ಉಡುಪಿ : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ಮಂಗಳೂರು ಇದರ ಈ ಆರ್ಥಿಕ ವರುಷದ ಐದನೇ ಕಾರ್ಯಕ್ರಮ ಕಿಶೋರ ಪ್ರತಿಭೋತ್ಸವ 2023. ಕಾರ್ಯಕ್ರಮವು ದಿನಾಂಕ 10-09-2023ರ ಆದಿತ್ಯವಾರದಂದು ಸಂಜೆ ಉಡುಪಿಯ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಿತು.
ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಳದ ಧರ್ಮದರ್ಶಿಗಳಾಗಿರುವ ಡಾ.ನಿ.ಬಿ.ವಿಜಯಬಲ್ಲಾಳ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, “ದೇವಸ್ಥಾನಗಳಲ್ಲಿ ಲಲಿತ ಕಲೆಗಳಿಗೆ ಯಾವತ್ತೂ ಅವಕಾಶ ಪ್ರೋತ್ಸಾಹ ನಮ್ಮ ತಂದೆಯ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಇನ್ನೂ ಮುಂದೆಯೂ ಇಂತಹ ಮಕ್ಕಳ ಕಾರ್ಯಕ್ರಮಕ್ಕೆ ಈ ವೇದಿಕೆ ಸದಾ ಇದೆ.” ಎಂದು ಪರಿಷತ್ತಿನ ಮುಂದಿನ ಕಾರ್ಯಕ್ರಮದ ಬಗ್ಗೆ ಪ್ರೋತ್ಸಾಹದ ನುಡಿಯ ಮುಖಾಂತರ ಶುಭ ಹಾರೈಸಿದರು. ಹದಿನಾರು ಕಿಶೋರ ಪ್ರತಿಭೆಗಳಿಗೆ ಮೆಚ್ಚು ಪತ್ರವನ್ನು ಕೊಟ್ಟು ಗೌರವಿಸಿ, ಪರಿಷತ್ತಿನ ಮಾರ್ಗದರ್ಶಕರಾದ ವಿದ್ವಾನ್ ಪಿ. ಕಮಲಾಕ್ಷ ಆಚಾರ್ ಮಾತನಾಡಿದರು. ಪರಿಷತ್ತಿನ ಉಪಾಧ್ಯಕ್ಷರಾದ ವಿದ್ವಾನ್ ಚಂದ್ರಶೇಖರ ನಾವಡ, ಶ್ರೀಮತಿ ರಾಜಶ್ರೀ, ಪರಿಷತ್ತಿನ ಕೋಶಾಧಿಕಾರಿಗಳಾದ ವಿದ್ವಾನ್ ಸುರೇಶ್ ಅತ್ತಾವರ್, ಸದಸ್ಯರಾದ ರಾಮಕೃಷ್ಣ ಕೊಡಂಚ ಮತ್ತು ಪರಿಷತ್ತಿನ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಉಡುಪಿಯ 16 ನೃತ್ಯ ಗುರುಗಳ ಶಿಷ್ಯೆಯರು ಕಿಶೋರ ಪ್ರತಿಭೆಗಳು ನೃತ್ಯಪ್ರದರ್ಶನ ನೀಡಿದರು. ವಿದುಷಿ ಲಕ್ಷ್ಮೀ ಗುರುರಾಜ್ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.