ಮಡಿಕೇರಿ: ಅಮ್ಮತ್ತಿ ಕೊಡವ ಸಮಾಜವು ಸಾಹಿತಿಕ ಹಾಗೂ ಸಾಂಸ್ಕೃತಿಕವಾಗಿ ಸಿಂಗಾರಗೊಳ್ಳುತ್ತಿದ್ದು , 29 ಹಾಗೂ 30
ಮಾರ್ಚ್ 2025ರಂದು ನಡೆಯಲಿರುವ ‘ಕೊಡವ ಬಲ್ಯನಮ್ಮೆ’ಗೆ ಸಕಲ ಸಿದ್ಧತೆಗಳು ಬಿಡುವಿಲ್ಲದೆ ನಡೆಯುತ್ತಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಅಮ್ಮತ್ತಿ ಕೊಡವ ಸಮಾಜದ ಸಹಯೋಗದಲ್ಲಿ ನಡೆಸುತ್ತಿರುವ ‘ಕೊಡವ ಬಲ್ಯನಮ್ಮೆ’ಯು ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡಿದ್ದು ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಸಾರಥ್ಯದಲ್ಲಿ ತಯಾರಿಗೊಳ್ಳುತ್ತಿದೆ.
ಸಾಂಸ್ಕೃತಿಕ –ಜಾನಪದ ಮೆರವಣಿಗೆ : ಕೊಡವ ಬಲ್ಯನಮ್ಮೆಯ ಮೊದಲ ದಿನ ಬೆಳಗ್ಗೆ 9 ಗಂಟೆಗೆ ಹೊಸೂರು ಜಂಕ್ಷನ್‌ನಿಂದ ಕೊಡವ ಸಮಾಜದವರೆಗೆ ಕೊಡವ ಸಾಂಸ್ಕೃತಿಕ-ಜಾನಪದ ಮೆರವಣಿಗೆಯನ್ನು ಅಮ್ಮತ್ತಿ ನಾಡಿನ ಹಿರಿಯರು ಹಾಗೂ ಸಮಾಜ ಸೇವಕರಾದ ನೆಲ್ಲಮಕ್ಕಡ ಶಂಭು ಸೋಮಯ್ಯ, ಕಾವಾಡಿಚಂಡ ಯು. ಗಣಪತಿ ಉದ್ಘಾಟಿಸಲಿದ್ದಾರೆ. ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾದ ಐನಂಡ ಪ್ರಕಾಶ್ ಗಣಪತಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯನವರು ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಕೆ. ಸುಬ್ರಮಣಿ, ಕೊಡವ ಸಮಾಜ ಒಕ್ಕೂಟ ಇದರ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಚೆಪ್ಪುಡಿರ ಅರುಣ್ ಮಾಚಯ್ಯ, ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಮಾಳೇಟಿರ ಅಭಿಮನ್ಯುಕುಮಾರ್, ಕೊಡವ ಭಾಷಾ ಸಮುದಾಯಗಳ ಕೂಟ(ರಿ) ಇದರ ಅಧ್ಯಕ್ಷರಾದ ಡಾ. ಮೇಚಿರ ಸುಭಾಷ್ ನಾಣಯ್ಯ, ನವಿತ ಸಮಾಜದ ಅಧ್ಯಕ್ಷರಾದ ತಾಪನೆರ ಎಂ. ಸಾಬು, ಬಣ್ಣ ಸಮಾಜದ ಅಧ್ಯಕ್ಷರಾದ ಬೀಕಚಂಡ ಬೆಳ್ಯಪ್ಪ, ಅರಮನೆಪಾಲೆ ಸಮಾಜದ ಮುಖ್ಯಸ್ಥರಾದ ಅರಮನೆಪಾಲೆರ ದೇವಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
‘ಪಟ್ಟೋಲೆ ಪಳಮೆ’ಯ ನಡಿಕೇರಿಯಂಡ ಚಿಣ್ಣಪ್ಪ ಅವರ ಜ್ಞಾಪಕಾರ್ಥವಾಗಿ ನಡೆಸುವ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಪ್ಪುಡಿರ ಪಿ. ಬೆಳ್ಳಪ್ಪ ವಹಿಸಲಿದ್ದು, ಮೇ. ಮುಂಡಂಡ ಎಂ. ಮಾಚಯ್ಯ (ರಿ) ಇವರು ಬರೆದಿರುವ ‘ಎಳ್‌ತ್‌ರ ಜೊಪ್ಪೆ’, ಕ್ಯಾ. ಬಿದ್ದಂಡ ನಾಣಿ ದೇವಯ್ಯ(ರಿ) ಇವರು ಬರೆದಿರುವ ‘ಬೊಳ್ಳಿ ಕೊಂಬ್ರ ಕೂತ್, ಸಣ್ಣುವಂಡ ಎಂ. ವಿಶ್ವನಾಥ್ (ಪ್ರಕಾಶ) ಇವರು ಬರೆದಿರುವ ‘ಕೂತ್ಂಗೊರೆ’, ಉಡುವೆರ ರಾಜೇಶ್ ಉತ್ತಪ್ಪಇವರು ಬರೆದಿರುವ ‘ಕೂಟ್‌ಕರಿ’, ಅಜ್ಜಿನಿಕಂಡ ಪ್ರಮೀಳ ನಾಚಯ್ಯ ಇವರು ಬರೆದಿರುವ ‘ಮರಕೊಟ್ಟ’, ಮುಂಡಂಡ ಎ. ಪೂಣಚ್ಚ ಇವರು ಬರೆದಿರುವ ‘ಎಳತ್‌ರ ಪತ್ತಾಯ’, (ದಿ. ಬಾಚಮಡ ಡಿ. ಗಣಪತಿ) ಇವರ ‘ಕೊಡವ: ಓರ್ ಚಿತ್ರಕಥೆ’, ಮುಕ್ಕಾಟರ ಸರೋಜ ಸುಬ್ಬಯ್ಯ ಇವರು ಬರೆದಿರುವ ‘ಸರೋಜ’ ಹಾಗೂ ಬೊಳ್ಳಚೆಟ್ರಿರ ವಿಜಯ ಚೆಟ್ಟಿಚ ಇವರು ಬರೆದಿರುವ ‘ಚೆಂಬಂದುಡಿ’ ಎಂಬ ಪುಸ್ತಕವನ್ನು ಐ. ಆರ್. ಎಸ್. ಅಧಿಕಾರಿ ದೇವಣಿರ ಪ್ರೀತ್ ಗಣಪತಿ ಇವರು ಲೋಕಾರ್ಪಣೆ ಗೊಳಿಸಲಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಗೆ ತ್ರಿಭಾಷಾ ಸಾಹಿತಿ ಮಂಡಿರ ಜಯ ಅಪ್ಪಣ್ಣ ಇವರ ಭಾವಕಾರ್ಥವಾಗಿ ನಡೆಯುವ ಕೊಡವ ಆಟ್-ಪಾಟ್ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ವಹಿಸಲಿದ್ದು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ಎಸ್. ತಮ್ಮಯ್ಯ ವಿವಿಧ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿದ್ದಾರೆ. ಸಮಾಜ ಸೇವಕ ವಾಲಂದಿರ ಎ. ಜೋಯಪ್ಪ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪುದಿಯೊಕ್ಕಡ ಕಾಶಿ ಕರುಂಬಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಕಾಳಿಮಾಡ ಮೋಟಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೋರಿ ರಾಜಪ್ಪ ಇವರ ಜ್ಞಾಪಕಾರ್ಥವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು, ಉಮ್ಮತ್ತಾಟ್-ವೊನ್ನಾಜಿರ ಧರಣಿ, ಬೊಳಕಾಟ್-ಹುಕ್ಕೆರ ಜಯ ಚಿಣ್ಣಪ್ಪ, ಕೋಲಾಟ್-ಡಾ. ಅಜ್ಜಿನಿಕಂಡ ಸಿ. ಗಣವತಿ, ಕತ್ತಿಯಾಟ್-ಮಲ್ಲವನೆರ ವಿನು ಚಿಣ್ಣಪ್ಪ, ಉದ್ದಿಕೊಟ್ಸ್ ಆಟ್-ಕುಡಿಯರ ಶಾರದ, ಕಪ್ಪೆಯಾಟ್-ಚೊಟ್ಟೆಯಂಡ ಸಮಿತ್ ಸೋಮಣ್ಣ, ಬಾಳೋಪಾಟ್-ಬೊಟ್ಟೋಳಂಡ ಕಾಶಿ ಅಚ್ಚಯ್ಯ, ಕೊಂಬು-ಕೊಟ್ಸ್- ಶ್ರೀನಿವಾಸ್, ವಾಲಗತಾಟ್- ಅಜ್ಜಿಕುಟ್ರಿರ ಸಿ. ಗಿರೀಶ್, ಸಮ್ಮಂದ ಕೊಡ್ಪ-ಚೇನಂಡ ರಘ ಉತ್ತಪ್ಪ, ವರಿಯಕಳಿ-ಪಾಲೇಂಗಡ ಅಮಿತ್ ಭೀಮಯ್ಯ, ಮಂಡೆಕ್ ‘ತುಣಿ’ ಕೆಟ್ಟುವ-ಕ್ಯಾಲೇಟಿರ ಪವಿತ್ ಪೂವಯ್ಯನವರು ಚಾಲನೆಯನ್ನು ನೀಡಲಿದ್ದಾರೆ.
ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ಜ್ಞಾಪಕಾರ್ಥವಾಗಿ ಬೆಳಗ್ಗೆ 11.30 ಗಂಟೆಗೆ ಪುಸ್ತಕ ಮತ್ತು ವಸ್ತು ಪ್ರದರ್ಶನಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯನವರು ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವಂಡ ಪಿ. ಮುತ್ತಪ್ಪ, ಕೊಡಗು ಐರಿ ಸಮಾಜದ ಅಧ್ಯಕ್ಷರಾದ ಮೇಲತ್ತಂಡ ರಮೇಶ್ ಭಾಗವಹಿಸಲಿದ್ದಾರೆ.
ಡಾ. ಬೊಬ್ಬೇರಿಯಂಡ ನಂಜಮ್ಮ-ಚಿಣ್ಣಪ್ಪ ಇವರ ಜ್ಞಾಪಕಾರ್ಥವಾಗಿ ಮಧ್ಯಾಹ್ನ 12.00 ಗಂಟೆಗೆ ನಡೆಸುವ ವಿಚಾರಗೋಷ್ಠಿಗೆ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಚಾಲನೆ ನೀಡಲಿದ್ದು, ರಿ. ಲೆಕ್ಚರರ್ ಚೇಮಿರ ಎಂ. ಭೀಮಯ್ಯ, ರಿ. ಪ್ರಿನ್ಸಿಪಾಲ್ ಪ್ರೊ. ಪಟ್ಟಡ ಎ. ಪೂವಣ್ಣ, ಕುಶಾಲನಗರ ಕೊಡವ ಸಮಾಜದ ಮಾಜಿ ಅಧ್ಯಕ್ಷರಾದ ಮಂಡೇಪಂಡ ಬೋಸ್ ಮೊಣ್ಣಪ್ಪ, ಅರಮನೆಪಾಲೆ ಸಮಾಜದ ಅಧ್ಯಕ್ಷರಾದ ಅರಮನೆಪಾಲೆರ ಕೆ. ಮಂದಣ್ಣ, ಮಡಿಕೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆಯಾದ ಕನ್ನಂಡ ಕವಿತ ಬೊಳ್ಳಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಾಚರಣಿಯಂಡ ಪಿ. ಅಪ್ಪಣ್ಣ ವಹಿಸಲಿದ್ದು, ಡಾ. ಬೋಡುಕುಟ್ಟಡ ರಾಧಿಕಾ ಕುಟ್ಟಪ್ಪ ಇವರು “ಕೊಡವ ಸಂಸ್ಕೃತಿರ ಬೊಳ್‌ಚೆಲ್ ಕೆಂಬಟ್ಟೆ ಜನಾಂಗ” ಹಾಗೂ ಲೆ. ಕ. ಅಜ್ಜಿನಿಕಂಡ ಸಿ. ಬೆಳ್ಯಪ್ಪ(ರಿ) ಇವರು “ಕೊಡವಾಮೆರ ಬೊಳಿಲ್ ಒಕ್ಕಾಮೆರ ಬೊಳ್‌ಚೆ” ಎಂಬ ವಿಷಯದ ಬಗ್ಗೆ ವಿಚಾರ ಮಂಡನೆಯನ್ನು ಮಾಡಲಿದ್ದಾರೆ.
ತ್ರಿಭಾಷಾ ಸಾಹಿತಿ ಡಾ. ಐಚೆಟ್ರಿರ ಮಾ. ಮುತ್ತಣ್ಣ ಇವರ ಜ್ಞಾಪಕಾರ್ಥವಾಗಿ ಮಧ್ಯಾಹ್ನ 2.00 ಗಂಟೆಗೆ ನಡೆಯಲಿರುವ ಕವಿಗೋಷ್ಠಿಯ ಉದ್ಘಾಟನೆಯನ್ನು ಕರ್ನಾಟಕ ಜಾನಪದ ಪರಿಷತ್ ಇದರ ಜಿಲ್ಲಾಧ್ಯಕ್ಷರಾದ ಬಿ. ಜಿ. ಅನಂತಶಯನ ಇವರು ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕುಡಿಯರ ಮುತ್ತಪ್ಪ ಹಾಗೂ ಹಂಚೆಟ್ರಿರ ಫ್ಯಾನ್ಸಿ ಮುತ್ತಣ್ಣನವರು ಭಾಗವಹಿಸಲಿದ್ದಾರೆ. ಕವಿಗೋಷ್ಠಿ ಅಧ್ಯಕ್ಷತೆಯನ್ನು ಕ್ಯಾ. ಬಿದ್ದಂಡ ಡಿ. ನಾಣಯ್ಯ ವಹಿಸಲಿದ್ದು, ಪುತ್ತಾಮನೆ ವಿದ್ಯಾ ಜಗದೀಶ್, ಕೋಟೆರ ಉದಯ ಪೂಣಚ್ಚ, ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ವೈಲೇಶ್ ಪಿ. ಎಸ್, ಬಾದುಮಂಡ ಬೀನಾ ಕಾಳಯ್ಯ, ಕಾಣತಂಡ ವಿವೇಕ್ ಅಯ್ಯಪ್ಪ, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಕೊಟ್ರಂಡ ಶ್ರೀಕಾಂತ್ ಪೂವಣ್ಣ, ಪಂದ್ಯಂಡ ರೇಣುಕಾ ಸೋಮಯ್ಯ ಮತ್ತು ಮೂಕೊಂಡ ಪುಷ್ಪ ವೂಣಚ್ಚ ಕವನ ವಾಚನ ಮಾಡಲಿದ್ದಾರೆ.
ಸಾಹಿತಿ ಬಾಚಮಡ ಡಿ, ಗಣಪತಿ ಇವರ ಜ್ಞಾಪಕಾರ್ಥವಾಗಿ ದಿನಾಂಕ 30 ಮಾರ್ಚ್ 2025ರ ಭಾನುವಾರದಂದು ಬೆಳಗ್ಗೆ 10.00 ಗಂಟೆಗೆ ನಡೆಯುವ ವಿಚಾರಗೋಷ್ಠಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ನಿ. ಇದರ ಜಂಟಿ ಆಯುಕ್ತರಾದ ಪವಿತ್ರ ಗಣವತಿ ಉದ್ಘಾಟಿಸಲಿದ್ದು, ಹಿರಿಯ ವಕೀಲ ಮೇರಿಯಂಡ ಕೆ. ಪೂವಯ್ಯ (ಪೂಮಣಿ), ಬೇಂಗ್‌ನಾಡ್ ಕೊಡವ ಸಮಾಜದ ಅಧ್ಯಕ್ಷರಾದ ಬಾಚರಣಿಯಂಡ ದಿನೇಶ್ ಗಣಪತಿ, ಗೋಣಿಕೊಪ್ಪ ಕಾವೇರಿ ಸಂಸ್ಥೆಯ ಅಧ್ಯಕ್ಷರಾದ ಮಂಡೇಪಂಡ ಸುಗುಣ ಮುತ್ತಣ್ಣ, ಮಾದಾಪುರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪಂಡ ಮನು ಮೇದಪ್ಪ, ಕೊಡವ ತಕ್ಕ ಜನಾಂಗಕಾರಡ ಒಕ್ಕೂಟ ಇದರ ಅಧ್ಯಕ್ಷರಾದ ಕೊರಕುಟ್ಟಿರ ಸರ ಚಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಾಹಿತಿ ಮತ್ತು ಸಂಶೋಧಕರಾಗಿರುವ ಮೂಕೊಂಡ ನಿತಿನ್ ಕುಶಾಲಪ್ಪ ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮೂವೇರ ರೇಖಾ ಪ್ರಕಾಶ್ ಇವರು ‘ಕೊಡವ ಪೊರವಾಡ್‌ರ ಭೀರ್ಯ’ ಹಾಗೂ ಸೋಮೇಂಗಡ ಗಣೇಶ್ ತಿಮ್ಮಯ್ಯ ಇವರು ‘ಕೃಷಿ ಬದ್‌ಕ್‌ಲ್ ಕೊಡವಾಮೆ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆಯನ್ನು ಮಾಡಲಿದ್ದಾರೆ.
ದಿನಾಂಕ 30 ಮಾರ್ಚ್ 2025 ರಂದು ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ಎಸ್. ತಂಗಡಗಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿದ್ದಾರೆ. ಉಸ್ತುವಾರಿ ಸಚಿವರು ಹಾಗೂ ಕೊಡಗು ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಮಂತ್ರಿಗಳಾದ ಎನ್. ಎಸ್. ಬೋಸರಾಜು, ವಿರಾಜಪೇಟೆ ವಿಧಾನ ಸಭಾ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ, ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಸಿಕಲ್ ಇನ್‌ಸ್ಪೆಕ್ಟರ್ ಆದ ತೀತಿರ ರೋಷನ್ ಅಪ್ಪಚ್ಚು, ಕೊಡಗು ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಇದರ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಕರವರ ಟಿ. ಪೆಮ್ಮಯ್ಯ, ಮೈಸೂರು ಕೊಡವ ಸಮಾಜದ ಅಧ್ಯಕ್ಷರಾದ ಪೊಂಜಂಡ ಗಪ್ಪು ಗಣಪತಿ, ಕೊಡಗು ಜಿಲ್ಲಾಧಿಕಾರಿಗಳಾದ ವೆಂಕಟರಾಜ, ಭಾ. ಆ. ಸೇ ಬೆಂಗಳೂರು ಹಾಗೂ ಕನ್ನಡ ಮತ್ತು ನಂಸ್ಕೃಂತಿ ಇಲಾಖೆಯ ಮಾಜಿ ನಿರ್ದೇಶಕಿ ಧರಣೀದೇವಿ ಮಾಲಗತ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಭಾ. ಪೊ. ನೇ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾದ ವಾಂಡಂಡ ಕೆ. ಬೋಪಣ್ಣ, ಸ್ವಾರಾ ಪಾರ್ಟ್ನರ್ ಇದರ ಸಿ. ಇ. ಒ. ಆದ ಪುಗ್ಗರ ಎಂ. ದಿನೇಶ್ ದೇವಯ್ಯ, ಕೊಡಗು ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಐರಿರ ಎ. ಗೋಪಾಲ್, ಕನ್ನಡ ಮತ್ತು ಸಂಸ್ಕೃಂತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ಅಖಿಲ ಅಮ್ಮ ಕೊಡವ ನಮಾಜದ ಅಧ್ಯಕ್ಷರಾದ ಬಾನಂಡ ಎನ್. ಹೃದ್ಯು, ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಪಡಿಖರಂಡ ಜಿ. ಅಯ್ಯಪ್ಪ, ಅರಮನೆಪಾಲೆ ಸಮಾಜದ ಅಧ್ಯಕ್ಷರಾದ ಅರಮನಪಾಲೆರ ಕೆ. ಮಂದಣ್ಣ, ಕುಡಿಯ ಜನಾಂಗದ ಜಾನಪದ ಕಲಾವಿದ ಹುಡಿಯರ ಕೆ. ಪೊನ್ನಪ್ಪ, ಮೇದ ಜನಾಂಗದ ಜಾನಪದ ಕಲಾವಿದರಾದ ಮೇದರ ಚಂದ್ರ, ಕಾವಾಳ ಜನಾಂಗದ ಜಾನಪದ ಕಲಾವಿದರಾದ ಕಾಪಾಳಡ ತಮ್ಮಯ್ಯ ಪೂಣಚ್ಚ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
2022-23 ಮತ್ತು 2023-24ನೇ ವರ್ಷದ ಕೊಡವ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪುರಸ್ಕೃತರನ್ನು ಅಕಾಡೆಮಿಯು ಆಯ್ಕೆ ಮಾಡಿದ್ದು ಇದರ ಪ್ರದಾನ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ವಹಿಸಲಿದ್ದು, ಕೊಡವ ಸಂಸ್ಕೃತಿ ಹಾಗೂ ಪಾಟ್-ಪಡಿವು ಕ್ಷೇತ್ರದಲ್ಲಿ ಕೋಡಿಮಣಿಯಂಡ ತಮ್ಮುಣಿ ಬೋಪಯ್ಯ, ಕೊಡವ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾಟಿಮಡ ಜಿಮ್ಮಿ ಅಣ್ಣಯ್ಯ, ಕೊಡವ ಜಾನಪದ ಕ್ಷೇತ್ರದಲ್ಲಿ ಚೇನಂಡ ರಘು ಉತ್ತಪ್ಪ, ದಾನ-ಧರ್ಮ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಕೈಬುಲಿರ ಪಾರ್ವತಿ ಬೋಪಯ್ಯ, ಕೊಡವ ಆಟ್-ಪಾಟ್ ಹಾಗೂ ಸಂಸ್ಕೃತಿ ಕ್ಷೇತ್ರದಲ್ಲಿ ಚೀಯಕಪೂವಂಡ ಬಿ. ದೇವಯ್ಯ, ಜನ ಸೇವಾ ಕ್ಷೇತ್ರದಲ್ಲಿ ಹೀರಕುಟ್ಟಡ ಟಸ್ಸಿ ಸದನ್ ಇವರುಗಳಿಗೆ ಗೌರವ ಪ್ರಶಸ್ತಿಯನ್ನು ಹಾಗೂ ಮಚ್ಚಮಡ ಲಾಲ ಕುಟ್ಟಪ್ಪ ಇವರ ಮೂಪಾಜೆ ನಿಗಂಟ್, ಐಚಂಡ ರಶ್ಮಿ ಮೇದಪ್ಪ ಇವರ ‘ಸಾಂಸ್ಕೃತಿರ ಪಿಳ್ಳೆ ಧಾರ್ಮಿಕ ಹಿನ್ನಲೆಲ್ ಕೊಡವಡ ಐನ್‌ಮನೆ ಅಧ್ಯಯನ ಗ್ರಂಥ ಪುಸ್ತಕ, ಕೊಟ್‌ಟ್‌ಕತ್ತಿರ ಪ್ರಕಾಶ್ ಕಾರ್ಯಪ್ಪ ಇವರ ‘ನಾಡ ಕೊಡಗ್(ಕಾದಂಬರಿ)’ ಹಾಗೂ ಚೊಟ್ಟೆಯಂಡ ಲಲಿತ ಕಾರ್ಯಪ್ಪ ಇವರ ಅಗ್ಗೇನ’ ಎಂಬ ಪುಸ್ತಕಕ್ಕೆ ಪುಸ್ತಕ ಪ್ರಶಸ್ತಿಯನ್ನು ನೀಡಲಾಗುವುದು.