ಕಾಸರಗೋಡು : ಬ್ರಹ್ಹೈಕ್ಯ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಸ್ಮರಣೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ ಅರ್ಪಿಸುವ ‘ಕೃಷ್ಣ ಸಾರಥ್ಯ ಸ್ವೀಕಾರ’ ಯಕ್ಷಗಾನ ತಾಳಮದ್ದಳೆಯು ದಿನಾಂಕ 11 ಜುಲೈ 2025ರಂದು ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ಸಂಜೆ ಘಂಟೆ 6.00 ರಿಂದ 8.00ರ ವರೆಗೆ ನಡೆಯಲಿದೆ.
ಕಾರ್ಯಕ್ರಮದ ಹಿಮ್ಮೇಳದಲ್ಲಿ ಕಾವ್ಯಶ್ರೀ ನಾಯಕ್ ಆಜೇರು, ಅಡೂರು ಲಕ್ಷ್ಮೀನಾರಾಯಣ ರಾವ್ ಲವ ಕುಮಾರ್ ಐಲ ಸಹಕರಿಸಲಿದ್ದು, ಮುಮ್ಮೇಳದಲ್ಲಿ ಹಿರಣ್ಯ ವೆಂಕಟೇಶ್ವರ ಭಟ್, ಉಜಿರೆ ಅಶೋಕ ಭಟ್, ಶೇಣಿ ವೇಣುಗೋಪಾಲ ಭಟ್, ಕೇಕಣಾಜೆ ಕೇಶವ ಭಟ್ ಭಾಗವಹಿಸಲಿದ್ದಾರೆ.

