಯಲ್ಲಿ ‘ಕನ್ನಡ ತಿಲಕ ರಾಜ್ಯ ಪ್ರಶಸ್ತಿ’ ಪ್ರದಾನ ಮತ್ತು ಶ್ರೀಮತಿ ಭವ್ಯ ಸುಧಾಕರ ಜಗಮನೆ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿರುವುದು.
ಹಿರಿಯ ಸಾಹಿತಿ ಕೆ.ವಿ. ಲಕ್ಷ್ಮಣ ಮೂರ್ತಿ ಇವರ ಉಪಸ್ಥಿತಿಯಲ್ಲಿ ಶ್ರೀಮತಿ ವಿನೋದಿನಿ ಆನಂದ್ ಇವರ ಅಧ್ಯಕ್ಷತೆಯಲ್ಲಿ ‘ಕಥಾಬಿಂದು ಸಾಹಿತ್ಯ ಮಾಲೆ -2’ 40 ಕೃತಿಗಳು ಅನಾವರಣ ಹಾಗೂ ಶ್ರೀಮತಿ ಸುನೀತ ನೆಲೆಗದ್ದೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.