ಮಡಿಕೇರಿ : ಕೊಡವ ಮಕ್ಕಳ ಕೂಟ (ರಿ.) ಮಡಿಕೇರಿ ಆಶ್ರಯದಲ್ಲಿ ‘ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ’ ಪುಸ್ತಕದ ಲೋಕಾರ್ಪಣಾ ಸಮಾರಂಭವು ದಿನಾಂಕ 22 ಡಿಸೆಂಬರ್ 2024ನೇ ಭಾನುವಾರ ಬೆಳಿಗ್ಗೆ ಘಂಟೆ 10.30ಕ್ಕೆ ಮಡಿಕೇರಿಯ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆಯಲಿದೆ.
ಕೊಡವ ಮಕ್ಕಡ ಕೂಟ ಮಡಿಕೇರಿ ಇದರ ಅಧ್ಯಕ್ಷರಾದ ಶ್ರೀ ಬೊಳ್ಳಜಿರ ಬಿ. ಅಯ್ಯಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವವಾನ್ವಿತ ನ್ಯಾಯಾಧೀಶರಾದ ಶ್ರೀ ಚೆಪ್ಪುಡೀರ ಎಂ. ಪೂಣಚ್ಚ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳಾದ ಶ್ರೀ ಮೇರಿಯಂಡ ಸಿ. ನಾಣಯ್ಯ, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಜಿ. ರಾಜೇಂದ್ರ, 1975 ಹಾಕಿ ವರ್ಲ್ಡ್ ಕಪ್ ವಿನ್ನರ್ ತಂಡದ ಸದಸ್ಯರಾದ ಶ್ರೀ ಪೈಕೇರ ಇ. ಕಾಳಯ್ಯ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಪಾಂಡಂಡ ಕೆ. ಬೋಪಣ್ಣ ಹಾಗೂ ‘ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ’ ಕೃತಿಯ ಲೇಖಕರಾದ ಶ್ರೀ ಚೆಪ್ಪುಡೀರ ಎ. ಕಾರ್ಯಪ್ಪ ಭಾಗವಹಿಸಲಿದ್ದಾರೆ.