ಉಡುಪಿ : ಬೆಂಗಳೂರಿನಲ್ಲಿ ಸದಾ ಚಟುವಟಿಕೆಯಿಂದಿರುವ ಹಾಗೂ ಕಳೆದ 12 ವರ್ಷದಿಂದ ಕೋಟದ ಹಂದೆ ದೇವಸ್ಥಾನದಲ್ಲಿ ಯಕ್ಷಗಾನ ಬೇಸಿಗೆ ಶಿಬಿರ ಮಾಡುತ್ತಿರುವ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಉಡುಪಿ ಕುಂದಾಪುರ ತಾಲೂಕಿನ ಕೊಮೆ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಶ್ವೇತಯಾನದ ಅಡಿಯಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ಉಡುಪಿಯ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ದಿನಾಂಕ 31-03-2024ರಂದು ‘ಕೃಷ್ಣಲೀಲೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಯಕ್ಷಗಾನವು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆಯಲಿದ್ದು, ಕಲಾವಿದರಾಗಿ ಹಿಮ್ಮೇಳದಲ್ಲಿ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಮತ್ತು ಸುದೀಪ ಉರಾಳ ಹಾಗೂ ಮುಮ್ಮೇಳದಲ್ಲಿ ತಮ್ಮಣ್ಣ ಗಾಂವ್ಕರ್, ದಿನೇಶ್ ಕನ್ನಾರ್, ಸ್ಪೂರ್ತಿ ಭಟ್, ರಾಘವೇಂದ್ರ ತುಂಗ ಕೆ., ಸತೀಶ ಹಾಲಾಡಿ, ಪ್ರಶಾಂತ್ ಆಚಾರ್ಯ, ರಾಜು ಪೂಜಾರಿ ಮತ್ತು ಇನ್ನಿತರರು ಭಾಗವಹಿಸಲಿದ್ದಾರೆ.