11 ಫೆಬ್ರವರಿ 2023, ಬೆಂಗಳೂರು: ಕನ್ನಡದ ಶ್ರೇಷ್ಠ ನಾಟಕ ಬರಹಗಾರರಲ್ಲಿ ಒಬ್ಬರಾದ ಡಿ ಆರ್ ನಾಗರಾಜ್ ರವರು ಆಂಟನ್ ಚೆಕಾವ್ ರವರು ಬರೆದಿರುವ ವಾರ್ಡ್ ನಂ. 6 ಎಂಬ ಕೃತಿಯನ್ನು ಕನ್ನಡಕ್ಕೆ ರೂಪಾಂತರ ಮಾಡಿ 1980ರ ದಶಕದಲ್ಲಿ ಕನ್ನಡದ ನಾಟಕ ಪ್ರಪಂಚಕ್ಕೆ ಪರಿಚಯಿಸಿದರು. ಕತ್ತೆಲೆ ದಾರಿ ದೂರ ಕನ್ನಡ ನಾಟಕ ರಂಗದಲ್ಲೆ ಅದರದ್ದೆ ಆದ ದೂರದ ದಾರಿಯನ್ನು ಹುಡುಕಿಕೊಂಡು ತನ್ನದೆ ಛಾಪನ್ನು ಮೂಡಿಸಿದೆ. ಈ ಕೃತಿಯು ಮಾನಸಿಕ ಸ್ತಿಮಿತ ಕಳೆದುಕೊಂಡಿರುವ ಮನಸುಗಳ ನಡುವೆ ನಡೆಯುವ ಒಂದು ಕಥೆ. ಅನ್ಯಾ ಯ, ಶೋ ಷಣೆ, ಭ್ರಷ್ಟಾಚಾರ, ಹಿಂಸೆ, ದೌರ್ಜ ನ್ಯ- ಇದೆಲ್ಲವು ಭ್ರಷ್ಟ ಅಧಿಕಾರಿಯ ಅಧಿಕಾರವನ್ನು ದುರಪಯೋಗ ಪಡಿಸಿಕೊಳ್ಳುವ ಮೂಲ ಬೇರಾಗಿ ಈ ನಾಟಕದಲ್ಲಿ ಕಾಣುತೊ ಡಗುತ್ತದೆ. ಆಂಟನ್ ಚೆಕಾವ್ ಪ್ರಕಾರ ‘ಒಬ್ಬ ಪಾತ್ರಧಾರಿಯ ಕರ್ತ ವ್ಯ ಪ್ರಶ್ನೆಗಳನ್ನು ಹುಡುಕುವುದೇ ಹೊ ರತು ಉತ್ತರಗಳನ್ನು ಹುಡುಕುವುದಲ್ಲ’.
ನಾಗರಾಜ್ ರವರ ಪ್ರಕಾರ ಮನುಷ್ಯ ತನ್ನ ಬುದ್ಧಿ ಮಟ್ಟದಲ್ಲಿ, ತನ್ನ ತೊ ಡಲಾಟದಲ್ಲಿ —— ತನ್ನ ಮಾನಸಿಕ ಸ್ಥಿತಿಗಳಿಂದ ದೂಃಖಕ್ಕೆ ಒಳಗಾಗುವುದು ಬಳಲಿಕೆಯೋ ? ಅಥವಾ ವಸ್ತು ಪ್ರಪಂಚದಲ್ಲಿ ವಯಕ್ತಿಕ ಸಂಧರ್ಭ ಗಳಿಂದ ಬಲಿಯಾಗಿ ಯತನೆ ಅನುಭವಿಸುವುದು ಬಳಲಿಕೆಯೋ ? ರೋಗಕ್ಕೆ ಚಿಕಿತ್ಸೆ ಕೊಡುವ ಮುನ್ನ ಮೊದಲು ನೀ ನು ರೋ ಗಿಯಾಗಬೇ ಕೇ ? ಸ್ವತಂತ್ರ ಎಂಬ ನಿಜವಾದ ಪದದ ಅರ್ಥ ಸಮಾಜಿಕ ರಾಜಕೀಯದಿಂದ ಜೀತದಾಳಾಗು ಎಂಬುವುದಾ?
ಡಿ ಆರ್ ನಾಗರಾಜ್ ರವರು ಭಾರತದ ಶ್ರೇಷ್ಠ ಸಂಸ್ಕೃತಿಕ ವಿಮರ್ಶಕರಾಗಿ, ಇಂತಹ ಶೈಲಿಯ ನಿರೂಪಣೆಯಿಂದ ಪ್ರೇಕ್ಷಕರನ್ನು ಅಥವ ಓದುಗಾರರನ್ನು ಕತ್ತಲೆ ದಾರಿ ದೂರ ಮೂಲಕ ಸಂಕೀ ರ್ಣ ಪ್ರಶ್ನೆಗಳತ್ತಿರ ಕರೆದೊ ಯ್ಯು ತ್ತಾರೆ. ಅವರು ಮಾರ್ಕ್ಸಿ ಸ್ಟ್ ತತ್ವಗಳನ್ನು ಕನ್ನಡದ ನಾಟಕಕ್ಕೆ ಅಳವಡಿಸಿ ಸಫಲರಾಗಿದ್ದಾರೆ.
ತನ್ನ ಪರಿಣಾಮಕಾರಿ ಸಂಭಾಷಣೆಯ ಮೂಲಕ ಸಮಾಜದ ತೋ ಡಕುಗಳನ್ನು ಕ್ರೌ ಡಿಕರಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಇದರಲ್ಲಿ ಬರುವ ಮುಖ್ಯಪಾತ್ರದಾರಿಗಳು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಾಂಕೇ ತಿಕ ಪ್ರತಿನಿಧಿಗಳಾಗಿ ಅಸ್ತಿತ್ವದಲ್ಲಿ ಇರುವ ವ್ಯವಸ್ಥಯ ವಿರುದ್ಧ ಧನಿ ಎತ್ತುವ ಮುಖಾಂತರ ಯಶಸ್ವಿ ಯಾಗುವುದು ನಿಜವಾದ ಸ್ವಾ ತಂತ್ರದ ಅರ್ಥ ಎಂದು ನಂಬುತ್ತಾರೆ. ಅಸಮಾನತೆ ಮತ್ತು ಅನ್ಯಾ ಯಗಳಿಂದ ಮುಕ್ತವಾಗಿ ಸ್ವಾ ತಂತ್ರವನ್ನು ಸಾಧಿಸುವ ಸಮ್ರರ್ಥ ನೆಯ ಹೋ ರಾಟ ಎಂಬುದು ಈ ನಾಟಕದ ಉದ್ದೇಶ. ವಿಭನ್ನ ದೃಷ್ಟಿಕೋನ ಮತ್ತು ಆಲೋ ಚನಗಳ ಸಂಗಮಕ್ಕೆ ಒತ್ತುಕೊಡುವ ನಾಟಕಗಳೇ ಸಾಹಿತ್ಯದ ಶ್ರೇಷ್ಠ ಗುರುತಾಗಿರುತ್ತದೆ.
ಕಲೆ ಮತ್ತು ಸಾಹಿತ್ಯದ ಮೂಲ ಕಾರ್ಯ ವು ನಮ್ಮ ಅಂತರಂಗದ ಮೇ ಲೆ ಬೆಳೆಕು ಚೆಲ್ಲುವುದು. ಈ ನಾಟಕದಲ್ಲಿ ಮನುಷ್ಯಸ ಬೇ ಕು-ಬೇಡಗಳ ನಡುವಿನ ತಿಳುವಳಿಕೆಯ ಸಾಮರ್ಥ್ಯ ದ ವಿಷಯ ಕುರಿತು ಅದ್ಭು ತವಾಗಿ ಚರ್ಚಿ ಸಲಾಗಿದೆ. ಹುಚ್ಚುತನ, ದಿಗ್ಭ್ರಮೆ, ದುರ್ಬ ಲತೆ, ಅಸಂಬದ್ಧತೆ, ಮೊದಲಾದ ದೌರ್ಬಲ್ಯಗಳ ಬಗೆಗೆ ಅನ್ವೇಷಿಸುವಲ್ಲಿ ಕತ್ತಲೆ ದಾರಿ ದೂರವು ಇಂದಿನ ಕಾಲಘಟ್ಟಕ್ಕೂ ಪರಿಣಾಮಕಾರಿಯಾದ ಯೋಚನಾಲಹರಿಗಳಿಗೆ ಒಂದು ಕನ್ನಡಿಯಾಗಿರುತ್ತದೆ.