ಬದಿಯಡ್ಕ : ಸಮತಾ ಸಾಹಿತ್ಯವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಹಯೋಗದೊಂದಿಗೆ ಖ್ಯಾತ ಕವಿ ಹಾಗೂ ಕನ್ನಡ ಹೋರಾಟಗಾರರಾದ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಇವರ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 08-06-2024ರ ಶನಿವಾರದಂದು ಬದಿಯಡ್ಕದ ಬೋಳುಕಟ್ಟೆ ಇಲ್ಲಿರುವ ಹಿರಿಯ ನಾಗರಿಕರ ವಿಶ್ರಾಂತಿ ಗೃಹ ‘ಹಗಲು ಮನೆ’ಯಲ್ಲಿ ಅಪರಾಹ್ನ ಘಂಟೆ 2.30ರಿಂದ ನಡೆಯಲಿದೆ.
ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಪಿಲಿಂಗಲ್ಲು ಕೃಷ್ಣ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಕಯ್ಯಾರರ ಬದುಕು ಹಾಗೂ ಬರಹ’ದ ಕುರಿತು ನಿವೃತ್ತ ಪ್ರಾಂಶುಪಾಲರಾದ ಡಾ. ಬೇ. ಸಿ. ಗೋಪಾಲಕೃಷ್ಣ ಉಪನ್ಯಾಸ ನೀಡಲಿದ್ದಾರೆ. ಈ ಸಮಾರಂಭದಲ್ಲಿದಲ್ಲಿ ಅತಿಥಿಗಳಾಗಿ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಅಧ್ಯಕ್ಷರಾದ ಶ್ರೀ ಈಶ್ವರ ಭಟ್ ಪೆರ್ಮುಖ, ಕ. ಸಾ. ಪ. ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ವಿಶಾಲಾಕ್ಷ ಮತ್ರಕಳ ಹಾಗೂ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇದರ ಕಾರ್ಯದರ್ಶಿಯಾದ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕಯ್ಯಾರರ ಕಾವ್ಯದ ವಾಚನ ಹಾಗೂ ಗಾಯನ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಶ್ರೀಮತಿ ವನಜಾಕ್ಷಿ ಚಂಬ್ರಕಾನ, ಶ್ರೀಮತಿ ದಿವ್ಯಾ ಗಟ್ಟಿ ಪರಕ್ಕಿಲ, ಶ್ರೀಮತಿ ಚಂದ್ರಕಲಾ ನೀರಾಳ, ಶ್ರೀ ವಸಂತ ಬಾರಡ್ಕ, ಶ್ರೀಮತಿ ಸುಜಾತ ಕನಿಯಾಲ ಹಾಗೂ ಶ್ರೀಮತಿ ಬಬಿತಾ ಆಚಾರ್ಯ ಮತ್ತು ಬಳಗದವರು ನಡೆಸಿಕೊಡಲಿದ್ದಾರೆ. ಹಾಗೂ ಈ ಕಾರ್ಯಕ್ರಮವನ್ನು ಶ್ರೀ ಜಯ ಮಣಿಯಂಪಾರೆ ನಿರೂಪಿಸಲಿದ್ದಾರೆ.

