ಕುಂದಾಪುರ : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 9ನೇ ವಾರ್ಷಿಕೋತ್ಸವ ಹಾಗೂ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ- 2024’ ಪ್ರದಾನ ಸಮಾರಂಭವು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ದಿನಾಂಕ 28-01-2024ರಂದು ಜರಗಿತು. ಮಲ್ಟಿಟೆಕ್ ಅಟೋ ಪಾರ್ಟ್ಸ್ ದೊಡ್ಡಬಳ್ಳಾಪುರದ ಆಡಳಿತ ಪಾಲುದಾರ ನಾಗಭೂಷಣ ರಮೇಶ್ ಐತಾಳ್ ಉಪ್ಪಿನಕುದ್ರು ಅವರು ಅಕಾಡೆಮಿ ಕಟ್ಟಡದ ಆವರಣದಲ್ಲಿ ಸೋಲಾರ್ ದಾರಿದೀಪ ಹಾಗೂ ಏಣಿಯನ್ನು ಕೊಡುಗೆಯಾಗಿ ನೀಡಿ ಉದ್ಘಾಟಿಸಿದರು.
ಮಾಹೆ ಮಣಿಪಾಲದ ಮಾಜಿ ಡೆಪ್ಯುಟಿ ರಿಜಿಸ್ಟ್ರಾರ್ ಟಿ. ರಂಗ ಪೈ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಯಕ್ಷಗಾನ ಚೆಂಡೆ ಕಲಾವಿದ ಯಳ್‌ಜಿತ್ ಸದಾನಂದ ಪ್ರಭು ಇವರಿಗೆ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ 2024’ನ್ನು ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಸ್ಮಾರಕ ಆಸ್ಪತ್ರೆ ಉಡುಪಿಯ ವೈದ್ಯಕೀಯ ಸಲಹೆಗಾರರಾದ ಡಾ. ಬಿ.ವಿ. ಬಾಳಿಗಾ, ಮನೋರೋಗ ತಜ್ಞ ಡಾ. ಪಿ.ವಿ. ಭಂಡಾರಿ, ಲೆಕ್ಕ ಪರಿಶೋಧಕ ಶಿವಾನಂದ ಪೈ ಮಂಗಳೂರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಯಕ್ಷಗಾನ ಮದ್ದಲೆ ಕಲಾವಿದ ಸುರೇಶ್ ಉಪ್ಪೂರು, ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಸೂತ್ರಧಾರಿ ಪ್ರಭಾಕರ್ ಆಚಾರ್, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ನೆಂಪು, ರಾಜ್ಯ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಪಟು ಪ್ರಾರ್ಥನಾ ಪೈ ಗಂಗೊಳ್ಳಿ ಅವರನ್ನು ಅಕಾಡೆಮಿಯ ವತಿಯಿಂದ ಸಮ್ಮಾನಿಸಲಾಯಿತು. ಸೋಲಾರ್ ಲೈಟ್ ಕೊಡುಗೆ ನೀಡಿದ ನಾಗಭೂಷಣ ರಮೇಶ್ ಐತಾಳ್ ಉಪ್ಪಿನಕುದ್ರು ಹಾಗೂ ಯಕ್ಷಗಾನ ಗಾನ ವೈಭವ ಪ್ರಾಯೋಜಕ ಶಿವಾನಂದ ಪೈ ಅವರನ್ನು ಅಕಾಡೆಮಿಯ ವತಿಯಿಂದ ಗೌರವಿಸಲಾಯಿತು.
‘ಯಕ್ಷಗಾನ ಗೊಂಬೆ ಚಿತ್ರ ಬಿಡಿಸಿ ಬಹುಮಾನ ಗೆಲ್ಲಿ’ ಆನ್‌ಲೈನ್ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಪ್ರಶಂಸಾ ಪತ್ರ ಹಾಗೂ ನಗದು ಬಹುಮಾನ, ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ರು ಸ್ವಾಗತಿಸಿ, ಪ್ರಸ್ತಾವನೆಗೈದರು. ನಾಗೇಶ್ ಶ್ಯಾನುಭಾಗ್ ಬಂಟ್ವಾಡಿ ಮತ್ತು ರಾಜೇಂದ್ರ ಪೈ ನಿರ್ವಹಿಸಿದರು.
ಮಯ್ಯ ಯಕ್ಷ ಬಳಗ ಹಾಲಾಡಿ ಇವರಿಂದ ‘ತೆಂಕು – ಬಡಗು ಯಕ್ಷಗಾನ ಗಾನ ವೈಭವ’ ಪ್ರಸ್ತುತಿಯಡಿ ಬಡಗಿನ ಭಾಗವತದ್ವಯರಾದ ರಾಘವೇಂದ್ರ ಮಯ್ಯ ಹಾಲಾಡಿ, ಪ್ರಸನ್ನ ಭಟ್ ಬಾಳ್ಕಲ್, ಮದ್ದಲೆಯಲ್ಲಿ ಶಶಾಂಕ್ ಆಚಾರ್, ಚೆಂಡೆಯಲ್ಲಿ ಸುಜನ ಹಾಲಾಡಿ, ತೆಂಕಿನ ಭಾಗವತರಾಗಿ ಅಮೃತಾ ಅಡಿಗ ಮತ್ತು ಬಳಗದವರು ಭಾಗವಹಿಸಿದ್ದರು. ಬೇಳೂರು ವಿಷ್ಣುಮೂರ್ತಿ ನಾಯಕ್ ನಿರೂಪಿಸಿದರು.