ಶಿರ್ವ : ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪರಿಚಯ (ರಿ) ಪಾಂಬೂರು ಇದರ ಜಂಟಿ ಸಹಯೋಗದೊಂದಿಗೆ ಪಾಂಬೂರು ಪರಿಚಯದಲ್ಲಿ ‘ಕವಿಸಂಧಿ ಹಾಗೂ ಕಥಾಸಂಧಿ’ ಸಾಹಿತ್ಯಪೂರ್ಣ ಕಾರ್ಯಕ್ರಮವು ದಿನಾಂಕ 19-11-2023ರಂದು ಜರಗಿತು. ಖ್ಯಾತ ಕೊಂಕಣಿ ಕವಿ ಜೊ.ಸಿ. ಸಿದ್ಧಕಟ್ಟೆ ಇವರು ಕವಿತಾ ಸಂಧಿಯನ್ನು ಹಾಗೂ ಖ್ಯಾತ ಸಣ್ಣಕತೆಕಾರ ಗೋಕುಲ್‌ದಾಸ್ ಪ್ರಭುರವರು ಕಥಾ ಸಂಧಿಯನ್ನು ನಡೆಸಿಕೊಟ್ಟರು.
ಪಾಂಬೂರ್ ಚರ್ಚ್ ಧರ್ಮಗುರು ವಂ| ಗುರು ಹೆನ್ರಿ ಮಸ್ಕರೇನ್ಹಸ್‌ರವರು ಮುಖ್ಯ ಅತಿಥಿಯಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ವಿಭಾಗದ ನಿಮಂತ್ರಕ, ಕವಿ ಮೆಲ್ವಿನ್ ರೊಡ್ರಿಗಸ್‌ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಪರಿಚಯ ಆಡಳಿತ ವಿಸ್ವಸ್ಥ ಡೊ| ವಿನ್ಸೆಂಟ್ ಆಳ್ವ ವಂದನಾರ್ಪಣೆಗೈದರು. ಪರಿಚಯ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ಕಾರ್ಯಕ್ರಮವನ್ನು ಸಂಯೋಜಿಸಿದರು. ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗದ ಸದಸ್ಯರಾದ ಸಾಹಿತಿ ಶ್ರೀ ಎಚ್.ಎಮ್.ಪೆರ್ನಾಲ್ ಹಾಗೂ ಶ್ರೀ ಸ್ಟ್ಯಾನಿ ಬೇಳಾ ಹಾಗೂ ಪರಿಚಯದ ಟ್ರಸ್ಟಿಗಳೊಂದಿಗೆ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.