ಮಂಗಳೂರು : ಕುಂದಾಪ್ರ ಕನ್ನಡ ಸಂಭ್ರಮಾಚರಣೆಯ ಅಂಗವಾಗಿ 11 ಆಗಸ್ಟ್ 2024ರಂದು ‘ಕುಡ್ಲಂಗಿಪ್ಪಕುಂದಾಪ್ರ’ದವರೆಲ್ಲ ಸೇರಿ ಹಮ್ಮಿಕೊಂಡಿರುವ ‘ವಿಶ್ವ ಕುಂದಾಪ್ರ ದಿನಾಚರಣೆ’ಯ ಪ್ರಯುಕ್ತ ಕುಂದಗನ್ನಡ ಭಾಷೆಯ ಕಥಾ ಸಂಕಲನಕ್ಕೆ ಕಥೆಗಳನ್ನು ಆಹ್ವಾನಿಸಲಾಗಿದೆ.
ಸಣ್ಣ ಕಥೆಗಳು ಕುಂದಗನ್ನಡ ಭಾಷೆಯಲ್ಲಿರಬೇಕು, ಕುಂದಾಪ್ರ ಪ್ರದೇಶದ ವಿಚಾರದ ಕಥಾವಸ್ತು ಹೊಂದಿರಬೇಕು. ಕಥೆಯು 1,000 ಪದಗಳಿಗೆ ಸೀಮಿತವಾಗಿರಬೇಕು. ಆಯ್ಕೆಯಾದ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಮೆಚ್ಚುಗೆ ಗಳಿಸಿದ ಕಥೆಗಳಿಗೆ ಬಹುಮಾನವೂ ಇದೆ. ಕಥೆಗಳನ್ನು ನುಡಿಯಲ್ಲಿ ಅಥವಾ ಬರಹದಲ್ಲಿ ಮಾತ್ರವೇ ಟೈಪ್ ಮಾಡಿ ಕಳುಹಿಸಿಕೊಡಬೇಕು. 4 ಆಗಸ್ಟ್ 2024 ಕಥೆ ಕಳುಹಿಸಲು ಕೊನೆಯ ದಿನ.
ಕಥೆಯ ಕೊನೆಯಲ್ಲಿ ಬರೆದವರ ಪೂರ್ಣ ಹೆಸರು ಸಹಿತ ವಿಳಾಸ ಮತ್ತು ದೂರವಾಣಿ ಸಂಖ್ಯೆ ನಮೂದಿಸಬೇಕು. ಇಮೇಲ್ ವಿಳಾಸ: [email protected]
Subscribe to Updates
Get the latest creative news from FooBar about art, design and business.
Previous Articleಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ‘ಸಾಹಿತ್ಯ ಸುಗ್ಗಿ’
Related Posts
Comments are closed.