ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪಿ.ಎಂ.ಶ್ರೀ ಪ್ರಾಥಮಿಕ ಶಾಲೆ ಮೂರ್ನಾಡು ಇದರ ಸಂಯುಕ್ತ ಆಶ್ರಯದಲ್ಲಿ 2024-25ನೇ ಸಾಲಿನ 22ನೇ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಸಣ್ಣಕತೆಗಳ ಗೌರಮ್ಮ ದತ್ತಿ ನಿಧಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆಯನ್ನು ದಿನಾಂಕ 07 ಮಾರ್ಚ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಮೂರ್ನಾಡಿನ ಪಿ.ಎಂ.ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಂತೂರು ಮುರುನಾಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ.ಎಸ್. ಕುಶನ್ ರೈ ಇವರು ನಿರ್ವಹಿಸಲಿರುವರು. ಈ ಬಾರಿಯ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ವಿಜೇತರಾದ ಶ್ರೀಮತಿ ಕೂಡಕಂಡಿ ಓಂ ಶ್ರೀ ದಯಾನಂದರವರಿಗೆ ಮೈಸೂರಿನ ಯುವರಾಜ ಕಾಲೇಜಿನ ಸಾಹಿತಿಗಳಾದ ಶ್ರೀಮತಿ ನಿವೇದಿತಾ ಎಚ್. ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಶ್ರೀ ಟಿ.ಪಿ. ರಮೇಶ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಬಿ.ಎಸ್. ಲೋಕೇಶ್ ಸಾಗರ್, ಪಿ.ಎಂ.ಶ್ರೀ ಪ್ರಾಥಮಿಕ ಶಾಲೆ ಮೂರ್ನಾಡು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಶ್ರೀ ಕೆ.ಸಿ. ವೆಂಕಪ್ಪ, ಪಿ.ಎಂ.ಶ್ರೀ ಪ್ರಾಥಮಿಕ ಶಾಲೆ ಮೂರ್ನಾಡು ಇದರ ಮುಖ್ಯೋಪಾಧ್ಯಾಯರು ಶ್ರೀಮತಿ ಬಿ.ಎನ್. ಪುಷ್ಪಾವತಿ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀಮತಿ ಕಡ್ಲೇರ ತುಳಸಿ ಮೋಹನ್, ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀಮತಿ ಈರಮಂಡ ಹರಿಣಿ ವಿಜಯ್, ಮೂರ್ನಾಡು ಸಮಾಜ ಸೇವಕರಾದ ಶ್ರೀ ಪುದಿಯೊಕ್ಕಡ ರಮೇಶ್, ಶ್ರೀ ವಿ.ಎಂ. ಧನಂಜಯ ಮತ್ತು ಶ್ರೀ ಸಿ.ಎಸ್. ಸೂರಜ್ ತಮ್ಮಯ್ಯ ಇವರುಗಳು ಭಾಗವಹಿಸಲಿದ್ದಾರೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡುವ ಗೌರಮ್ಮ ಪ್ರಶಸ್ತಿಯನ್ನು ಜಿಲ್ಲೆಯ 21 ಮಹಿಳಾ ಲೇಖಕರು ಪಡೆದುಕೊಂಡಿದ್ದು ಶ್ರೀಮತಿ ಕೂಡಕಂಡಿ ಓಂ ಶ್ರೀ ದಯಾನಂದ 22ನೇಯವರಾಗಿರುತ್ತಾರೆ. ಶ್ರೀಮತಿ ನಯನ ಕಶ್ಯಪ್, ಶ್ರೀಮತಿ ಬೈತಡ್ಕ ಜಾನಕಿ ಬೆಳ್ಯಪ್ಪ, ಶ್ರೀಮತಿ ವಿಜಯ ವಿಷ್ಣು ಭಟ್, ಶ್ರೀಮತಿ ಮಂಡೆಪಂಡ ಗೀತಾ ಮಂದಣ್ಣ, ಡಾ. ಎಂ.ಬಿ. ರೇಖಾ, ಡಾ. ಕೋರನ ಸರಸ್ವತಿ, ಶ್ರೀಮತಿ ಗೀತಾ ಭಾವೆ. ಶ್ರೀಮತಿ ಕಸ್ತೂರಿ ಗೋವಿಂದಯ್ಯ, ಶ್ರೀಮತಿ ದಿನಮಣಿ ಹೇಮರಾಜ್, ಶ್ರೀಮತಿ ಶರ್ಮಿಳ ರಮೇಶ್, ಶ್ರೀಮತಿ ಮಿಲನ ಭರತ್, ಶ್ರೀಮತಿ ಸ್ಮಿತಾ ಅಮೃತರಾಜ್, ಶ್ರೀಮತಿ ಶಾಂತಿ ಅಪ್ಪಣ್ಣ, ಶ್ರೀಮತಿ ಸಂಗೀತ ರವಿರಾಜ್, ಡಾ. ಕಾವೇರಿ ಪ್ರಕಾಶ್, ಶ್ರೀಮತಿ ಜಲ ಕಾಳಪ್ಪ, ಶ್ರೀಮತಿ ಸುನೀತ ಲೋಕೇಶ್, ಶ್ರೀಮತಿ ಸಹನಾ ಕಾಂತಬೈಲು, ಶ್ರೀಮತಿ ಕಟ್ರತನ ಲಲಿತಾ ಅಯಣ್ಣ, ಶ್ರೀಮತಿ ಈರಮಂಡ ಹರಿಣಿ ವಿಜಯ್, ಶ್ರೀಮತಿ ಕೆ.ಜಿ. ರಮ್ಯಾ ಇವರುಗಳು ಕೊಡಗಿನ ಗೌರಮ್ಮ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇದೇ ಸಂದರ್ಭದಲ್ಲಿ ಸಣ್ಣಕತೆಗಳ ಗೌರಮ್ಮ ದತ್ತಿ ನಿಧಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಾಗುವುದು.