ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ದಿನಾಂಕ 06 ಸಪ್ಟೆಂಬರ್ 2025ರಂದು ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-6’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಆಯೋಜಿಸಲಾಗಿತ್ತು.
ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರಾಸ್ತಾವಿಕವಾಗಿ ಮಾತಾನಾಡಿ ಅಕಾಡೆಮಿಗೆ ಕೊಂಕಣಿ ಜನರು ಯಾವಾಗಲೂ ಹತ್ತಿರವಿರಬೇಕು ಎನ್ನುವ ಉದ್ದೇಶದಿಂದ ಹಾಗೂ ಕೊಂಕಣಿ ಯುವ ಕವಿಗಳಿಗೆ ವೇದಿಕೆ ದೊರೆಯಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಇದ್ದೇವೆ. ಪ್ರತಿಯೊಬ್ಬ ಇದರ ಪ್ರಯೋಜನ ಪಡೆಯಬೇಕೆಂದು ಕರೆಕೊಟ್ಟರು.
ಕೊಂಕಣಿಯ ಹಿರಿಯ ಸಾಹಿತಿಗಾರರಾದ ಶ್ರೀ ಹೇಮಾಚಾರ್ಯಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ “ಯಾವುದೇ ಒಬ್ಬ ನಾಟಕಕಾರ, ನಟ, ನೃತ್ಯಗಾರ, ಚಿತ್ರಕಾರ ಆಗಬೇಕಾದರೂ ಅವನು ಹುಟ್ಟುವಾಗಲೇ ಕವಿಯಾಗಿ ಹುಟ್ಟಬೇಕು. ಕಾದಂಬರಿ, ಸಣ್ಣಕಥೆ, ಕಥೆ, ಇವುಗಳ ಮುಂದೆ ಕವಿತೆಗಳಿಗೆ ಅದರದ್ದೇ ಆದ ಪ್ರಾಶಸ್ತ್ಯವಿದೆ. ಕವಿತೆಗಳನ್ನು ರಚಿಸುವವನು ಜೀವನದಲ್ಲಿ ಸಾಧನೆ ಮಾಡುತ್ತಾನೆ” ಎಂದು ಅವರು ಕವಿಯಾದ ಬಗ್ಗೆ ವಿವರಿಸಿದರು.
ಶ್ರೀ ರೊನಾಲ್ಡ್ ಕ್ರಾಸ್ತಾ ಇವರು ಕವಿಗೋಷ್ಟಿಯನ್ನು ನಡೆಸಿದರು. ಶ್ರೀ ರೋಶನ್ ಎಮ್. ಕಾಮತ್ ವಾಮಂಜೂರು, ಕು. ಅಲ್ರೀಶಾ ರೊಡ್ರಿಗಸ್, ಶ್ರೀಮತಿ ಚಂದ್ರಿಕಾ ಮಲ್ಯ, ಶ್ರೀ ಸ್ಟೆಫನ್ ವಾಸ್ ಕೆಲರಾಯ್, ಶ್ರೀಮತಿ ಎಸ್. ಜಯಶ್ರೀ ಶೆಣೈ, ಶ್ರೀ ಪೆದ್ರು ಪ್ರಭು ತಾಕೊಡೆ (ಪೀಟರ್ ಡಿಸೋಜ), ಶ್ರೀಮತಿ ಸೋನಿಯಾ ಡಿಕೋಸ್ತ, ಶ್ರೀ ಕೆರನ್ ಮಾಡ್ತಾ, ಶ್ರೀ ವಲೇರಿಯನ್ ಮೊರಾಸ್ ತಾಕೊಡೆ, ಶ್ರೀ ಚಾರ್ಲ್ಸ್ ಲೋಬೊ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು.