ಪೆರ್ಲ: ಕನ್ನಡ ಸಾಹಿತ್ಯ ಪರಿಷತ್ ಇದರ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ಸವಿ ಹೃದಯದ ಕವಿ ಮಿತ್ರರು ಇವರ ಸಹಕಾರದೊಂದಿಗೆ ಆಯೋಜಿಸುವ ಕವಿತಾ ಕೌತುಕ ಸರಣಿ – 3 ‘ಕವಿ ಕಾವ್ಯ ಸಂವಾದ’ ಕಾರ್ಯಕ್ರಮವು ದಿನಾಂಕ 26 ಏಪ್ರಿಲ್ 2025ರ ಅಪರಾಹ್ನ ಘಂಟೆ 2.20ರಿಂದ ಪೆರ್ಲದ ವ್ಯಾಪಾರಿ ಭವನದಲ್ಲಿ ನಡೆಯಲಿದೆ.
ನಿವೃತ್ತ ಶಿಕ್ಷಕರಾದ ಉಮೇಶ ಕೆ. ಪೆರ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿಗಳು ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರಾದ ಡಾ. ರಮಾನಂದ ಬನಾರಿ ಉದ್ಘಾಟಿಸಲಿರುವರು. ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಲೇಖಕ ಬಿ. ಎಸ್. ಕಾಟುಕುಕ್ಕೆ, ಪೆರ್ಲ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಅಧ್ಯಕ್ಷರಾದ ರಾಜಾರಾಮ ಶೆಟ್ಟಿ ಕಾಟುಕುಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಕ. ಸಾ. ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸವಿ ಹೃದಯದ ಕವಿ ಮಿತ್ರರು ಇದರ ಸಂಚಾಲಕರಾದ ಸುಭಾಷ್ ಪೆರ್ಲ, ಖ್ಯಾತ ವಾಗ್ಮಿ ಆಯಿಶಾ ಪೆರ್ಲ, ಕ. ಸಾ. ಪ. ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಮಂಜುಶ್ರೀ ನಲ್ಕ ಉಪಸ್ಥಿತರಿರುವರು.