ಮೈಸೂರು: ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ಮಕ್ಕಳ ಯಕ್ಷಗಾನ ‘ಕೃಷ್ಣಾರ್ಜುನರ ಕಾಳಗ’ವು ದಿನಾಂಕ 16 ಜನವರಿ 2025ರಂದು ಮೈಸೂರಿನ ರಂಗಾಯಣದ ‘ವನರಂಗ’ದಲ್ಲಿ ನಡೆಯುತ್ತಿರುವ ಬಹುರೂಪಿ ನಾಟಕೋತ್ಸವದಲ್ಲಿ ‘ಸಿನ್ಸ್ 1999 ಶ್ವೇತಯಾನ-99’ ಕಾರ್ಯಕ್ರಮದಲ್ಲಿ ನಡೆಯಿತು.
ಕಾರ್ಯಕ್ರಮದ ಬಳಿಕ ತಂಡವನ್ನು ಅಭಿನಂದಿಸಿದ ಮೈಸೂರು ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು ಮಾತನಾಡಿ “ಕರಾವಳಿಯ ರಂಗ ಸೊಗಡು ಯಕ್ಷಗಾನ ಉಡುಗೆಗಳು ಕಲಾ ಪ್ರಕಾರಗಳಲ್ಲಿಯೇ ಶ್ರೀಮಂತವಾದದ್ದು. ಅದರಲ್ಲಿಯೂ ಮಕ್ಕಳು ರಂಗದಲ್ಲಿ ಅಭಿನಯಿಸುವಾಗ ಮಕ್ಕಳೆಂದು ಎಣಿಸಲಾಗದೇ ಇದ್ದದ್ದು ಸೋಜಿಗ. ಕೃಷ್ಣಾರ್ಜುನರಾಗಿ, ಸುಭದ್ರೆ-ರುಕ್ಮಿಣಿಯಾಗಿ, ಭೀಮ-ದಾರುಕರಾಗಿ, ಅಭಿಮನ್ಯುವಾಗಿಯೇ ಕಾಣಿಸಿಕೊಂಡು ಪ್ರೇಕ್ಷಕರಿಗೆ ಸಿಹಿ ಕಹಿಯಾಗಿ ಉಣಿಸಿ ಗೆದ್ದು ವಿಜೃಂಬಿಸಿದರು. ಇದು ಕರಾವಳಿಯ ಯಕ್ಷಗಾನದ ವಿಷೇಷ” ಎಂದರು.
ರಂಗ ನಿರ್ದೇಶಕ ಪ್ರಸನ್ನ, ಭಾಗವತರಾಗಿ ಲಂಬೋದರ ಹೆಗಡೆ ಮತ್ತು ಪ್ರಾಚಾರ್ಯರಾದ ದೇವದಾಸ್ ರಾವ್ ಕೂಡ್ಲಿ, ಚರಿತಾ ಭಾರದ್ವಾಜ್, ಶ್ರೀಷ ಭಟ್ ತೆಕ್ಕಟ್ಟೆ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಬಹುರೂಪಿ ನಾಟಕೋತ್ಸವದಲ್ಲಿ ಯಶಸ್ವೀ ಕಲಾವೃಂದದ ಕಲಾವಿದರಿಂದ ‘ಕೃಷ್ಣಾರ್ಜುನರ ಕಾಳಗ’ ಯಕ್ಷಗಾನ ಪ್ರದರ್ಶನ
No Comments1 Min Read
Previous Articleಮೈಸೂರಿನ ‘ನಟನ’ದಲ್ಲಿ ‘ಹೂವಿನಕೋಲು’ ಯಕ್ಷಗಾನ ಪ್ರಕಾರದ ಪ್ರದರ್ಶನ
Next Article ಮಂಡ್ಯದಲ್ಲಿ ವಿಜಯೋತ್ಸವ ಆಚರಿಸಿದ ‘ಸಾನಿಧ್ಯ’ದ ಮಕ್ಕಳು