ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ಕಾಲಾವಧಿ ಜಾತ್ರೆಯ ಪ್ರಯುಕ್ತ 2ನೇ ವರ್ಷದ ಕಲಾಕಾಣಿಕೆ ‘ಕಥೆ ಬರೆದಾತಿಜಿ’ ತುಳು ನಾಟಕ ಪ್ರದರ್ಶನವನ್ನು ದಿನಾಂಕ 17 ಜನವರಿ 2025ರಂದು ರಾತ್ರಿ 8-30 ಗಂಟೆಗೆ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿದೆ. ರಮೇಶ್ ವರಪ್ಪಾದೆ ಇವರ ಸಾರಥ್ಯದಲ್ಲಿ ವಿಟ್ಲ ವರಪ್ಪಾದೆ ದುರ್ಗಾಂಬಾ ಕಲಾವಿದರು ಅಭಿನಯಿಸುವ ವಿನೂತನ ಶೈಲಿಯ ನಾಟಕ ಇದಾಗಿದ್ದು, ಯದು ವಿಟ್ಲ ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿರುತ್ತಾರೆ.