ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕವಿ ಬಳಗ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ಈ ಕಾರ್ಯಕ್ರಮದ ಒಂಭತ್ತನೇ ಕವಿಗೋಷ್ಠಿಯನ್ನು ದಿನಾಂಕ 23 ಮಾರ್ಚ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು, ಒಳ ಆವರಣ ವಿಜಯ ನಗರ ಪ್ರೌಢ ಶಾಲಾ ವಿಭಾಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಡಾ. ಎಲ್. ಹನುಮಂತಯ್ಯ ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಹಿರಿಯ ಕವಯತ್ರಿ ಹಾಗೂ ಬರಹಗಾರರಾದ ಸ್ಮಿತಾ ಅಮೃತರಾಜ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 12-00 ಗಂಟೆಗೆ ಕವಿಗೋಷ್ಠಿ – 01 ಚಂದ್ರಶೇಖರ ಬಾ ಹಡಪದ ಹಾಗೂ ಮಧ್ಯಾಹ್ನ ಗಂಟೆ 2-30ಕ್ಕೆ ಕವಿಗೋಷ್ಠಿ – 02 ಡಾ. ಬಾಲಗುರುಮೂರ್ತಿ ಇವರುಗಳ ಅಧ್ಯಕ್ಷತೆಯಲ್ಲಿ ಪ್ರಸ್ತುತಗೊಳ್ಳಲಿದೆ. ಮಧ್ಯಾಹ್ನ ಗಂಟೆ 1-45ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಕುಂಟನಕುಂಟೆ ಅಶ್ವಥ್ ನಾರಾಯಣ, ಡಾ. ಡಿ. ಕೆಂಪಣ್ಣ ರಬ್ಬನಹಳ್ಳಿ, ವೆ. ಜಿ. ಅರುಣ್, ಎ. ನಾರಾಯಣಸ್ವಾಮಿ, ರಾಧಾ ಆವತಿ ಮುನಿರಾಜು ವೆಂಕಟಗಿರಿ ಕೋಟೆ, ಮಹೇಶ್ ದೇವರ ಮಳ್ಳೂರು, ನಟರಾಜ್ ಅರವನಹಳ್ಳಿ, ದ್ಯಾವಪ್ಪ ಕಾರಹಳ್ಳಿ ಹೊಸಳ್ಳಿ ವಾಸುದೇವ್, ಎ. ಶಿವರಾಜು ಸುರದೇನುಪುರ ಇವರಿಂದ ‘ಪದ-ಪಾದ’ ನಾಡಗೀತೆ ಹಾಗೂ ಭಾವಗೀತೆ ಗಾಯನ, ಬಳಿಕ 3-30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.