ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಯಕ್ಷಗಾನ ಕಲಾರಂಗ (ರಿ.) ಉಡುಪಿ ಮತ್ತು ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರ ವತಿಯಿಂದ ದಿನಾಂಕ 02ರಿಂದ 18 ಡಿಸೆಂಬರ್ 2025ರವರೆಗೆ ಉಡುಪಿಯ 25 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿರುವ ‘ಕಿಶೋರ ಯಕ್ಷಗಾನ ಸಂಭ್ರಮ – 2025’ವನ್ನು ದಿನಾಂಕ 02 ಡಿಸೆಂಬರ್ 2025ರಂದು ಅಪರಾಹ್ನ 3-00 ಗಂಟೆಗೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಉದ್ಘಾಟನೆಗೊಳ್ಳಲಿದೆ.
ಉಡುಪಿಯ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದು, ಉಡುಪಿ ಶಾಸಕರಾದ ಯಶ್ ಪಾಲ್ ಎ. ಸುವರ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿಯ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದು, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿಗಳು ಡಾ. ನಿ. ಬೀ ವಿಜಯ ಬಲ್ಲಾಳ ಇವರು ಶುಭಾಶಂಸನೆಗೈಯ್ಯಲಿದ್ದಾರೆ.
ದಿನಾಂಕ 02 ಡಿಸೆಂಬರ್ 2025ರಂದು ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ಮಕ್ಕಳಿಂದ ಗುರು ಚರಿತ್ ಅಭಿಮನ್ಯು ಹೇರೂರು
ಇವರ ನಿರ್ದೇಶನದಲ್ಲಿ ‘ವೀರ ಅಭಿಮನ್ಯು’ ಮತ್ತು ಕಡಿಯಾಳಿ ಯು. ಕಮಲಾ ಬಾಯಿ ಪ್ರೌಢಶಾಲೆಯ ಮಕ್ಕಳಿಂದ ಗುರು ಕೃಷ್ಣಮೂರ್ತಿ ಭಟ್ ಇವರ ನಿರ್ದೇಶನದಲ್ಲಿ ‘ಶ್ವೇತಕುಮಾರ’, ದಿನಾಂಕ 03 ಡಿಸೆಂಬರ್ 2025ರಂದು ಪರ್ಕಳ ಪ್ರೌಢಶಾಲೆ, ಪರ್ಕಳ (ಆಂಗ್ಲ ಮತ್ತು ಕನ್ನಡ ಮಾಧ್ಯಮ) ಮಕ್ಕಳಿಂದ ಗುರು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಇವರ ನಿರ್ದೇಶನದಲ್ಲಿ ‘ರತಿ ಕಲ್ಯಾಣ’ ಮತ್ತು ಇಂದ್ರಾಳಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮಕ್ಕಳಿಂದ ಗುರು ಕೃಷ್ಣಮೂರ್ತಿ ಭಟ್ ಇವರ ನಿರ್ದೇಶನದಲ್ಲಿ ‘ಕಂಸ ದಿಗ್ವಿಜಯ – ಕಂಸ ವಧೆ’, ದಿನಾಂಕ 04 ಡಿಸೆಂಬರ್ 2025ರಂದು ಕಲ್ಯಾಣಪುರದ ಡಾ. ಟಿ.ಎಂ.ಎ. ಪೈ ಪ್ರೌಢಶಾಲೆಯ ಮಕ್ಕಳಿಂದ ಗುರು ಬಿ. ಕೇಶವ ರಾವ್ ಇವರ ನಿರ್ದೇಶನದಲ್ಲಿ ‘ಭಾರ್ಗವರಾಮ’ ಮತ್ತು ಮಣಿಪಾಲದ ಮಾಧವ ಕೃಪಾ ಇಂಗ್ಲೀಷ್ ಮೀಡಿಯಮ್ ಪ್ರೌಢಶಾಲೆಯ ಮಕ್ಕಳಿಂದ ಗುರು ನಿಶ್ಚಲ್, ತೀರ್ಥಹಳ್ಳಿ ಇವರ ನಿರ್ದೇಶನದಲ್ಲಿ ‘ಚಿತ್ರಪಟ ರಾಮಾಯಣ’, ದಿನಾಂಕ 05 ಡಿಸೆಂಬರ್ 2025ರಂದು ಪರ್ಕಳ ಬಿ.ಎಂ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮಕ್ಕಳಿಂದ ಗುರು ಶೈಲೇಶ್ ತೀರ್ಥಹಳ್ಳಿ ಇವರ ನಿರ್ದೇಶನದಲ್ಲಿ ‘ಮೀನಾಕ್ಷಿ ಕಲ್ಯಾಣ’ ಮತ್ತು ಮಲ್ಪೆ ನಾರಾಯಣಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮಕ್ಕಳಿಂದ ಗುರು ನಿತ್ಯಾನಂದ ಶೆಟ್ಟಿಗಾರ್ ಇವರ ನಿರ್ದೇಶನದಲ್ಲಿ ‘ವಿದ್ಯುನ್ಮತಿ ಕಲ್ಯಾಣ’, ದಿನಾಂಕ 06 ಡಿಸೆಂಬರ್ 2025ರಂದು ಉಡುಪಿ ಸರಕಾರಿ ಪ. ಪೂ ಕಾಲೇಜು ಮಕ್ಕಳಿಂದ ಗುರು ಶೈಲೇಶ್ ತೀರ್ಥಹಳ್ಳಿ ಇವರ ನಿರ್ದೇಶನದಲ್ಲಿ ‘ಏಕಲವ್ಯ’ ಮತ್ತು ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಮಕ್ಕಳಿಂದ ಗುರು ಮುಂಡಾಡಿ ಬಸವ ಮರಕಾಲ ಇವರ ನಿರ್ದೇಶನದಲ್ಲಿ ‘ದಕ್ಷಯಜ್ಞ’, ದಿನಾಂಕ 08 ಡಿಸೆಂಬರ್ 2025ರಂದು ಆದಿ ಉಡುಪಿ ಪ್ರೌಢ ಶಾಲೆಯ ಮಕ್ಕಳಿಂದ ಗುರು ಶಾಂತಾರಾಮ ಆಚಾರ್ಯ ಹೇರೂರು ಇವರ ನಿರ್ದೇಶನದಲ್ಲಿ ‘ರುಕ್ಮಿಣಿ ಕಲ್ಯಾಣ’ ಮತ್ತು ಇಂದಿರಾನಗರ ಸರಕಾರಿ ಪ್ರೌಢಶಾಲೆಯ ಮಕ್ಕಳಿಂದ ಗುರು ವಿಷ್ಣುಮೂರ್ತಿ ಉಪಾಧ್ಯ ಇವರ ನಿರ್ದೇಶನದಲ್ಲಿ ‘ಮಾಯಾಪುರಿ ವಿಜಯ’, ದಿನಾಂಕ 09 ಡಿಸೆಂಬರ್ 2025ರಂದು ಅಜ್ಜರಕಾಡು ಸರಕಾರಿ ಪ್ರೌಢಶಾಲೆಯ ಮಕ್ಕಳಿಂದ ಗುರು ಸ್ಕಂದ ತೀರ್ಥಹಳ್ಳಿ ಇವರ ನಿರ್ದೇಶನದಲ್ಲಿ ‘ವಿಶ್ವರೂಪ ದರ್ಶನ’ ಮತ್ತು ಉಡುಪಿ ಸೈಂಟ್ ಸಿಸಿಲಿ ಪ್ರೌಢ ಶಾಲೆಯ ಮಕ್ಕಳಿಂದ ಗುರು ಶಾಂತಾರಾಮ ಆಚಾರ್ಯ ಹೇರೂರು ಇವರ ನಿರ್ದೇಶನದಲ್ಲಿ ‘ಮೇದಿನಿ ನಿರ್ಮಾಣ ಮತ್ತು ಮಹಿಷ ಮರ್ಧಿನಿ’, ದಿನಾಂಕ 10 ಡಿಸೆಂಬರ್ 2025ರಂದು ತೆಂಕನಿಡಿಯೂರು ಸರಕಾರಿ ಪ. ಪೂ. ಕಾಲೇಜು ಮಕ್ಕಳಿಂದ ಗುರು ರತ್ನಾಕರ ಶೆಣೈ ಇವರ ನಿರ್ದೇಶನದಲ್ಲಿ ‘ರಾಮಾಶ್ವಮೇಧ’ ಮತ್ತು ಉಡುಪಿ ಸರಕಾರಿ ಬಾಲಕಿಯರ ಪಿ.ಯು. ಕಾಲೇಜು ಮಕ್ಕಳಿಂದ ಗುರು ಆದ್ಯತಾ ಭಟ್ ಇವರ ನಿರ್ದೇಶನದಲ್ಲಿ ‘ಭೀಷ್ಮವಿಜಯ’, ದಿನಾಂಕ 11 ಡಿಸೆಂಬರ್ 2025ರಂದು ಕಿದಿಯೂರು ಎಸ್.ವಿ.ಎಸ್.ಟಿ ಪ್ರೌಢಶಾಲೆಯ ಮಕ್ಕಳಿಂದ ಗುರು ನಿತ್ಯಾನಂದ ಶೆಟ್ಟಿಗಾರ್ ಇವರ ನಿರ್ದೇಶನದಲ್ಲಿ ‘ತರಣಿಸೇನ ಕಾಳಗ’ ಮತ್ತು ಉಡುಪಿಯ ಕ್ರಿಶ್ಚಿಯನ್ ಪ್ರೌಢಶಾಲೆಯ ಮಕ್ಕಳಿಂದ ಗುರು ರತ್ನಾಕರ ಶೆಣೈ ಇವರ ನಿರ್ದೇಶನದಲ್ಲಿ ‘ರುಕ್ಮಾವತಿ ಕಲ್ಯಾಣ’, ದಿನಾಂಕ 15 ಡಿಸೆಂಬರ್ 2025ರಂದು ಮಣಿಪಾಲ ಪ. ಪೂ. ಕಾಲೇಜು ಮಕ್ಕಳಿಂದ ಗುರು ಶಾಂತಾರಾಮ ಆಚಾರ್ಯ ಹೇರೂರು ಇವರ ನಿರ್ದೇಶನದಲ್ಲಿ ‘ಕುಶ-ಲವ’ ಮತ್ತು ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮಕ್ಕಳಿಂದ ಗುರು ರತ್ನಾಕರ ಶೆಣೈ ಇವರ ನಿರ್ದೇಶನದಲ್ಲಿ ‘ಚಿತ್ರಸೇನ ಕಾಳಗ’, ದಿನಾಂಕ 16 ಡಿಸೆಂಬರ್ 2025ರಂದು ಶೆಟ್ಟಿಬೆಟ್ಟು ಪರ್ಕಳ ಸರಕಾರಿ ಪ್ರೌಢಶಾಲೆಯ ಮಕ್ಕಳಿಂದ ಗುರು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಇವರ ನಿರ್ದೇಶನದಲ್ಲಿ ‘ಅಭಿಮನ್ಯು ಕಾಳಗ’ ಮತ್ತು ಮಲ್ಪೆ ಸರಕಾರಿ ಪದವಿಪೂರ್ವ ಕಾಲೇಜು ಮಕ್ಕಳಿಂದ ಗುರು ನಿಶ್ವಲ್ ತೀರ್ಥಹಳ್ಳಿ ಇವರ ನಿರ್ದೇಶನದಲ್ಲಿ ‘ಮೈಂದ ದ್ವಿವಿದ ಕಾಳಗ’, ದಿನಾಂಕ 17 ಡಿಸೆಂಬರ್ 2025ರಂದು ಉಡುಪಿ – 2 ನಿಟ್ಟೂರು ಪ್ರೌಢಶಾಲೆಯ ಮಕ್ಕಳಿಂದ ಗುರು ನಿಶ್ವಲ್ ತೀರ್ಥಹಳ್ಳಿ ಇವರ ನಿರ್ದೇಶನದಲ್ಲಿ ‘ಧ್ರುವಚರಿತ್ರೆ’ ಮತ್ತು ಹನುಮಂತನಗರ ಸರಕಾರಿ ಪ್ರೌಢಶಾಲೆಯ ಮಕ್ಕಳಿಂದ ಗುರು ಚರಿತ್ ಅಭಿಮನ್ಯು ಹೇರೂರು ಇವರ ನಿರ್ದೇಶನದಲ್ಲಿ ‘ಮೀನಾಕ್ಷಿ ಕಲ್ಯಾಣ’, ದಿನಾಂಕ 18 ಡಿಸೆಂಬರ್ 2025ರಂದು ಉಡುಪಿ ಅನಂತೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮಕ್ಕಳಿಂದ ಗುರು ಉದಯ ಕುಮಾರ್ ಮಧ್ಯಸ್ಥ ಇವರ ನಿರ್ದೇಶನದಲ್ಲಿ ‘ಶಶಿಪ್ರಭಾ ಪರಿಣಯ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

