ಮಂಗಳೂರು : ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭವು ದಿನಾಂಕ 1 ನವೆಂಬರ್ 2025ರಂದು ನಡೆಯಲಿದೆ.
ಸಮಾತಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸುವ ಕೇರಳ ರಾಜ್ಯ ಉಚ್ಚ ನ್ಯಾಯಾಲಯದ ಜಸ್ಟಿಸ್ ನಗರೇಶ ಇವರು ಪುರಸ್ಕಾರ ಪ್ರದಾನ ಮಾಡಲಿದ್ದು, ಮಹಾ ಪೋಷಕ ಶ್ರೀ ಟಿ. ವಿ. ಮೋಹನದಾಸ ಪೈ ಆಶಯ ಭಾಷಣ ನೀಡಲಿದ್ದಾರೆ. ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಹಿರಿಯರನ್ನು ಗೌರವಿಸಲು ಸ್ಥಾಪಿಸಲಾದ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ ಪ್ರಶಸ್ತಿಯು ಹಿರಿಯ ಕೊಂಕಣಿ ಸಾಹಿತಿ, ಹೋರಾಟಗಾರ ಶ್ರೀ ಪುಂಡಳೀಕ ಎನ್.ನಾಯಕ್ ಇವರ ಅಪಾರ ಕೊಡುಗೆಯನ್ನು ಪರಿಗಣಿಸಿ ಪ್ರದಾನ ಮಾಡಲಾಗುವುದು.
ಈ ರ‍್ಷದ ಅತ್ಯುತ್ತಮ ಕೊಂಕಣಿ ಕವಿತಾ ಕೃತಿಗೆ ನೀಡಲಾಗುವ ಶ್ರೀಮತಿ ವಿಮಲಾ ವಿ. ಪೈವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ-೨೦೨೫ ಕೊಂಕಣಿ ಕವಿ ಶಶಿಕಾಂತ ಪೂನಾಜಿ ಇವರ “ಗುಠೆಣಿ” ಯೆಂಬ ಕವಿತಾ ಕೃತಿಗೆ ನೀಡಲಾಗುವುದು.
ಈ ವರ್ಷದ ಅತ್ಯುತ್ತಮ ಕೊಂಕಣಿ ಸಾಹಿತ್ಯ ಕೃತಿಗೆ ನೀಡಲಾಗುವ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಕೃತಿ ಪುರಸ್ಕಾರ -2025ನ್ನು ಕೊಂಕಣಿ ಲೇಖಕ, ಪ್ರಾಧ್ಯಾಪಕ ಬಾಲಚಂದ್ರ ಗಾಂವಕಾರ ಇವರ “ಪನವತ” ಯೆಂಬ ಸಾಹಿತ್ಯ ಕೃತಿಗೆ ನೀಡಲಾಗುವುದು.
ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ -2025, ಎರಡು ಪ್ರಶಸ್ತಿಗಳ ಪೈಕಿ ಒಂದು ಪ್ರಶಸ್ತಿಯನ್ನು ಕುದ್ಮುಲ್ ರಂಗರಾವ ಸ್ಥಾಪಿತ ಈಶ್ವರಾನಂದ ಮಹಿಳಾ ಸೇವಾಶ್ರಮ ಸಂಸ್ಥೆಗೆ (ಅನಾಥಾಲಯ ಸೇವೆ) ಹಾಗೂ ಇನ್ನೊಂದು ಪ್ರಶಸ್ತಿಯನ್ನು ಹೊಸಬೆಳಕು ಸೇವಾ ಸಂಸ್ಥೆಗೆ (ನಿರ್ಗತಿಕರ ಸೇವೆ) ಪ್ರದಾನ ಮಾಡಲಾಗುವುದು. ಈ 5 ಪುರಸ್ಕಾರವು ತಲಾ ಒಂದು ಲಕ್ಷ ರೂಪಾಯಿಗಳ ಸಮ್ಮಾನಧನ ಫಲಕ, ಫಲ ಮತ್ತು ತಾಂಬೂಲಗಳನ್ನು ಹೊಂದಿದೆ.
ಈ ಸಂದರ್ಭದಲ್ಲಿ ಮುಕುಂದ ಪ್ರಭು, ರೋಕಿ ಮಿರಾಂದ, ಎರಿಕ್ ಒಝೇರಿಯೊ, ಮಾಧವಿ ಸರದೇಸಾಯಿ, ಗೋಕುಲದಾಸ ಪ್ರಭು, ಉಳ್ಳಾಲ ಮೋಹನ ಕುಮಾರ ಈ ಆರು ಮಂದಿ ಕೊಂಕಣಿ ಸಾಧಕರ ಭಾವಚಿತ್ರಗಳು ವಿಶ್ವ ಕೊಂಕಣಿ ಕೀರ್ತಿಮಂದಿರದಲ್ಲಿ ಅನಾವರಣಗೊಳ್ಳಲಿದೆ.
ಕಾರ್ಯಕ್ರಮಗಳು ವಿಶ್ವ ಕೊಂಕಣಿ ಕೇಂದ್ರದ ಚೆಯರಮೆನ್ ಡಾ ಪಿ ದಯಾನಂದ ಪೈ, ಅಧ್ಯಕ್ಷರಾದ ಸಿಎ ನಂದಗೋಪಾಲ್ ಶೆಣೈ, ಉಪಾಧ್ಯಕ್ಷರುಗಳಾದ ವಿಲಿಯಂ ಡಿ’ಸೋಜ, ಡಾ. ಕಿರಣ್ ಬುಡ್ಕುಳೆ, ರಮೇಶ್ ಡಿ. ನಾಯಕ್, ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ್ ಪೈ, ಕೋಶಾಧಿಕಾರಿ ಬಿ. ಆರ್. ಭಟ್ ಹಾಗೂ ಇತರ ಟ್ರಸ್ಟಿಗಳ ಮುಂದಾಳುತ್ವದೊಂದಿಗೆ ಜರುಗಲಿವೆ.
ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗುವ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ನೆರೆಯ ರಾಜ್ಯಗಳಿಂದಲೂ ಮಾತೃಭಾಷಾಭಿಮಾನಿಗಳು, ಸಾಹಿತ್ಯಾಸಕ್ತರು ಭಾಗವಹಿಸಲಿರುವರು.
 
  
 


 
									 
					