ಬೆಂಗಳೂರು : ವೀರಲೋಕ ಇದರ ಆಶ್ರಯದಲ್ಲಿ ಕಾವ್ಯ ಪರಂಪರೆಯಲ್ಲೊಂದು ದಿಟ್ಟ ಹೆಜ್ಜೆ- ಐದು ಕವನ ಸಂಕಲನಗಳ ಲೋಕಾರ್ಪಣೆ ಸಮಾರಂಭ ‘ಕಾವ್ಯಕ್ರಮ’. ಈ ಕಾರ್ಯಕ್ರಮವು ದಿನಾಂಕ 24-09-2023ರಂದು ಬೆಳಿಗ್ಗೆ 9.30ಕ್ಕೆ ಬೆಂಗಳೂರಿನ ಎನ್.ಆರ್.ಕಾಲೋನಿಯ ಡಾ. ಸಿ.ಅಶ್ವಥ್ ಕಲಾಭವನದಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಯಂತ್ ಕಾಯ್ಕಿಣಿ, ಟಿ.ಎನ್. ಸೀತಾರಾಮ್, ಜೋಗಿ, ಅಬ್ದುಲ್ ರಶೀದ್ ಮತ್ತು ರಾಜಶೇಖರ್ ಮಠಪತಿ ಇವರುಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಾಸುದೇವ ನಾಡಿಗ್ ಇವರ ‘ನಿನ್ನ ಧ್ಯಾನದ ನೂರೊಂದು ಹಣತೆ’, ನಂದಿನಿ ಹೆದ್ದುರ್ಗೆಯವರ ‘ಒಂದು ಆದಿಮ ಪ್ರೇಮ’, ಫಾಲ್ಗುಣ ಗೌಡ ಇವರ ‘ಬಿಂಜೆಮುಳ್ಳು’, ಸದಾಶಿವ ಸೊರಟೂರು ಅವರ ‘ಗಾಯಗೊಂಡ ಸಾಲುಗಳು’ ಮತ್ತು ಪಾಪುಗುರು ಇವರ ‘ಮಣ್ಣೇ ಮೊದಲು’ ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ವೀರಕಪುತ್ರ ಶ್ರೀನಿವಾಸ ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಆನಂದ ಮಾದಲಗೆರೆ ಮತ್ತವರ ತಂಡದಿಂದ ‘ಗೀತ ಗಾಯನ’ ಕಾರ್ಯಕ್ರಮ ನಡೆಯಲಿದೆ.