ಕೋಟ: ಹೊಸದಿಗಂತ ದಿನಪತ್ರಿಕೆ ಮತ್ತು ಡಾ. ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಸಂಯುಕ್ತ ಅಶ್ರಯದಲ್ಲಿ ಕಾವ್ಯ ಸಿಂಧು ಕಡಲತಡಿಯಲ್ಲ ಕವಿ ಸಮ್ಮಿಲನ ಕಾರ್ಯಕ್ರಮ ದಿನಾಂಕ 07 ಅಕ್ಟೋಬರ್ 2025ರಂದು ಸಾಲಿಗ್ರಾಮದಲ್ಲಿ ನಡೆಯಿತು.
ಸಮ್ಮಿಲನ ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹಬೌದ್ಧಿಕ ಪ್ರಮುಖ್ ಸುಧೀರ್ “ಕವಿತಾ ರಚನೆಯಲ್ಲಿ ಸಾಮಾಜಿಕ ಕಳಕಳಿ ಇರಬೇಕು. ಗೀತೆಗಳು ದೇಶ, ಸಮಾಜ, ಧರ್ಮದ ಬಗ್ಗೆ ಭಾವ ಜಾಗರಣ ಮಾಡಬೇಕು” ಎಂದರು. ಸಮಾರಂಭದಲ್ಲಿ ಕವಿತಾ ರಚನೆಯಲ್ಲಿ ಸಮಷ್ಟಿ ಚಿಂತನೆ: ಅಂದು- ಇಂದು ಮತ್ತು ಕವಿತಾ ವಾಚನದಲ್ಲಿ ತತ್ವಾಭಿವ್ಯಕ್ತಿ ಮತ್ತು ರಸಾಭಿವ್ಯಕ್ತಿ – ಈ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆದವು. ರಾಜ್ಯದ ವಿವಿಧ ಕಡೆಗಳಿಂದ 70 ಕವಿಗಳು ಪಾಲ್ಗೊಂಡಿದ್ದರು. 63ಕವಿಗಳು ತಾವು ರಚಿಸಿದ ಕವನಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಡಾ. ಶಿವರಾಮ ಕಾರಂತರ ಸಂಸ್ಮರಣೆ ನಡೆಸಲಾಯಿತು.
ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ. ಎಸ್. , ಡಾ. ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಬಿ. ಎಂ. ಗುರುರಾಜ್ ರಾವ್ ಉಪಸ್ಥಿತರಿದ್ದರು.
ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ. ಎಸ್. , ಡಾ. ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಬಿ. ಎಂ. ಗುರುರಾಜ್ ರಾವ್ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleರವೀಂದ್ರ ಕಲಾಕ್ಷೇತ್ರದಲ್ಲಿ ‘ರಾಷ್ಟ್ರೀಯ ನೃತ್ಯ ಉತ್ಸವ’ | ಅಕ್ಟೋಬರ್ 12
Next Article ಅಭಿನಯ ಭಾರತಿ ವತಿಯಿಂದ ದತ್ತಿ ಉಪನ್ಯಾಸ | ಅಕ್ಟೋಬರ್ 11