ಮೂಡಬಿದರೆ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಐ. ಸಿ. ವೈ. ಎಮ್. ಹೊಸ್ಪೆಟ್ ಘಟಕ ಇವರ ಸಹಯೋಗದಲ್ಲಿ ಕೊಂಕಣಿ ಸಾಹಿತ್ಯ ಕಾರ್ಯಗಾರವು ದಿನಾಂಕ 20 ಜುಲೈ 2025ರಂದು ಭಾನುವಾರ ಬೆಳಿಗ್ಗೆ ಘಂಟೆ 10.00 ರಿಂದ ಸಂಜೆ ಘಂಟೆ 5.00ರ ತನಕ ಮೂಡುಬಿದರೆಯ ಹೊಸ್ಪೆಟ್ ಚರ್ಚ್ ಇದರ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಗಾರದಲ್ಲಿ ಶ್ರೀಮತಿ ಫೆಲ್ಸಿ ಲೋಬೊ, ದೆರೆಬೈಲ್ ಇವರು ಕವನ ಬರೆಯುವ ಕುರಿತು ತರಬೇತಿ ನೀಡಲಿದ್ದು, ಕೊಂಕಣಿ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಡಾ. ಜೊಯರ್ ರುಡೋಲ್ಪ್ ನೊರೊನ್ಹಾ ಹಾಗೂ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಶ್ರೀ ರೊನಿ ಕ್ರಾಸ್ತಾ, ಕೆಲರಾಯ್ ಉಪನ್ಯಾಸ ನೀಡಲಿದ್ದಾರೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹೊಸ್ಪೆಟ್ ಚರ್ಚ್ ಇದರ ಧರ್ಮ ಗುರುಗಳಾದ ಅ. ವಂ. ಗ್ರೆಗೊರಿ ಡಿಸೋಜರವರು ಭಾಗವಹಿಸಲಿದ್ದು, ಐ. ಸಿ. ವೈ. ಎಮ್ ಹೊಸ್ಪೆಟ್ ಘಟಕದ ಅಧ್ಯಕ್ಷರಾದ ಶ್ರೀ ರೊಲ್‌ಸ್ಟನ್ ಫ್ಲೆಮಿಂಗ್ ಡಿಸೋಜ, ಹೊಸ್ಪೆಟ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಮನೋಹರ್ ಕುಟಿನ್ಹಾ, ಸಿ. ಎಸ್. ಸಿ. ಎ. ಅಧ್ಯಕ್ಷರಾದ ಶ್ರೀ ವಿನೋದ್ ಪಿಂಟೊ ಇವರು ಉಪಸ್ಥಿತರಿರುವರು. ಕೆನರಾ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಇವರ ಸಹಕಾರದಲ್ಲಿ ಈ ಕಾರ್ಯಕ್ರಮವು ನಡೆಯಲಿರುವುದು.
ಈ ಕಾರ್ಯಕ್ರಮದಲ್ಲಿ ಕೊಂಕಣಿ ಸಾಹಿತಿಗಳು ಹಾಗೂ ಕೊಂಕಣಿ ಅಭಿಮಾನಿಗಳು ಭಾಗವಹಿಸಲು ಕೋರಲಾಗಿದೆ.

