ಮಂಗಳೂರು : ಇಂಟ್ಯಾಕ್ ಮಂಗಳೂರು ಅಧ್ಯಾಯ ಮತ್ತು ಕಲ್ಲಚ್ಚು ಪ್ರಕಾಶನದ ಸಹಯೋಗದಲ್ಲಿ ವಿಶ್ವ ಕವಿತಾ ದಿನಾಚರಣೆಯ ಪ್ರಯುಕ್ತ ಕನ್ನಡದ ಪ್ರಸಿದ್ಧ ಸಾಹಿತಿಗಳಾದ ಗೋವಿಂದ ಪೈ, ಕುವೆಂಪು, ಬೇಂದ್ರೆ, ಕಯ್ಯಾರ, ಅಡಿಗ, ಲಂಕೇಶ್, ನಿಸ್ಸಾರ್ ಅಹ್ಮದ್, ತಿರುಮಲೇಶ್, ಸಿದ್ದಲಿಂಗಯ್ಯ, ವೈದೇಹಿ, ಕಾಯ್ಕಿಣಿ ಮೊದಲಾದವರ ಕಾವ್ಯ ವಾಚನ ಮತ್ತು ವಿಶ್ಲೇಷಣೆ – ಮುಸ್ಸಂಜೆಯ ಕವಿತೆಗಳು ‘ಕವಿ-ಕಾವ್ಯ-ಮಂಥನ’ ಕಾರ್ಯಕ್ರಮವು ಮಂಗಳೂರಿನ ಜಿ.ಜಿ. ರಸ್ತೆ, ಕೊಡಿಯಾಲಗುತ್ತು (ಪಶ್ಚಿಮ), ಕೊಡಿಯಾಲಗುತ್ತು ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ದಿನಾಂಕ 21-03-2024ರಂದು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಕೆನರಾ ಬ್ಯಾಂಕಿನ ನಿವೃತ್ತ ವಿ.ಜಿ.ಎಂ. ರೀಸ್ ಮ್ಯಾಥ್ಯೂಸ್ ಉದ್ಘಾಟನೆ ಮಾಡಲಿದ್ದು, ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ ಭಾರತೀಯ ಭಾಷಾ ಸಂಸ್ಥಾನ ಇದರ ನಿಕಟಪೂರ್ವ ಯೋಜನಾ ನಿರ್ದೇಶಕರಾದ ಪ್ರೊ ಬಿ. ಶಿವರಾಮ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಇಂಟ್ಯಾಕ್ ಮಂಗಳೂರು ಅಧ್ಯಾಯದ ಸಂಚಾಲಕರಾದ ಸುಭಾಷ್ ಚಂದ್ರ ಬಸು ಇವರು ಉಪಸ್ಥಿತರಿದ್ದು, ಡಾ. ಮೀನಾಕ್ಷಿ ರಾಮಚಂದ್ರ, ಪ್ರೊ. ಪಿ. ಕೃಷ್ಣಮೂರ್ತಿ, ಡಾ. ಸಾಯಿಗೀತಾ ಹೆಗ್ಡೆ, ವಿಲ್ಸನ್ ಕಟೀಲ್, ಬಶೀರ್ ಅಹ್ಮದ್ ಕಿನ್ಯ, ದಿವಾ ಕೊಕ್ಕಡ, ಪ್ರೊ. ಅಕ್ಷಯಾ ಆರ್. ಶೆಟ್ಟಿ, ದಿವಾಕರ ಬಲ್ಲಾಳ್, ಶ್ರೀ ಮುದ್ರಾಡಿ, ಯೋಗೀಶ್ ಮಲ್ಲಿಗೆಮಾಡು ಭಾಗವಹಿಸಲಿರುವರು.