ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ಜಾಗೃತಿ ಟ್ರಸ್ಟ್ (ರಿ.) ಶಾಂತಿನಗರ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ಆರನೇ ಕವಿಗೋಷ್ಠಿ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ಹೀಗೆ ಜನರೆಡೆಗೆ ಕಾವ್ಯ ಕೊಂಡುಹೋಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ರಾಜಧಾನಿ ಬೆಂಗಳೂರಿನಿಂದ ಶರಣರ ನಾಡು ಬೀದರ ಕಡೆಗೆ ‘ಕಾವ್ಯ ದೀವಟಿಗೆಯ ಪಯಣ’ವು ದಿನಾಂಕ 28 ಡಿಸೆಂಬರ್ 2024ರಂದು ಮಧ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ಶಾಂತಿನಗರ, ಟಿ.ವಿ. 9 ಚಾನಲ್ ಬಳಿ, ವುಡ್ ಬ್ಯಾಂಕ್ ಎದುರು ಇರುವ ಪುನೀತ್ ರಾಜಕುಮಾರ ಭವನದಲ್ಲಿ ನಡೆಯಲಿದೆ.
ಬೆಂಗಳೂರು ಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಹಾಗೂ ಬರಹಗಾರ್ತಿ ಡಾ. ವಾಣಿ ಸಂದೀಪ್ ಇವರು ವಹಿಸಲಿದ್ದು, ಉದ್ಘಾಟಕರಾಗಿ ಕವಿ ಹಾಗೂ ಅಂಕಣಗಾರ್ತಿ ಎನ್. ಸಂಧ್ಯಾ ರಾಣಿ ಇವರು ಭಾಗವಹಿಸಲಿದ್ದಾರೆ. ನಾಡಿನ ಖ್ಯಾತ ಕವಿಗಳಿಂದ ‘ಕವಿತಾ ವಾಚನ’ ಮತ್ತು ‘ಪದ ಪಾದ’ ಕಾರ್ಯಕ್ರಮ ನಡೆಯಲಿದೆ.