ಕಿನ್ನಿಗೋಳಿ: ಯಕ್ಷಲಹರಿ(ರಿ.) ಮತ್ತು ಯುಗಪುರುಷ ಕಿನ್ನಿಗೋಳಿ ಪ್ರಸ್ತುತಪಡಿಸುವ ಯಕ್ಷಲಹರಿಯ 33ನೇ ವಾರ್ಷಿಕ ಸಂಭ್ರಮ-2023 ‘ಚರಿತಂ ಮಹಾತ್ಮನಃ’ ಯಕ್ಷಗಾನ ವಾಗ್ವೈಭವದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 31-07-2023ರಂದು ನಡೆಯಲಿದೆ. 31-07-2023ರಿಂದ 08-08-2023ರ ವರೆಗೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಸಂಜೆ ಗಂಟೆ 5-00 ರಿಂದ 8.30ರ ವರೆಗೆ ‘ಯಕ್ಷಗಾನ ವಾಗ್ವೈಭವ’ ತಾಳಮದ್ದಳೆ ಕಾರ್ಯಕ್ರಮವು ನಡೆಯಲಿದೆ.
ದಿನಾಂಕ 31-07-2023ನೇ ಸೋಮವಾರ ಪ್ರಸಂಗ ‘ಧ್ರುವ ಚರಿತ್ರೆ’. ಭಾಗವತರಾಗಿ ಪ್ರದೀಪ್ ಗಟ್ಟಿ ಹಾಗೂ ದೇವರಾಜ ಆಚಾರ್ಯ. ಚಂಡೆ ಮತ್ತು ಮದ್ದಳೆಯಲ್ಲಿ ರಾಮಪ್ರಕಾಶ ಕಲ್ಲೂರಾಯ ಹಾಗೂ ಸವಿನಯ ನೆಲ್ಲಿತೀರ್ಥ. ಅರ್ಥಧಾರಿಗಳಾಗಿ ವಿಷ್ಣು ಶರ್ಮ ವಾಟೆಪಡ್ಪು, ಎಂ.ಕೆ.ರಮೇಶ ಆಚಾರ್ಯ, ನಾ.ಕಾರಂತ ಪೆರಾಜೆ, ಶೇಣಿ ವೇಣುಗೋಪಾಲ, ವೆಂಕಟರಮಣ ಕೆರೆಗದ್ದೆ ಮತ್ತು ಪಶುಪತಿ ಶಾಸ್ತ್ರಿ ಭಾಗವಹಿಸಲಿದ್ದಾರೆ.
ದಿನಾಂಕ 1-08-2023ನೇ ಮಂಗಳವಾರ ಪ್ರಸಂಗ ‘ನಳ ಚರಿತ್ರೆ’. ಭಾಗವತರಾಗಿ ರಾಮಕೃಷ್ಣ ಮಯ್ಯ, ಸಿರಿಬಾಗಿಲು. ಚಂಡೆ ಮತ್ತು ಮದ್ದಳೆಯಲ್ಲಿ ಸಕ್ಕರೆಮೂಲೆ ಗಣೇಶ ಭಟ್ ಹಾಗೂ ವೇದವ್ಯಾಸ ರಾವ್ ಕುತ್ತೆತ್ತೂರು. ಅರ್ಥಧಾರಿಗಳಾಗಿ ಸರ್ಪಂಗಳ ಈಶ್ವರ ಭಟ್, ರವಿರಾಜ ಪನೆಯಾಲ, ಸಂಜಯ ಕುಮಾರ್ ಶೆಟ್ಟಿ, ವಿನಯ ಆಚಾರ್, ಸೇರಾಜೆ ಸೀತಾರಾಮ ಭಟ್, ದಿನಕರ ಮೆಂದ ಮತ್ತು ಶ್ರೀವತ್ಸ ಭಾಗವಹಿಸಲಿದ್ದಾರೆ.
ದಿನಾಂಕ 2-08-2023ನೇ ಬುಧವಾರ ಪ್ರಸಂಗ ‘ರುಕ್ಮಾಂಗದ ಚರಿತ್ರೆ’. ಭಾಗವತರಾಗಿ ದೇವಿಪ್ರಸಾದ ಆಳ್ವ ತಲಪಾಡಿ ಹಾಗೂ ಶಶಿಧರ ರಾವ್ ಚಿತ್ರಾಮ. ಚೆಂಡೆ ಮತ್ತು ಮದ್ದಳೆಯಲ್ಲಿ ಗಣೇಶ್ ಮಯ್ಯ, ರಾಜೇಶ್.ಐ ಹಾಗೂ ರಾಮ ಹೊಳ್ಳ ತಡಂಬೈಲು. ಅರ್ಥಧಾರಿಗಳಾಗಿ ಗಣರಾಜ ಕುಂಬ್ಳೆ, ದಿನೇಶ ಶೆಟ್ಟಿ ಕಾವಳಕಟ್ಟೆ, ರಾಮ ಭಟ್ ಕಾರ್ಕಳ, ಹರೀಶ್ ಬೊಳಂತಿಮೊಗರು, ಕದ್ರಿ ನವನೀತ ಶೆಟ್ಟಿ, ಬಾಲಕೃಷ್ಣ ಭಟ್ ಪುತ್ತಿಗೆ, ಅಶ್ವಿನಿ ಶ್ರೀವತ್ಸ ಮತ್ತು ಉಮೇಶ್ ನೀಲಾವರ ಭಾಗವಹಿಸಲಿದ್ದಾರೆ.
ದಿನಾಂಕ 3-08-2023ನೇ ಗುರುವಾರ ಪ್ರಸಂಗ ‘ಪ್ರಹ್ಲಾದ ಚರಿತ್ರೆ’. ಭಾಗತರಾಗಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್. ಚಂಡೆ ಮತ್ತು ಮದ್ದಳೆಯಲ್ಲಿ ಮುರಳೀಧರ ಭಟ್ ಕಟೀಲು ಹಾಗೂ ಮುರಾರಿ ಕಡಂಬಳಿತ್ತಾಯ. ಅರ್ಥಧಾರಿಗಳಾಗಿ ವೇ.ಮೂ.ಕಮಲದೇವಿಪ್ರಸಾದ ಅಸ್ರಣ್ಣ, ಜಬ್ಬಾರ್ ಸಮೋ ಸಂಪಾಜೆ, ವಾದಿರಾಜ ಕಲ್ಲೂರಾಯ, ಮುಖ್ಯಪ್ರಾಣ ಕಿನ್ನಿಗೋಳಿ, ವಿನಯ ಆಚಾರ್ ಹೊಸಬೆಟ್ಟು, ಮಹೇಶ್ ಸಾಣೂರು ಮತ್ತು ಶರತ್ ಶೆಟ್ಟಿ ಸಂಕಲಕರಿಯ ಭಾಗವಹಿಸಲಿದ್ದಾರೆ.
ದಿನಾಂಕ4-08-2023ನೇ ಶುಕ್ರವಾರ ಪ್ರಸಂಗ ‘ವಾಮನ ಚರಿತ್ರೆ’. ಭಾಗವತರಾಗಿ ಮಹೇಶ್ ಕನ್ಯಾಡಿ ಹಾಗೂ ಶಶಿಧರ ರಾವ್ ಚಿತ್ರಾಪು. ಚಂಡೆ ಮತ್ತು ಮದ್ದಳೆಯಲ್ಲಿ ಭಾಸ್ಕರ ಭಟ್ ಕಟೀಲು ಹಾಗೂ ರಾಮ ಹೊಳ್ಳ ತಡಂಬೈಲು ಅರ್ಥಧಾರಿಗಳಾಗಿ ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಸದಾಶಿವ ಆಳ್ವ ತಲಪಾಡಿ, ವಿಶ್ವನಾಥ ಸಾಂತೂರು, ದೀಪ್ತಿ ಬಾಲಕೃಷ್ಣ ಭಟ್ ಮತ್ತು ಉಮೇಶ್ ನೀಲಾವರ ಭಾಗವಹಿಸಲಿದ್ದಾರೆ.
ದಿನಾಂಕ 5-08-2023ನೇ ಶನಿವಾರ ಪ್ರಸಂಗ ‘ಕೌಶಿಕ ಚರಿತ್ರೆ’. ಭಾಗವತರಾಗಿ ಬಲಿಪ ಶಿವಶಂಕರ ಹಾಗೂ ಪುರುಷೋತ್ತಮ ಭಟ್ ನಿಡುವಜೆ. ಚಂಡೆ ಮತ್ತು ಮದ್ದಳೆ ದಯಾನಂದ ಶೆಟ್ಟಗಾರ್ ಮಿಜಾರು, ದೇವಾನಂದ ಭಟ್ ಬೆಳುವಾಯಿ. ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ಶಾಂತಾರಾಮ ಪ್ರಭು ನಿಟ್ಟೂರು, ಭಾಸ್ಕರ ರೈ ಕುಕ್ಕುವಳ್ಳಿ, ರಮಣ ಅಚಾರ್ಯ ಕಾರ್ಕಳ, ವಸಂತ ದೇವಾಡಿಗ, ಶ್ರೀವತ್ಸ ಮತ್ತು ರಘುನಾಥ ಕಾಮತ್ ಭಾಗವಹಿಸಲಿದ್ದಾರೆ.
ದಿನಾಂಕ 6-08-2023ನೇ ಆದಿತ್ಯವಾರ ಪೂರ್ವಾಹ್ನ ಘಂಟೆ 10.00 ರಿಂದ 1.30ರ ವರೆಗೆ ಪ್ರಸಂಗ ‘ಹರಿಶ್ಚಂದ್ರ ಚರಿತ್ರೆ’. ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ. ಚಂಡೆ ಮತ್ತು ಮದ್ದಳೆಯಲ್ಲಿ ಚೈತನ್ಯ ಪದ್ಯಾಣ, ಕೃಷ್ಣಪ್ರಕಾಶ ಉಳಿತ್ತಾಯ ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾ ಭಟ್, ಡಾ| ಪ್ರಭಾಕರ ಜೋಷಿ, ಸಂಕದಗುಂಡಿ ಗಣಪತಿ ಭಟ್, ಪಶುಪತಿ ಶಾಸ್ತ್ರಿ, ಬಂಟ್ವಾಳ ಜಯರಾಮ ಆಚಾರ್ಯ, ಸಾವಿತ್ರಿ ಭಾರದ್ವಾಜ್ ಮತ್ತು ಸಾಯಿನಾಥ ಶೆಟ್ಟಿ ಭಾಗವಹಿಸಲಿದ್ದಾರೆ.
ಅದೇ ದಿನ ಮಧ್ಯಾಹ್ನ ಘಂಟೆ 02.30ರಿಂದ 04.00ರವರೆಗೆ ಪ್ರಸಂಗ ‘ಚಂದ್ರಹಾಸ ಚರಿತ್ರೆ’. ಭಾಗವತರಾಗಿ ರಘುರಾಮ ಹೊಳ್ಳ ಪುತ್ತಿಗೆ, ಚಂಡೆ ಮತ್ತು ಮದ್ದಳೆ ಗುರುಪ್ರಸಾದ ಬೊಳಿಂಜಡ್ಕ ಹಾಗೂ ವೇದವ್ಯಾಸ ರಾವ್ ಕುತ್ತೆತ್ತೂರು.
ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಪ್ರದೀಪ ಸಾಮಗ ಮತ್ತು ವಸಂತ ದೇವಾಡಿಗ ಭಾಗವಹಿಸಲಿದ್ದಾರೆ.