ಕುಂದಾಪುರ : ಉಪ್ಪಿನಕುದ್ರು ಗೊಂಬೆಯಾಟ ಅಕಾಡಮಿಯ ವತಿಯಿಂದ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರ ಕ್ರೀಡೆಯ ಗಾರುಡಿಗ ಶ್ರೀ ಕೊಗ್ಗ ದೇವಣ್ಣ ಕಾಮತ್ ಇವರ ಹೆಸರಿನಲ್ಲಿ ನೀಡುವ ೨೦೨೪-೨೫ರ ಸಾಲಿನ “ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2025” ಪ್ರಶಸ್ತಿಗೆ ಖ್ಯಾತ ಜಾದೂ ಕಲಾವಿದ, ಲೇಖಕ, ರಂಗ ಕಲಾವಿದ, ಚಲನಚಿತ್ರ ನಟ ಶ್ರೀ ಓಂ ಗಣೇಶ್ ಉಪ್ಪುಂದ ಇವರು ಆಯ್ಕೆಯಾಗಿದ್ದಾರೆ.
ಉಪ್ಪುಂದ ದಿ. ನಾರಾಯಣ ಕಾಮತ್ ಹಾಗೂ ದಿ. ಮನೋರಮಾ ಕಾಮತ್ ಇವರ ಸುಪುತ್ರರಾಗಿ 20 ಜನವರಿ 1965 ರಂದು ಜನಿಸಿದ ಓಂ ಗಣೇಶ್ ಉಪ್ಪುಂದ, ಬೈಂದೂರು ಹಾಗೂ ಕುಂದಾಪುರದಲ್ಲಿ ಬಿ.ಕಾಂ. ತನಕ ವಿದ್ಯಾಭ್ಯಾಸ ಪಡೆದರು. ನಂತರ ನಾಟಕದಲ್ಲಿ ಅಭಿನಯ, ತಬಲಾ ನುಡಿಸುವುದನ್ನು ಕಲಿತು ಆರ್ಕೆಸ್ಟ್ರಾ ತಂಡ ಕಟ್ಟಿ ನಾಟಕಕ್ಕೆ ಹಿನ್ನೆಲೆ ಸಂಗೀತ ನುಡಿಸಿದವರು. ವಿಶ್ವದಾದ್ಯಂತ ಜಾದೂ ಪ್ರದರ್ಶನ ನೀಡಿದ ಜಾದೂಗಾರರೂ ಹೌದು. ಶ್ರೀಯುತರು ಹಲವಾರು ಸಿನೆಮಾಗಳಲ್ಲಿ ನಟಿಸಿದ್ದಾರೆ. ಜಾದೂ ಪ್ರದರ್ಶನದೊಂದಿಗೆ ಬೆರಳ ನೆರಳಿನಾಟ ಪ್ರದರ್ಶನ ನೀಡಿದವರು. ಹಲವಾರು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ವಾಗ್ಮಿ ಹಾಗೂ ಲೇಖಕರೂ ಆಗಿರುವ ಇವರ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ.
‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ’, ‘ಡಾ. ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ’, ‘ಕಡಲೋತ್ಸವ ಪುರಸ್ಕಾರ’, ‘ಸಾಂಸ್ಕೃತಿಕ ಕಂಠೀರವ ಪುರಸ್ಕಾರ’ ಹೀಗೆ ಹಲವಾರು ಪ್ರಶಸ್ತಿಗಳನ್ನು ದೇಶ ವಿದೇಶಗಳಿಂದ ಪಡೆದ ಪ್ರತಿಭಾವಂತ ಕಲಾವಿದ ಈತ.
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಹತ್ತನೇ ವಾರ್ಷಿಕೋತ್ಸವವು 19 ಜನವರಿ 2025ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದ್ದು ಆ ಸಂದರ್ಭದಲ್ಲಿ ಭಾಗವಹಿಸುವ ವಿಶೇಷ ಗಣ್ಯರಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ತಿಳಿಸಿದೆ.
Subscribe to Updates
Get the latest creative news from FooBar about art, design and business.
ಬಹುಮುಖ ಪ್ರತಿಭೆ ಓಂ ಗಣೇಶ್, ಉಪ್ಪುಂದ ಇವರಿಗೆ ಉಪ್ಪಿನಕುದ್ರು “ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2025”| ಜನವರಿ 19
No Comments1 Min Read
Previous Articleತೆಕ್ಕಟ್ಟೆಯ ಹಯಗ್ರೀವದಲ್ಲಿ ಉದ್ಘಾಟನೆಗೊಂಡ “ನಾಟಕಾಷ್ಟಕ”
Related Posts
Comments are closed.