ಕುಂದಾಪುರ : ಮಯೂರ ಸ್ಕೂಲ್ ಆಫ್ ಆರ್ಟ್ಸ್ ಪ್ರಸ್ತುತ ಪಡಿಸುವ ‘ಪಂಚತರಂಗ’ ಬೇಸಿಗೆ ಶಿಬಿರವು ಇದೇ ಬರುವ ಮೇ 3ರಿಂದ 7ರವರೆಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯ ಜೆ.ಸಿ.ಐ. ಸಭಾಭವನದಲ್ಲಿ ನಡೆಯಲಿದೆ.
ಈ ಶಿಬಿರವು ಹಾಡು ಮತ್ತು ಕಥೆ, ಮಕ್ಕಳಿಗಾಗಿ ನಗೆ ಹಬ್ಬ, ಮಂಡಲ ಆರ್ಟ್, ವಿನೂತನ ರಂಗೋಲಿ ಕಲೆ ಹಾಗೂ ಪುಷ್ಪ ಮಾಲ ವಿನ್ಯಾಸ ಮುಂತಾದ ವಿಷಯಗಳನ್ನೊಳಗೊಂಡಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ರತ್ನಾವತಿ ಬೈಕಾಡಿ, ಅಕ್ಷತಾ ಬೈಕಾಡಿ ಮಂಗಳೂರು, ಪಟ್ಟಾಭಿರಾಮ ಸುಳ್ಯ, ಮಹೇಶ್ ರಾವ್, ಉಡುಪಿ, ವಿದ್ಯಾ ವಿಶ್ವೇಶ್, ವೈಷ್ಣವಿ, ಮಂಗಳೂರು, ರೂಪ ವಸುಂದರಾ, ಪಡುಬಿದ್ರೆ ಭಾಗವಹಿಸಲಿದ್ದಾರೆ.
ಈ ಶಿಬಿರವು 5ರಿಂದ 15ನೇ ವಯಸ್ಸಿನ ಮಕ್ಕಳಿಗಾಗಿದ್ದು, ಮೊದಲು ನೊಂದಿಯಿಸಿದ 50 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನಿಗದಿಪಡಿಸಲಾಗಿದೆ.
ಶಿಬಿರದ ಶುಲ್ಕವು 800 ರೂ. ಗಳಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9448925539 ಮತ್ತು 7483620524 ಸಂಖ್ಯೆಯನ್ನು ಸಂಪರ್ಕಿಸಬಹುದು.