ಬೆಂಗಳೂರು : ಖಿದ್ಮಾ ಫೌಂಡೇಶನ್ ಕರ್ನಾಟಕ ಹಾಗೂ ಅನ್ನದಾತ ಪ್ರಕಾಶನದಡಿಯಲ್ಲಿ ಭಾರತದ ಸ್ವಾತಂತ್ರೋತ್ಸವದ ಪ್ರಯುಕ್ತ ಪದವಿ ಪೂರ್ವದಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಖಿದ್ಮಾ ಫೌಂಡೇಶನ್ ಅಧ್ಯಕ್ಷರಾದ ಆಮಿರ್ ಅಶ್ಅರೀ ಬನ್ನೂರು ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು 18 ರಿಂದ 26 ವಯಸ್ಸಿನವರಿಗೆ ಮಾತ್ರ ಅವಕಾಶವಿದ್ದು, ಮೊದಲ ಹಂತದ ಸ್ಪರ್ಧೆಯು ಆನ್ಲೈನ್ ಮೂಲಕ ಮಡೆಯಲಿದೆ. ಹೆಸರು ನೊಂದಾಯಿಸಲು ಜೂನ್ 30 ಕೊನೆಯ ದಿನವಾಗಿದೆ. ಸ್ಪರ್ಧೆಗೆ ಸಂಬಂಧಪಟ್ಟ ಹೆಚ್ಚಿನ ವಿವರಣೆಗಾಗಿ 7349197313 ನಂಬರಿಗೆ ವಾಟ್ಸಪ್ ಮಾಡಬಹುದು.

