ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 05 ಜುಲೈ 2025ರಂದು ʼಕಾವ್ಯಾಂ ವ್ಹಾಳೊ-4ʼ ಶೀರ್ಷಿಕೆಯಡಿ ಕವಿ ಗೋಷ್ಠಿಯನ್ನು ಹಮ್ಮಿಕೊಂಡಿದೆ.
ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಬರಹಗಾರರಾದ ಶ್ರೀ ಎಡ್ವಿನ್ ನೆಟ್ಟೊ (ಎಡಿ ನೆಟ್ಟೊ)ಇವರನ್ನು ಸನ್ಮಾನಿಸಲಾಗುವುದು. ಶ್ರೀ ಅರುಣ್ ಜಿ. ಶೇಟ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ವೆಂಕಟೇಶ್ ನಾಯಕ್ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಶ್ರೀಮತಿ ಫೆಲ್ಸಿ ಲೋಬೊ ದೆರೆಬೈಲ್ ಇವರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕವಿಗೋಷ್ಠಿಯಲ್ಲಿ ಶ್ರೀಮತಿ ಜೋಯ್ಸ್ ಕಿನ್ನಿಗೋಳಿ, ಶ್ರೀ ಹೆನ್ರಿ ಮಸ್ಕರೇನ್ಹಸ್, ಶ್ರೀ ಎಡ್ವರ್ಡ್ ಲೋಬೊ, ಶ್ರೀ ಲಾರೆನ್ಸ್ ಬ್ಯಾಪ್ಟಿಸ್ಟ್, ಶ್ರೀಮತಿ ಜೂಲಿಯೆಟ್ ಫರ‍್ನಾಂಡಿಸ್, ಶ್ರೀ ರೋಬರ್ಟ್ ಡಿಸೋಜ, ಶ್ರೀ ವಾಸುದೇವ ಶ್ಯಾನ್‌ಭಾಗ್, ಶ್ರೀಮತಿ ಕುಸುಮಾ ಕಾಮತ್, ಶ್ರೀ ಮೆಲ್ವಿನ್ ವಾಸ್ ನೀರ್‌ಮಾರ್ಗ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಲಿರುವರು.