ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ ‘ಕಾವ್ಯಾಂ ವ್ಹಾಳೊ-8’ ಶೀರ್ಷಿಕೆಯಡಿ ಕವಿಗೋಷ್ಟಿಯು ದಿನಾಂಕ 08 ನವೆಂಬರ್ 2025ರಂದು ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಪ್ರಾಸ್ತಾವಿಕವಾಗಿ ಮಾತಾನಾಡಿ “ಅಕಾಡೆಮಿಯು ಪ್ರತಿ ತಿಂಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಓರ್ವ ಕೊಂಕಣಿ ವ್ಯಕ್ತಿಗೆ ಗೌರವ ಸಲ್ಲಿಸುತ್ತಾ ಬಂದಿದೆ. ಕವಿಗಳಿಗೆ ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಲು ಅವಕಾಶ ಒದಗಿಸುವ ಜೊತೆ ಸಾಹಿತಿಗಳ ಜೊತೆ ಸಂವಾದ ನಡೆಸಿ ಅವರನ್ನು ಸಮಾಜಕ್ಕೆ ಪರಿಚಯಿಸುತ್ತಿದೆ. ಈ ಕವಿಗೋಷ್ಟಿಯು ಪ್ರತಿ ಕವಿಗಳಿಗೆ ವೇದಿಕೆಯನ್ನು ಸೃಷ್ಟಿಸಿ, ಅವರನ್ನು ಪ್ರೋತ್ಸಾಹಿಸುತ್ತಿದೆ” ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಸನ್ಮಾನಿಸಿದ ಖ್ಯಾತ ನಾಟಕಕಾರ ಹಾಗೂ ಚಲನಚಿತ್ರ ನಿರ್ಮಾಪಕರಾದ ಶ್ರೀ ಹೆನ್ರಿ ಡಿಸಿಲ್ವರವರು ಮಾತಾನಾಡಿ, “ನಾನು ಮಾಡಿದ ಸಾಧನೆಗಳನ್ನು ಗಮಿನಿಸಿ ಅಕಾಡೆಮಿಯು ನನಗೆ ಗೌರವ ನೀಡಿದ್ದು, ತುಂಬಾ ಸಂತೋಷವಾಗಿದೆ. ನಿಮ್ಮ ಸಹಕಾರದಿಂದ, ನಾನು ಮಾಡಿದ ಸಿನೆಮಾಗಳು ಯಶಸ್ವಿಯಾಗಿದೆ” ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಮುಖ್ಯ ಅತಿಥಿಯಾದ ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಕೊಂಪದವು ಇವರು “ಕೊಂಕಣಿ ಅಕಾಡೆಮಿಯು ಕುಡುಬಿ ಜಾನಪದ ಸಮಾವೇಶವನ್ನು ಆಯೋಜಿಸಿದ್ದರಿಂದ, ಕುಡುಬಿ ಸಮಾಜದ ಜನತೆಗೆ ಹಾಗೂ ಸಂಘಟನೆಗಳಿಗೆ ಬಹಳಷ್ಟು ಅಭಿಮಾನ ಪಡುವಂತಾಗಿದೆ. ಈ ಸಮಾವೇಶವನ್ನು ಹಮ್ಮಿಕೊಂಡ ಕೊಂಕಣಿ ಅಕಾಡೆಮಿಗೆ ಕುಡುಬಿ ಸಮಾಜದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪ್ರಸ್ತುತ ಅಕಾಡೆಮಿಯ ಅಧ್ಯಕ್ಷರು ನಮ್ಮೆಲ್ಲಾ ಕುಡುಬಿ ಸಮಾಜದ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ” ಎಂದು ಅಧ್ಯಕ್ಷರನ್ನು ಪ್ರಶಂಸಿಸಿದರು.

ಕೊಂಕಣಿಯ ಖ್ಯಾತ ಕವಿ, ಪೊಯೆಟಿಕಾ ಪಂಗಡದ ಮುಖ್ಯಸ್ಥರಾದ ಶ್ರೀ ನವೀನ್ ಪಿರೇರಾರವರು ಹಲವು ಆಯಾಮಗಳಲ್ಲಿ ಕವಿತೆಗಳನ್ನು ರಚಿಸುವ ಬಗ್ಗೆ ವಿವರಣೆ ನೀಡಿದರು. ಶ್ರೀಮತಿ ಐರಿನ್ ರೆಬೆಲ್ಲೊ ಇವರು ಕವಿಗೋಷ್ಟಿಯನ್ನು ನಡೆಸಿಕೊಟ್ಟರು. ಶ್ರೀ ಮಾರ್ಸೆಲ್ ಡಿಸೋಜ (ಮಾಚ್ಚಾ ಮಿಲಾರ್), ಶ್ರೀಮತಿ ಅಸುಂತಾ ಡಿಸೋಜ, ಕುಮಾರಿ ಸೃಜನಾ ಮಥಾಯಸ್, ಶ್ರೀಮತಿ ಚಂದ್ರಿಕಾ ಮಲ್ಯ, ಶ್ರೀಮತಿ ಫ್ಲಾವಿಯಾ ಅಲ್ಬುಕರ್ಕ್, ಶ್ರೀ ರವೀಂದ್ರ ನಾಯಕ ಸಣ್ಣಕ್ಕಿಬೆಟ್ಟು, ಶ್ರೀ ಪ್ರವೀಣ್ ತಾವ್ರೊ, ಶ್ರೀ ಜೀವನ್ ಕ್ರಾಸ್ತಾ, (ಜೀವ್ ನಿಡ್ಡೋಡಿ), ಶ್ರೀ ಲ್ಯಾನ್ಸಿ ಸಿಕ್ವೇರ ಸುರತ್ಕಲ್ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ಸಮರ್ಥ್ ಭಟ್ ಕಾರ್ಯಕ್ರಮವನ್ನು ನಿರೂಪಿಸಿ, ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೊ, ಅಕ್ಷತಾ ನಾಯಕ್ ಉಪಸ್ಥಿತರಿದ್ದರು.
