ಕೊಡಗು : ರಂಗಮಂಡಲ ಬೆಂಗಳೂರು ಮತ್ತು ಕೊಡಗು ಕವಿ ಬಳಗ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ಈ ಕಾರ್ಯಕ್ರಮದ ಎಂಟನೇ ಕವಿಗೋಷ್ಠಿಯನ್ನು ದಿನಾಂಕ 23 ಫೆಬ್ರವರಿ 2025ರಂದು ಬೆಳಿಗ್ಗೆ 10-30 ಗಂಟೆಗೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು, ಕೂಡ್ಲೂರು ಗ್ರಾಮದ ಪೂರ್ಣಚಂದ್ರ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ಕವಯತ್ರಿ ಹಾಗೂ ಬರಹಗಾರರಾದ ಸ್ಮಿತಾ ಅಮೃತರಾಜ್ ಇವರು ಕೊಡಗು ಜಿಲ್ಲೆಯ ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 12-00 ಗಂಟೆಗೆ ಕವಿಗೋಷ್ಠಿ ಭಾಗ 01 ಸುನೀತಾ ಕುಶಾಲನಗರ ಹಾಗೂ ಮಧ್ಯಾಹ್ನ ಗಂಟೆ 2-45ಕ್ಕೆ ಕವಿಗೋಷ್ಠಿ ಭಾಗ 2 ಮೇಜರ್ ಕುಶ್ವಂತ್ ಕೋಳಿಬೈಲು ಇವರುಗಳ ಅಧ್ಯಕ್ಷತೆಯಲ್ಲಿ ಪ್ರಸ್ತುತಗೊಳ್ಳಲಿದೆ. ಮಧ್ಯಾಹ್ನ ಗಂಟೆ 1-45ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಮಾಲಾ ಮೂರ್ತಿ ಕುಶಾಲನಗರ, ಶರ್ಮಿಳಾ ರಮೇಶ್, ಆಶಾ ಎಸ್.ಎಂ. ಸೋಮವಾರಪೇಟೆ, ಕೂಡು ಮಂಗಳೂರು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಪದ-ಪಾದ’ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.