ಬೆಂಗಳೂರು : ರಂಗ ಮಂಡಲ ಬೆಂಗಳೂರು, ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಕಲಾನಿಕೇತನ ಮತ್ತು ಸಾಮಾಜಿಕ ಸಾಂಸ್ಕೃತಿಕ ಸಂಘಟನೆ ರಂಗ ಚಂದಿರ (ರಿ.) ಜಂಟಿಯಾಗಿ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ಎಂಟನೇ ಕವಿಗೋಷ್ಠಿ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ಹೀಗೆ ಜನರೆಡೆಗೆ ಕಾವ್ಯ ಕೊಂಡುಹೋಗುವ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ರಾಜಧಾನಿ ಬೆಂಗಳೂರಿನಿಂದ ಸ್ವರ್ಗ ಸದೃಶ ನಾಡು ಕೊಡಗು ಜಿಲ್ಲೆಯ ಕಡೆಗೆ ‘ಕಾವ್ಯ ದೀವಟಿಗೆಯ ಪಯಣ’ ದಿನಾಂಕ 22 ಫೆಬ್ರವರಿ 2025ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನ ರವೀಂದ್ರ ಕಲಾಕ್ಷೇತ್ರದ ಆವರಣದ ನಯನ ಸಭಾಂಗಣದಲ್ಲಿ ನಡೆಯಲಿದೆ.
ಬೆಂಗಳೂರು ಗೋಷ್ಠಿಯ ಅಧ್ಯಕ್ಷತೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ಡಾ. ಸತ್ಯಮಂಗಲ ಮಹಾದೇವ ಇವರು ವಹಿಸಲಿದ್ದು, ಉದ್ಘಾಟಕರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜು ಭಾಗವಹಿಸಲಿದ್ದಾರೆ. ವಿಜಯಲಕ್ಷ್ಮಿ ಸತ್ಯಮೂರ್ತಿ, ನಂರುಶಿ, ಚಿತ್ತಣ್ಣ ಪಿ., ಭಾರತಮ್ಮ ಎ., ಸುಜಾತ ಎನ್., ಅರುಣ್ ಪುಷ್ಪದಂತ ಇವರಿಂದ ‘ಕವಿತಾ ವಾಚನ’ ಮತ್ತು ರವಿ ಇಗ್ಗಲೂರು, ವಾಸುಕಿ ಪ್ರಸಾದ್, ಸುಜಾತ ಎನ್., ಮಣಿ ಅವ್ಯೂಕ್ತ ಇವರಿಂದ ‘ಗೀತ ಗಾಯನ’ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.