ಮಂಗಳೂರು : ಕಾಸರಗೋಡು, ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಮೇಳದವರಿಂದ ಸರಣಿ ಯಕ್ಷಗಾನ ಬಯಲಾಟವು ಏಪ್ರಿಲ್ 21ರಿಂದ 23ರವರೆಗೆ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ದಿನಾಂಕ 21-04-2023ರಂದು ‘ವೀರ ಸೌಮಿತ್ರಿ’, 22-04-2023ರಂದು ‘ವೀರ ಪಂಚಜನ’ ಹಾಗೂ 23-04-2023ರಂದು ‘ವೀರ ಜಾಂಬವ’ ಪ್ರಸಂಗಗಳು ಪ್ರದರ್ಶನಗೊಂಡಿತ್ತು. ಈ ಸಂದರ್ಭ ಮೇಳದ ಸಂಚಾಲಕರಾದ ಶ್ರೀ ಗಣಾಧಿರಾಜ ತಂತ್ರಿ ಉಪಾಧ್ಯಾಯರಿಗೆ ಯಕ್ಷಗಾನದ ಸಾಧನೆಗಾಗಿ ಸನ್ಮಾನ ನಡೆಯಿತು.
ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಕೆ.ಕೃಷ್ಣ ಹೆಬ್ಬಾರ್, ಪ್ರಮುಖರಾದ ಮೋನಪ್ಪ ಶ್ರೀಮಂಜು, ವಾಸುದೇವ ಆಚಾರ್ಯ, ಬದವಿದೆ ವಿಶ್ವೇಶ್ವರ ಭಟ್, ಬಾಲಕೃಷ್ಣ ಭಟ್, ಬಾಯಾರು ಎಸ್.ಎನ್. ಭಟ್, ಎಂ.ಸದಾಶಿವ, ಪ್ರಭಾಕರ್ ಕುಳಾಯಿ, ಎಂ.ಜೆ. ಶೆಟ್ಟಿ ಉದಯ ನಾರಾಯಣ ಮಯ್ಯ, ನವೀನ್ ಹೊಸಬೆಟ್ಟು ಶಕುಂತಳಾ ಪ್ರಕಾಶ್, ಮಧುವನ ಶ್ರೀಧರ ರಾವ್, ನಿಶ್ಚಿತ್ ಪಿಂಗಾರ ಕುಳಾಯಿ, ವಾಸುದೇವ ಹೆಬ್ಬಾರ್, ಬಿ.ಬಿ. ರೈ, ರಮೇಶ್ ಆಚಾರ್ಯ, ಕೆ.ಪಿ. ಚಂದ್ರಶೇಖರ್, ರಾಮಚಂದ್ರ ಕುಂದರ್ ಮತ್ತಿತರರು ಉಪಸ್ಥಿತರಿದ್ದು, ಶಂಕರನಾರಾಯಣ ಮೈರ್ಪಾಡಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.