ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು ಮಂಜೇಶ್ವರ ಇವರು ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ಈ ಕಾರ್ಯಕ್ರಮದ ಹನ್ನೊಂದನೆಯ ಕವಿಗೋಷ್ಠಿಯನ್ನು ದಿನಾಂಕ 27 ಜುಲೈ 2025ರಂದು ಬೆಳಿಗ್ಗೆ 10-00 ಗಂಟೆಗೆ ಕಾಸರಗೋಡು ಮಂಜೇಶ್ವರದ ಗಿಳಿವಿಂಡುವಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಕಾಸರಗೋಡು ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಕವಯತ್ರಿ ಡಾ. ಕೆ.ವಿ. ಸಿಂಧು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 11-30 ಗಂಟೆಗೆ ಕವಿಗೋಷ್ಠಿ – 01 ಕೃಷ್ಣನ್ ನಡುವಲತ್ತ್ ಹಾಗೂ ಮಧ್ಯಾಹ್ನ ಗಂಟೆ 2-30ಕ್ಕೆ ಕವಿಗೋಷ್ಠಿ – 02 ಡಾ. ಮೀನಾಕ್ಷಿ ರಾಮಚಂದ್ರ ಮಂಗಳೂರು ಇವರುಗಳ ಅಧ್ಯಕ್ಷತೆಯಲ್ಲಿ ಪ್ರಸ್ತುತಗೊಳ್ಳಲಿದೆ. ಮಧ್ಯಾಹ್ನ ಗಂಟೆ 1-30ಕ್ಕೆ ಸರ್ವಾಧ್ಯಕ್ಷರೊಂದಿಗೆ ‘ಕನ್ನಡ ಮತ್ತು ಮಲಯಾಳದ ನಡುವಿನ ಸೇತುವೆ ಯಾವುದು ?’ ಎಂಬ ವಿಷಯದ ಬಗ್ಗೆ ಸಂವಾದ ನಡೆಯಲಿದ್ದು, ಸಂಜೆ 4-00 ಗಂಟೆಗೆ ದಿವಾಕರ ಪಿ. ಅಶೋಕನಗರ ಮತ್ತು ಸಿ.ಎಂ. ನರಸಿಂಹ ಮೂರ್ತಿ ಚಾಮರಾಜನಗರ ಇವರ ಸಂಯೋಜನೆಯಲ್ಲಿ ‘ಭಾವ – ಜಾನಪದ – ಗೀತ ಗಾಯನ’ ಪ್ರಸ್ತುತಿ, ಬಳಿಕ 4-30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.