ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಜಿಲ್ಲೆ ಮತ್ತು ರಂಗಮಂಡಲ ಬೆಂಗಳೂರು ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ದ್ವಿತೀಯ ಕವಿಗೋಷ್ಠಿ ಜನರೆಡೆಗೆ ಕಾವ್ಯ ಯಾನದ ಪಯಣ ಧಾರವಾಡದ ಕಡೆಗೆ ದಿನಾಂಕ 24 ಆಗಸ್ಟ್ 2024ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಗೃಹದಲ್ಲಿ ನಡೆಯಲಿದೆ.
ಖ್ಯಾತ ಕವಿಗಳು, ಸಂಸ್ಕೃತಿ ಚಿಂತಕರು, ಗುರುಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹಾಗೂ ಖ್ಯಾತ ಕವಿಗಳಾದ ಡಾ. ಎಚ್.ಎಲ್. ಪುಷ್ಪ ಹಾಗೂ ಕವಿಮಿತ್ರರು ಹಾಗೂ ಗಾಯಕರು ಬೆಂಗಳೂರಿನ ಕಾರ್ಯಕ್ರಮವನ್ನು ಚಂದಗೊಳಿಸಲಿದ್ದು, ಕವಿತಾ ವಾಚನ ಮತ್ತು ಗೀತ ಗಾಯನ ಪ್ರಸ್ತುತಗೊಳ್ಳಲಿದೆ. ಡಾ. ಬಸವರಾಜ ಸಾದರ ಹಾಗೂ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಇವರ ಸಾರಥ್ಯದಲ್ಲಿ ರಾಜಧಾನಿ ಬೆಂಗಳೂರಿನಿಂದ ಧಾರವಾಡದತ್ತ ‘ಕಾವ್ಯ ದೀವಟಿಗೆ’ಯ ಪಯಣ ಸಾಗಲಿದೆ.
ರಂಗಮಂಡಲ ಬೆಂಗಳೂರು, ರಂಗ ಪರಿಸರ ಮತ್ತು ಚೇತನ ಫೌಂಡೇಷನ್ ಆಯೋಜಿಸಿರುವ ಪ್ರತಿ ಜಿಲ್ಲೆ ಹಾಗೂ ಹೊರನಾಡ ಕನ್ನಡ ಪ್ರದೇಶಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿ ತಿಂಗಳ 3ನೇ ಭಾನುವಾರ ಆಯೋಜಿಸುವ ಕವಿಗೋಷ್ಠಿ ‘ಕಾವ್ಯ ಸಂಸ್ಕೃತಿ ಯಾನ’ ದ್ವಿತೀಯ ಕವಿಗೋಷ್ಠಿಯನ್ನು ದಿನಾಂಕ 25 ಆಗಸ್ಟ್ 2024ರಂದು ಬೆಳಗ್ಗೆ 10-30ರಿಂದ ಧಾರವಾಡದ ಕ.ಸಾ.ಪ. ಆವರಣ, ಸಾಹಿತ್ಯ ಭವನ, ದ.ರಾ. ಬೇಂದ್ರೆ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಬಸವರಾಜ ಸಾದರ ಇವರು ಈ ಸಮಾರಂಭದ ಸರ್ವಾಧ್ಯಾಕ್ಷತೆ ವಹಿಸಿದ್ದು, ಹಿರಿಯ ಕವಿಗಳಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಇವರು ಉದ್ಘಾಟನೆ ಮಾಡಲಿರುವರು. ಬೆಳಗ್ಗೆ 11.30ರಿಂದ ಕವಿಗೋಷ್ಠಿ 1 ಮತ್ತು ಮಧ್ಯಾಹ್ನ 2-00 ಗಂಟೆಗೆ ಕವಿಗೋಷ್ಠಿ 2 ಪ್ರಸ್ತುತಗೊಳ್ಳಲಿದ್ದು, ಬಳಿಕ ಸರ್ವಾಧ್ಯಾಕ್ಷರೊಂದಿಗೆ ಸಂವಾದ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಈ ಯಾನದಲ್ಲಿ ನಾಡಿನ ಖ್ಯಾತ ವಿದ್ವಾಂಸರುಗಳು, ಕವಿಗಳು, ಚಿಂತಕರು, ಗಾಯಕರು, ಕಲಾವಿದರು ಭಾಗವಹಿಸುತ್ತಿದ್ದಾರೆ.