ಬೆಂಗಳೂರು : ಕನ್ನಡ ಸಹೃದಯರ ಪ್ರತಿಷ್ಠಾನ (ಕುಮಾರವ್ಯಾಸ ಮಂಟಪ) ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಕುಮಾರವ್ಯಾಸ ಜಯಂತಿ ಪ್ರಯುಕ್ತ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಕವಿ-ಕಾವ್ಯ ಪರಿಚಯ ಭಾಷಣ ಸ್ಪರ್ಧೆಯು ದಿನಾಂಕ 06 ಡಿಸೆಂಬರ್ 2024ರ ಶುಕ್ರವಾರದಂದು ಬೆಂಗಳೂರಿನ ರಾಜಾಜಿನಗರದ ಕನ್ನಡ ಸಹೃದಯರ ಪ್ರತಿಷ್ಠಾನದ ಕುಮಾರವ್ಯಾಸ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕನ್ನಡ ಸಹೃದಯರ ಪ್ರತಿಷ್ಠಾನ ಕುಮಾರವ್ಯಾಸ ಮಂಟಪ ಇದರ ಉಪಾಧ್ಯಕ್ಷರಾದ ಡಾ. ವೆಂಕಟೇಶ್ವರುಲು ನಾಯ್ಡು ಭಾಗವಹಿಸಲಿದ್ದಾರೆ.

