ಮಂಗಳೂರು: “ಕೊಂಕಣಿಯ ವೀರಮಹಿಳೆ’ ನಾಮಾಂಕಿತ ಸಾಹಿತಿ, ಪ್ರಕಾಶಕಿ, ಕುಲಶೇಖರ ನಿವಾಸಿ ಸಿಂಪ್ರೊಜಾ ಫಿಲೋಮಿನ ಗ್ಲೇಡಿಸ್ ಸಿಕ್ವೇರಾ ಇವರು ದಿನಾಂಕ 21 ಜುಲೈ 2025ರಂದು ಉಳ್ಳಾಲದ ಸೊಮೇಶ್ವರದಲ್ಲಿರುವ “ಪಶ್ಚಿಮ್ ವೃದ್ಧಾಶ್ರಮದಲ್ಲಿ ನಿಧನ ಹೊಂದಿದರು. ಇವರಿಗೆ 80ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಕಾರ್ಯ ನಿರ್ವಹಿಸಿದ ಇವರು, ಕಥೆ, ಕಾದಂಬರಿ, ಕವನ, ಲೇಖನಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು. ಪ್ರಕಾಶಕಿಯಾಗಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿರುವ ಇವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿದ್ದರು
ಇವರಿಗೆ 2004ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಸಂದೇಶ ಹಾಗೂ ದಾಯ್ಜಿ ದುಬೈ ಪುರಸ್ಕಾರ ಅಭಿಸಿದೆ.
Subscribe to Updates
Get the latest creative news from FooBar about art, design and business.
Previous Articleಕಲ್ಕೂರ ಪ್ರತಿಷ್ಠಾನದ ವತಿಯಿಂದ ನುಡಿ ನಮನ