Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹಿರಿಯ ಸಾಹಿತಿ ಡಾ.ಎಂ.ಪಿ.ರೇಖಾ ಸರ್ವಾಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ
    Literature

    ಹಿರಿಯ ಸಾಹಿತಿ ಡಾ.ಎಂ.ಪಿ.ರೇಖಾ ಸರ್ವಾಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ

    March 15, 2023Updated:August 19, 2023No Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    15  ಮಾರ್ಚ್ 2023, ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವು ಗೋಣಿಕೊಪ್ಪಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಸಾಹಿತಿ ಐ.ಮಾ.ಮುತ್ತಣ್ಣ ವೇದಿಕೆಯಲ್ಲಿ ಮಾ.4 ಮತ್ತು 5ರಂದು ಸಂಪನ್ನಗೊಂಡಿದೆ. ಆರಂಭದಲ್ಲಿ ರಾಷ್ಟ್ರ ಧ್ವಜಾರೋಹಣ, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮತ್ತು ಕನ್ನಡ ಧ್ವಜಾರೋಹಣಗಳು, ರಾಷ್ಟ್ರಗೀತೆ ಮತ್ತು ನಾಡಗೀತೆಯೊಂದಿಗೆ ನೆರವೇರಿತು.

    ಶ್ರೀ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಶ್ರೀ ಕುಲ್ಲಚಂಡ ಬೋಪಣ್ಣ, ಶ್ರೀ ಕಡೇಮಾಡ ಸುನಿಲ್ ಮಾದಪ್ಪ, ಶ್ರೀ ಕಿರಿಯಮಾಡ ಅರುಣ್ ಪೂಣಚ್ಚ, ಶ್ರೀ ಚೆಪ್ಪುಡಿರ ಟಿ.ಪ್ರೇಮ್ ಗಣಪತಿ, ಶ್ರೀ ಎಂ.ಎನ್.ಪ್ರಕಾಶ್, ಶ್ರೀ ಎಂ.ಜಿ.ಮೋಹನ್, ಶ್ರೀ ಮನೆಯಪಂಡ ಸೋಮಣ್ಣ, ಶ್ರೀ ಎಸ್.ಎಲ್.ಶಿವಣ್ಣ, ಶ್ರೀ ಜಪ್ಪೆಕೋಡಿ ರಾಜಾ ಉತ್ತಪ್ಪ ಮುಂತಾದ ಗಣ್ಯರು ನೆನೆಪಿನ ದ್ವಾರಗಳ ಉದ್ಘಾಟನೆಗಳನ್ನು ಮಾಡಿದರು.

    ಸಮ್ಮೇಳನಧ್ಯಕ್ಷರಾದ ಡಾ.ಎಂ.ಪಿ.ರೇಖಾ ಇವರನ್ನು ತೆರೆದ ಜೀಪಿನಲ್ಲಿ ಅದ್ದೂರಿಯ ಮೆರವಣಿಗೆಯಲ್ಲಿ ಕರೆತರಲಾಯಿತು. ಸಮ್ಮೇಳನದ ಸ್ವಾಗತ ಸಮಿತಿಯ ಸದಸ್ಯರು ಮುಂಚೂಣಿಯಲ್ಲಿದ್ದರು. ಮೆರವಣಿಗೆಗೆ ವಿಶೇಷ ಮೆರುಗನ್ನು ನೀಡುವಂತೆ ಮಂಗಳ ವಾದ್ಯ, ಕೊಡಗಿನ ವಾಲಗ, ಚೆಂಡೆ, ಸ್ತಬ್ಧ ಚಿತ್ರಗಳು, ಗೊಂಬೆಗಳು, ಕರ್ನಾಟಕದ ವಿವಿಧ ಜಾನಪದ ಕುಣಿತಗಳೊಂದಿಗೆ ಕಲಶ ಹಿಡಿದ ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಒಕ್ಕೂಟಗಳು, ಗ್ರಾಮೀಣ ಅಭಿವೃದ್ಧಿ ಸಂಘ ಇತ್ಯಾದಿ ವಿವಿಧ ಸಂಘಟನೆಗಳೊಂದಿಗೆ ವೇದಿಕೆಯತ್ತ ಆಗಮಿಸಿದ ಮೆರವಣಿಗೆ ಸುತ್ತ ಮುತ್ತ ಪ್ರದೇಶದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು.

    ಐ.ಮಾ.ಮುತ್ತಣ್ಣ ವೇದಿಕೆಯ ಉದ್ಘಾಟನೆಯನ್ನು ಅರಮೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ನೆರವೇರಿಸಿದರು. ಡಾ. ಪಿ.ಎಂ. ನಾಣಮ್ಮಯ್ಯ ಸಭಾಂಗಣವನ್ನು ಗೋಣಿಕೊಪ್ಪಲಿನ ಚೇಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷರಾದ ಶ್ರೀ ಪೊನ್ನಿಮಾಡ ಎಸ್. ಸುರೇಶ್ ಉದ್ಘಾಟಿಸಿದರು. ಇದರೊಂದಿಗೆ ವಿವಿಧ ಮಾಳಿಗೆಗಳ ಮತ್ತು ವಿವಿಧ ದ್ವಾರಗಳ ಉದ್ಘಾಟನೆಯೂ ಗಣ್ಯರಿಂದ ನೆರವೇರಿತು.

    ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭವು ನಾಡಗೀತೆ ಮತ್ತು ರೈತಗೀತೆಯೊಂದಿಗೆ ನಡೆಯಿತು. ಶ್ರೀ ಕೋಳೆರ ದಯಾ ಚಂಗಪ್ಪ ಇವರು ಸಮ್ಮೇಳನಕ್ಕೆ ಆಗಮಿಸಿದ ಸರ್ವರಿಗೂ ಸ್ವಾಗತ ಬಯಸಿದರು. ಶ್ರೀ ಎನ್.ಪಿ.ಕೇಶವ ಕಾಮತ್ ಪ್ರಾಸ್ತಾವಿಕ ನುಡಿಗಳಿಗೆ ನೆರೆದವರೆಲ್ಲರೂ ಸಾಕ್ಷಿಯಾದರು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರೂ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಶ್ರೀ ಕೆ.ಜಿ.ಬೋಪಯ್ಯ ಇವರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ.ಮನು ಬಳಿಗಾರ್ ಇವರು ಆಶಯ ನುಡಿಗಳನ್ನಾಡಿದರು. ನಿಕಟಪೂರ್ವ ಸಮ್ಮೇಳನಧ್ಯಕ್ಷರಾದ ಶ್ರೀಮತಿ ಮಂಡೆಪಂಡ ಗೀತಾ ಮಂದಣ್ಣ ಮಾತನಾಡಿದ ನಂತರ ಮಡಿಕೇರಿ ವಿಧಾನ ಸಭಾ ಶಾಸಕರಾದ ಶ್ರೀ ಎಂ.ಪಿ.ಅಪ್ಪಚ್ಚು ರಂಜನ್ ಇವರಿಂದ ಸ್ಮರಣ ಸಂಚಿಕೆಯು ಅನಾವರಣಗೊಂಡಿತು. ಇದರೊಂದಿಗೆ ವಿವಿಧ ಕೃತಿಗಳು ಬಿಡುಗಡೆಗೊಂಡವು.   

    ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಡಾ. ಎಂ.ಪಿ.ರೇಖಾ ಮಾತನಾಡುತ್ತಾ “ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರನ್ನೂ ಒಟ್ಟಾಗಿಸುವ ಮಾತೃ ಸಮಾನ ಸಂಸ್ಥೆ ಆಗಿದೆ. ಕೊಡಗು ಪ್ರಾಚೀನ ಕಾಲದಿಂದಲೂ ಬಹುಭಾಷಿಕ ನೆಲವಾಗಿದ್ದು, ಕೊಡವ, ಕನ್ನಡ, ಅರೆಭಾಷೆ, ತುಳು, ಬ್ಯಾರಿ, ಎರವ, ಕುರುಬ, ಕೊಂಕಣಿ ಇಲ್ಲಿಯ ವಿವಿಧ ಜನರ ಮಾತೃಭಾಷೆಯಾಗಿದೆ. ಕೊಡಗಿನ ಕಾವೇರಿ ಜಾತ್ರೆ, ಹುತ್ತರಿ ಹಬ್ಬ, ಯುಗಾದಿ ಹಬ್ಬಗಳು ಈ ನಾಡಿನ ಸಾಂಸ್ಕೃತಿಕ ಸಾಮರಸ್ಯವನ್ನೇ ಪ್ರತಿನಿಧಿಸುತ್ತವೆ. ಎಲ್ಲರನ್ನೂ ಪೋಷಿಸುವ ಆ ಕಣ್ಣಿಗೆ ಕಾಣದ ‘ಎಳೆ’ ಇಲ್ಲಿಯ ಸಂಸ್ಕೃತಿಯ ಶ್ರೇಷ್ಠತೆಯನ್ನು ಹೊಂದಿದೆ” ಎಂದರು.

    ಆ ದಿನ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ಜಯಪ್ರಕಾಶ್ ಪುತ್ತೂರು ಅವರ “ಬದುಕಲು ಬಿಡಿ ಪ್ಲೀಸ್”, ಶರ್ಮಿಳಾ ರಮೇಶ್ ಅವರ “ಲಹರಿ, ಲಲಿತ ಪ್ರಬಂಧ”, ಕಿಗ್ಗಾಲು ಗಿರೀಶ್ ಅವರ ಕಾದಂಬರಿ “ಅನಿರೀಕ್ಷಿತ ತಿರುವುಗಳು”, ಕೃಪಾ ದೇವರಾಜ್ ಅವರ “ಚೌಚೌ ಬಾತ್”, ರೆ.ಫಾ.ಪ್ರಾನ್ಸಿಸ್ ಚಿರಯ್ಕಲ್ ಅವರ “ಗ್ರಾಮೀಣ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣದ ಪಾತ್ರ” ಈ ಎಲ್ಲಾ ಕೃತಿಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬಿಡುಗಡೆ ಮಾಡಿದರು. ಸ್ಮರಣ ಸಂಚಿಕೆಯ ಮುಖಪುಟವೂ ಅದೇ ದಿನ ಅನಾವರಣಗೊಂಡಿತು. ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮೇಳನ ಸ್ಮರಣ ಸಂಚಿಕೆ “ಡಿಂಡಿಮ”ದ ಮುಖ ಪುಟವನ್ನು ಅನಾವರಣಗೊಳಿಸಿದರು.

    ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಗಣ್ಯರು ಉಪಸ್ಥಿತರಿದ್ದವರು. ವಿವಿಧ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು ಉಪಸ್ಥಿತರಿದ್ದವರು. ಮಡಿಕೇರಿ – ಶ್ರೀ ಅಂಬೇಕಲ್ ನವೀನ್, ಸೋಮವಾರಪೇಟೆ – ಶ್ರೀ ಎಸ್.ಐ.ವಿಜೇತ್ ವಿರಾಜ ಪೇಟೆ – ಶ್ರೀ ಡಿ.ರಾಜೇಶ್, ಕುಶಾಲನಗರ –ಶ್ರೀ ಕೆ.ಎಸ್.ಮೂರ್ತಿ, ಪೊನ್ನಂಪೇಟೆ – ಶ್ರೀ ಕೋಳೆರ ದಯಾ ಚಂಗಪ್ಪ, ಪೊನ್ನಂಪೇಟೆ ಹೋಬಳಿ – ಶ್ರೀ ಕುಲ್ಲಚಂಡ ಪ್ರಮೋದ್ ಗಣಪತಿ ಮಾತ್ರವಲ್ಲದೆ ಇವರುಗಳೊಂದಿಗೆ ಶ್ರೀ ಕೆ.ಬಿ.ಗಿರೀಶ್ ಗಣಪತಿ, ಶ್ರೀಮತಿ ಮನ್ನಕ್ಕಮನೆ ಸೌಮ್ಯ ಬಾಲು, ಶ್ರೀ ಕೊಡಂದೇರ ಬಾಂಡ್ ಗಣಪತಿ, ಶ್ರೀ ಬಿ.ಎಸ್.ಲೋಕೇಶ್ ಸಾಗರ್, ಶ್ರೀ ಚೇತನ್ ಹೆಚ್.ಎಸ್., ಶ್ರೀ ಪೊನ್ನಚ್ಚನ ಶ್ರೀನಿವಾಸ್, ಶ್ರೀ ಹೆಚ್.ಎನ್.ಮಂಜುನಾಥ್, ಶ್ರೀ ಎಸ್.ಐ.ಮುನೀರ್ ಅಹಮದ್, ಶ್ರೀಮತಿ ಪುದಿಯನೆರವನ ರೇವತಿ ರಮೇಶ್, ಶ್ರೀ ಎಂ.ಬಿ.ಜೋಯಪ್ಪ, ಶ್ರೀ ಆರ್.ಪಿ.ಚಂದ್ರಶೇಖರ್ ಇವರೆಲ್ಲರ ಉಪಸ್ಥಿತಿಯಿಂದ ವೇದಿಕೆಯ ಗೌರವ ಹೆಚ್ಚಿತ್ತು.

    ಉದ್ಘಾಟನೆಯ ನಂತರ ಚೇಂದಿರ ನಿರ್ಮಲ ಬೋಪಣ್ಣ, ವಿ.ಟಿ.ಶ್ರೀನಿವಾಸ್ ಮತ್ತು ತಂಡದವರಿಂದ ಕನ್ನಡ ಗೀತೆಗಳ ಗಾಯನ ನಡೆಯಿತು. ಈ ಕಾರ್ಯಕ್ರಮವನ್ನು ಹಿರಿಯ ಕಲಾವಿದೆ ನಿರ್ಮಲಾ ಬೋಪಣ್ಣ ಉದ್ಘಾಟಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎನ್.ಕುಮಾರ್ ಹಾಜರಿದ್ದರು.

    04-03-2023ರಂದು ಉದ್ಘಾಟನೆಯ ನಂತರ ನಡೆದ “ಕೊಡಗು ಭಾಷಾ ವೈವಿಧ್ಯತೆ” ಎಂಬ ವಿಷಯದ ಮೇಲೆ ನಡೆದ ವಿಚಾರ ಗೋಷ್ಠಿಯಲ್ಲಿ ಗೋಷ್ಠಿಯ ಅಧ್ಯಕ್ಷ ಸ್ಥಾನವನ್ನು ಸಾಹಿತಿ ಡಾ.ಬೆಸೂರು ಮೋಹನ್ ಪಾಳೇಗಾರ್ ವಹಿಸಿದ್ದರು. “ಕೊಡಗು ಮತ್ತು ಕನ್ನಡ ಸಾಹಿತ್ಯ” ಎಂಬ ವಿಷಯದ ಬಗ್ಗೆ ಸಾಹಿತಿ ಮೇಜರ್ ಡಾ.ಕುಶ್ವಂತ್ ಕೋಳಿಬೈಲು, “ಕೊಡವ ಭಾಷಾ ಸಾಹಿತ್ಯ” ದ ಬಗ್ಗೆ ಶ್ರೀ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಅರೆ ಭಾಷಾ ಸಾಹಿತ್ಯದ ಬಗ್ಗೆ ಮಡಿಕೇರಿ ಆಕಾಶ ವಾಣಿಯ ಶ್ರೀ ಸುಬ್ರಾಯ ಸಂಪಾಜೆ, “ತುಳುಭಾಷಾ ಸಾಹಿತ್ಯ” ಈ ವಿಷಯದಲ್ಲಿ ಪ್ರಾಧ್ಯಾಪಕರಾದ ಶ್ರೀಮತಿ ಪ್ರತಿಮಾ ರೈ ಮತ್ತು “ಬ್ಯಾರಿ ಭಾಷಾ ಸಾಹಿತ್ಯ”ದ ಬಗ್ಗೆ ಬ್ಯಾರಿ ವೆಲ್ ಫೇರ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಎಸ್.ಐ.ಮುನೀರ್ ಅಹಮದ್ ಹೀಗೆ ಒಟ್ಟು ಐದು ಮಂದಿ ಉಪನ್ಯಾಸಕರು ಗೋಷ್ಠಿಯಲ್ಲಿ ಭಾಗವಹಿಸಿ ವಿವಿಧ ಭಾಷಾ ಸಾಹಿತ್ಯದ ಜ್ಞಾನವನ್ನು ಸಭಿಕರ ಮುಂದೆ ಇಟ್ಟರು.

    ಮುಂದೆ ನಡೆದ ಸಂಕೀರ್ಣ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿಗಳಾದ ಶ್ರೀ ಎಚ್.ಎಸ್.ಚಂದ್ರಮೌಳಿ ವಹಿಸಿದರು. ನ್ಯಾಯವಾದಿಗಳಾದ ಶ್ರೀ ಎಂ.ಎ.ನಿರಂಜನ್ ಇವರು “ಕಾನೂನಿನಲ್ಲಿ ಕನ್ನಡ ಬಳಕೆ” ಎಂಬ ವಿಷಯದ ಬಗ್ಗೆ ಮಾತನಾಡಿದರು. “ಮಹಿಳಾ ಸಬಲಿಕರಣ”ದ ಬಗ್ಗೆ ಶ್ರೀಮತಿ ಎಸ್.ಎಂ.ರಜನಿ ಪ್ರಾಧ್ಯಾಪಕರು, “ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರು” ವಿಷಯದಲ್ಲಿ ಶ್ರೀ ಇಟ್ಟಿರ ಬಿದ್ದಪ್ಪ, “ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ” ಎಂಬ ವಿಷಯದಲ್ಲಿ ಸಾಹಿತಿ ಶ್ರೀ ಜಯಪ್ರಕಾಶ್ ಪುತ್ತೂರು ಈ ನಾಲ್ಕು ಮಂದಿ ಉಪನ್ಯಾಸಕರು ನಾಲ್ಕು ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಅದೇ ದಿನ ದತ್ತಿ ಸ್ಥಾಪಿತರಿಗೆ ಮತ್ತು ತಾಲೂಕು ಹಾಗೂ ಹೋಬಳಿ ಅಧ್ಯಕ್ಷರುಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.2021-22ನೇ ಸಾಲಿನ 10ನೇ ತರಗತಿಯ ಪರೀಕ್ಷೆಯಲ್ಲಿ ಶೇಕಡಾ 100 ಅಂಕ  ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.

    ಆ ದಿನದ ಕೊನೆಯ ಗೋಷ್ಠಿ – ಕವಿಗೋಷ್ಠಿ. ಪ್ರಸಿದ್ಧ ಕವಿ ಶ್ರೀ ಬಿ.ಎ.ಷಂಶುದ್ದೀನ್ ಇವರು ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು. ಡಾ.ಎ.ಎಸ್.ಪೂವಮ್ಮ, ಶ್ರೀಮತಿ ಟಿ.ಎಸ್. ಹೇಮಾವತಿ, ಶ್ರೀ ಎ.ವಿ.ಮಂಜುನಾಥ್, ಶ್ರೀ ಸತೀಶ್ ಕುಮಾರ್ ಚೇರಂಬಾಣೆ, ಶ್ರೀಮತಿ ಅಲೀಮಾ ಪಿ.ಹೆಚ್., ಶ್ರೀಮತಿ ಶರ್ಮಿಳಾ ರಮೇಶ್, ಶ್ರೀ ಅಮೃತ ಕೆ.ವಿ., ಶ್ರೀ ಕಿಶೋರ್ ಕುಮಾರ್ ತಳೂರು, ಶ್ರೀಮತಿ ಕೃಪಾ ದೇವರಾಜ್, ಶ್ರೀಮತಿ ಕಲ್ಲುಮುಟ್ಲು ಜಶ್ಮಿ, ಶ್ರೀ ಕಿರಣ್ ಕುಮಾರ್ ಕೆ.ಎನ್., ಶ್ರೀ ಮೂಟೆರ ಕೆ.ಗೋಪಾಲಕೃಷ್ಣ, ಶ್ರೀಮತಿ ಈರಮಂಡ ಹರಿಣಿ ವಿಜಯ್, ಶ್ರೀಮತಿ ಮೂಕಳೆರ ಟೈನಿ ಪೂಣಚ್ಚ, ಶ್ರೀಮತಿ ಮಾಲಾಮೂರ್ತಿ ಕುಶಾಲನಗರ ಮತ್ತು ಶ್ರೀಮತಿ ಸುನೀತಾ ಬೆಟ್ಟಗೇರಿ ಇತ್ಯಾದಿ ಕವಿಗಳ ಘನ ಉಪಸ್ಥಿತಿಯಲ್ಲಿ ಕವಿ ಗೋಷ್ಠಿ ನಡೆಯಿತು.

    ಆ ದಿನದ ಕೊನೆಯ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ. ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷ ರಾದ ಶ್ರೀ ಬಿ.ಜಿ.ಅನಂತಶಯನ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಬಿ.ಸಿ.ಸತೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲೆಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ರಂಜಿಸಿತು.

    ದಿನಾಂಕ 05-03-2023ರಂದು ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಸಾಹಿತ್ಯ ಗೋಷ್ಠಿಯು ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕರಾದ ಶ್ರೀ ಜಮೀರ್ ಅಹಮದ್ ಇವರ ಘನ ಅಧ್ಯಕ್ಷತೆಯಲ್ಲಿ ಜರಗಿತು. ಡಾ.ಕೆ.ಕೆ.ಶಿವಪ್ಪ ಗೋಣಿಕೊಪ್ಪಲು ಇವರು “ನಡಿಕೇರಿಯಂಡ ಚಿಣ್ಣಪ್ಪ ಅವರ ಸಾಹಿತ್ಯ”ದ ಬಗ್ಗೆ, “ಭಾರತೀಸುತರ ಸಾಹಿತ್ಯ”ದ ಬಗ್ಗೆ ಪ್ರಾಂಶುಪಾಲರಾದ ಡಾ.ಕಾವೇರಿ ಪ್ರಕಾಶ್, “ಡಾ.ಕೋಡಿ ಕುಶಾಲಪ್ಪ ಗೌಡ ಅವರ ಸಾಹಿತ್ಯ”ದ ಬಗ್ಗೆ ಕನ್ನಡ ಉಪನ್ಯಾಸಕರಾದ ಡಾ.ಕರುಣಾಕರ ನಿಡಿಂಜಿ ಮತ್ತು “ಪಂಜೆ ಮಂಗೇಶರಾಯರ ಸಾಹಿತ್ಯ”ದ ಬಗ್ಗೆ ಶ್ರೀ ಕೆ.ವಿ.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಟ್ಟು ನಾಲ್ಕು ಮಂದಿ ಉಪನ್ಯಾಸಗಳನ್ನು ಮಂಡಿಸಿದರು.

    ಸಾಹಿತ್ಯ ಗೋಷ್ಠಿಯ ನಂತರ “ಕೊಡಗು ದರ್ಶನ” ಎಂಬ ವಿಷಯದ ಬಗ್ಗೆ ಸುಂದರವಾದ ಒಂದು ಗೋಷ್ಠಿ ಜರಗಿತು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಜಿ.ರಾಜೇಂದ್ರ ಅವರು ವಹಿಸಿದ್ದರು. “ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ” ಎಂಬ ವಿಷಯದ ಕುರಿತು ಶ್ರೀ ಕಾಡ್ಯಮಾಡ ಮನು ಸೋಮಯ್ಯ, “ಬುಡಕಟ್ಟು ಗಿರಿಜನರ ಸಾಹಿತ್ಯ ಮತ್ತು ಸಂಸ್ಕೃತಿ”ಯ ಕುರಿತು ಶ್ರೀ ಜೆ.ಎ.ಶಿವು, “ಕೊಡಗಿನಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮ”ದ ಕುರಿತು ಪತ್ರಕರ್ತರಾದ ಶ್ರೀ ಎಚ್.ಟಿ.ಅನಿಲ್ ಮತ್ತು “ಚಲನಚಿತ್ರ ಉದ್ಯಮದಲ್ಲಿ ಕೊಡಗು” ಎಂಬ ವಿಷಯದ ಬಗ್ಗೆ ಚಿತ್ರ ನಿರ್ಮಾಪಕರಾದ ಶ್ರೀ ಮುಲ್ಲೆಂಗಡ ಮಧೋಷ್ ಪೂವಯ್ಯ ವಿಚಾರ ಮಂಡಿಸಿ, ಕೊಡಗಿನ ಪೂರ್ಣ ಮಾಹಿತಿಯನ್ನು ಸಭಿಕರಿಗೆ ನೀಡಿದರು.

    ಹಿರಿಯ ಗಾಯಕರಾದ ಶ್ರೀ ಬಿ.ಎ.ಗಣೇಶ್ ಇವರಿಂದ ಉದ್ಘಾಟನೆಗೊಂಡ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಉದಯೋನ್ಮುಖ ಗಾಯಕರಿಂದ  ಹಾಡಲ್ಪಟ್ಟ ಹಾಡುಗಳು ಜನರನ್ನು ಮನಸ್ಸನ್ನು ಆಕರ್ಷಿಸಿದವು.

    ಮಧ್ಯಾಹ್ನ 2 ಗಂಟೆಯಿಂದ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬೆಸೂರು ಕೊಡ್ಲಿಪೇಟೆಯ ಶ್ರೀಮತಿ ಸ್ನೇಹಾ ಬಸಮ್ಮ ವಹಿಸಿದ್ದರು. ಶ್ರೀಮತಿ ಕೆ.ಎಸ್.ನಳಿನಿ ಸತ್ಯನಾರಾಯಣ, ಶ್ರೀ ಲವಿನ್ ಲೋಪೆಸ್, ಶ್ರೀಮತಿ ಉಳುವಂಗಡ ಕಾವೇರಿ ಉದಯ, ಶ್ರೀಮತಿ ಪವಿತ್ರ ಹೆಚ್.ಆರ್., ಶ್ರೀ ಸುಕುಮಾರ್ ತೊರೆನೂರು, ಶ್ರೀ ಆರ್.ಜಯನಾಯಕ್, ಶ್ರೀ ರಾಝಿಕ್ ರಶೀದ್, ಬೇಗೂರು, ಶ್ರೀ ರಂಜಿತ್ ಕುದುಪಜೆ, ಭಾಗಮಂಡಲ, ಕು.ಕೃತಜ್ಞಾ, ಶ್ರೀಮತಿ ಹೆಚ್.ವಿ.ಸುನೀತಾ ವಿಶ್ವನಾಥ್, ಶ್ರೀ ಕೆ.ಎಂ.ತಿಮ್ಮಯ್ಯ, ಕು. ತೌಸೀಫ್ ಅಹಮದ್, ಶ್ರೀಮತಿ ಆಂಡಮಾಡ ಚರಿತ್ರ ಪವನ್, ಶ್ರೀಮತಿ ಕೆ.ಟಿ. ವಾತ್ಸಲ್ಯ, ಶ್ರೀಮತಿ ರಾಣಿ ವಸಂತ್, ಕುಶಾಲನಗರ, ಶ್ರೀಮತಿ ವತ್ಸಲಾ ಶ್ರೀಶ ಇವರುಗಳು ಘನ ವೇದಿಕೆಯಲ್ಲಿ ತಮ್ಮ ಕವನಗಳನ್ನು ಮಂಡಿಸಿದರು.

    ಮುಂದೆ ನಡೆದ “ಬಹಿರಂಗ ಅಧಿವೇಶನ” ಕಾರ್ಯಕ್ರಮವು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

    ಸಮಾರೋಪಕ್ಕೆ ಮೊದಲು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿಗಳಾದ ಶ್ರೀ ಅಡಗೂರು ವಿಶ್ವನಾಥ್ ವಹಿಸಿದ್ದರು.

    ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿ ಡಾ.ಕವಿತಾ ರೈ, ಶಿಕ್ಷಣ ಕ್ಷೇತ್ರದಲ್ಲಿ – ಶ್ರೀ ಸಿ.ಎನ್.ವಿಶ್ವನಾಥ್, ಕನ್ನಡ ಸೇವೆಗಾಗಿ – ಶ್ರೀ ಎನ್.ಜಿ.ಕಾಮತ್, ಸಹಕಾರ ಕ್ಷೇತ್ರಕ್ಕೆ – ಶ್ರೀ ಚಿರಿಯಪ್ಪಂಡ ಉಮೇಶ್ ಉತ್ತಪ್ಪ, ಸಮಾಜ ಸೇವೆಯಲ್ಲಿ – ಶ್ರೀ ಕೆ.ಟಿ.ಬೇಬಿ ಮ್ಯಾಥ್ಯೂ, ರಂಗಭೂಮಿಯಲ್ಲಿನ ಸಾಧನೆಗಾಗಿ – ಶ್ರೀ ಶ್ರೀನಿವಾಸ ನಾಯ್ಡು, ಜನಸೇವೆಗಾಗಿ – ಶ್ರೀ ಉಂಬಯಿ ಗೋಣಿಕೊಪ್ಪಲು, ಜಾನಪದ ಕ್ಷೇತ್ರದಲ್ಲಿ – ಶ್ರೀ ಜೆ.ರಮೇಶ್, ಮಾದರಿ ಶಿಕ್ಷಕ – ಶ್ರೀ ಸತೀಶ್ ಸಿ.ಎಸ್., ಸೇನೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ – ಶ್ರೀ ಹೆಚ್.ಎನ್.ಮಹೇಶ್, ಗಾಯನಕ್ಕೆ – ಶ್ರೀ ಎಂ.ಎಂ.ಲಿಯಾಕತ್ ಅಲಿ, ನೃತ್ಯ ಕ್ಷೇತ್ರದಲ್ಲಿ – ಶ್ರೀಮತಿ ಎ.ಎಸ್.ಪ್ರೇಮಾಂಜಲಿ, ಪತ್ರಕರ್ತ – ಶ್ರೀ ಶ್ರೀಧರ್ ನೆಲ್ಲಿತ್ತಾಯ, ರಕ್ಷಣೆ – ಶ್ರೀ ಚೊಕ್ಕಾಡಿ ಅಪ್ಪಯ್ಯ, ವೈದ್ಯಕೀಯ – ಡಾ.ಅಮೃತ್ ನಾಣಯ್ಯ, ಕನ್ನಡ ಚಳುವಳಿ – ಶ್ರೀ ವೆಂಕಟೇಶ ಪೂಜಾರಿ ಹೀಗೆ ಸಾಧನೆ ಮಾಡಿದ ಈ ಎಲ್ಲಾ ಸಾಧಕರನ್ನು ಹಿರಿಯ ನ್ಯಾಯವಾದಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಇವರು ಭವ್ಯ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.

    ವಿವಿಧ ಪ್ರಶಸ್ತಿ ವಿಜೇತರಿಗೂ ವಿಶೇಷ ಸನ್ಮಾನ ನಡೆಯಿತು.

    ಪದ್ಮಶ್ರೀ ಪುರಸ್ಕೃತರು : ಶ್ರೀಮತಿ ರಾಣಿ ಮಾಚಯ್ಯ, ಮಡಿಕೇರಿ.
    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ : ಡಾ.ಎಂ.ಜಿ.ನಾಗರಾಜ್, ಸಾಹಿತಿ ಮತ್ತು ಸಂಶೋಧಕರು ಹಾಗೂ ಶ್ರೀ ಸೋಮೆಯಂಡ ಗಣೇಶ್ ತಿಮ್ಮಯ್ಯ, ಕೃಷಿ ಕ್ಷೇತ್ರ,
    ಶೌರ್ಯ ಪ್ರಶಸ್ತಿ : ಕು.ದೀಕ್ಷಿತ್ ಕೆ.ಆರ್., ಸ.ಕಿ.ಪ್ರಾ. ಶಾಲೆ ಕುಡ್ಲೂರು ಮತ್ತು ಕು.ನಮೃತಾ ಎಂ.ಎಸ್., ಚೆನ್ನಂಗೋಲ್ಲಿ ಪೊನ್ನಂಪೇಟೆ,
    ಅಂತರಾಷ್ಟ್ರೀಯ ಹಾಕಿ ಕ್ರೀಡಾಪಟುಗಳು : ಶ್ರೀ ವಿ.ಎನ್.ರಘುನಾಥ್, ಹಾತೂರು, ಶ್ರೀ ಸನ್ನುವಂಡ ಉತ್ತಪ್ಪ, ದೇವರಪುರ ಮತ್ತು ಶ್ರೀ ಎಸ್.ವಿ.ಸುನಿಲ್ ಸೋಮವಾರಪೇಟೆ

    16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಶ್ರೀ ಎಂ.ಪಿ.ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು. ಡಾ.ಎಂ.ಪಿ.ರೇಖಾ ಅವರು ಆಶಯ ನುಡಿಗಳನ್ನಾಡಿದರು. ಕವಿ ಹಾಗೂ ಸಾಹಿತಿಗಳಾದ ಶ್ರೀ  ಕಾ.ವೆಂ.ಶ್ರೀನಿವಾಸ ಮೂರ್ತಿಯವರು ಸಮಾರೋಪ ಭಾಷಣವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಸಮ್ಮೇಳನದ ಯಶಸ್ವಿಗಾಗಿ ಹಗಲಿರುಲು ದುಡಿದ ವಿವಿಧ ಸಮಿತಿಗಳ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಂದೆ ಅವರಿಗೆಲ್ಲ ಗೌರವ ಸಮರ್ಪಣೆಯನ್ನು ಈ ಸಂದರ್ಭ ಸಲ್ಲಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous ArticleSanchaya presents ‘Ondu Matteradu’ Kannada Drama at Ranga Shankara
    Next Article ಮೈಮ್ ರಾಮದಾಸ್ ನಿರ್ದೇಶನದಲ್ಲಿ ಅಭಿನವ ನಟನಾ ಶಾಲೆ ಪ್ರಾರಂಭ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.