ಧರ್ಮಸ್ಥಳ : ಸ್ಪೂರ್ತಿದಾಯಕ ಮತ್ತು ಕಲಿಕೆಗೆ ಅವಕಾಶ ಮಾಡಿಕೊಡುವ ಕರುಂಬಿತ್ತಿಲ್ ಶಿಬಿರ ಮೇ ತಿಂಗಳಲ್ಲಿ 24ರಿಂದ 28ರವರೆಗೆ ಧರ್ಮಸ್ಥಳ ನಿಡ್ಲೆಯಲ್ಲಿರುವ ಕರುಂಬಿತ್ತಿಲ್ ಮನೆಯಲ್ಲಿ ನಡೆಯಲಿದೆ. ನಾದಯೋಗಿ ಪ್ರೊ. ವಿ.ವಿ. ಸುಬ್ರಮಣ್ಯಂ, ಡಾ. ರಾಜ್ ಕುಮಾರ್ ಭಾರತಿ, ಕಲೈಮಾಮಣಿ ಉನ್ನಿಕೃಷ್ಣನ್, ಸಂಗೀತ ಚೂಡಾಮಣಿ ಅಭಿಷೇಕ್ ರಘುರಾಮ್ ಮತ್ತು ಇತರ ಅನೇಕ ಪ್ರಮುಖ ಸಂಗೀತಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿರುವರು.
ಬೋಧನೆಗಳು, ಸಂಗೀತ ಕಛೇರಿಗಳು, ಸಂಗೀತ ಚಟುವಟಿಕೆಗಳು, ಲಯ, ಯಕ್ಷಗಾನ ಇತ್ಯಾದಿಗಳೊಂದಿಗೆ ಶಿಬಿರಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿರುವ ಅನೇಕ ಕಲಿಕೆಗಳೇ ಈ ಶಿಬಿರದ ವೈಶಿಷ್ಟ್ಯಗಳು. ಸಂಗೀತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಮತ್ತು ಸಂಗೀತಾಸಕ್ತ ವಿದ್ಯಾರ್ಥಿಗಳು ಪೂರ್ಣವಾಗಿ 5 ದಿನಗಳೂ ಶಿಬಿರದಲ್ಲಿ ಭಾಗವಹಿಸಿ ಅನುಭವ ಪಡೆದುಕೊಳ್ಳುವುದಕ್ಕಾಗಿ ನಿಮ್ಮನ್ನು ಈ ಶಿಬಿರ ಸ್ವಾಗತಿಸುತ್ತಿದೆ.
ಉಚಿತ ಪ್ರವೇಶ ಗೂಗಲ್ ಫಾರ್ಮ್ ಮುಖಾಂತರ ನೋಂದಣಿ ಮಾಡಿಕೊಳ್ಳಬಹುದು. ಶ್ರೀ ವಿಠಲ್ ರಾಮಮೂರ್ತಿ ಮತ್ತು ಕರುಂಬಿತ್ತಿಲ್ ಕುಟುಂಬ ತಮ್ಮನ್ನು ಈ ಶಿಬಿರಕ್ಕೆ ಆದರದಿಂದ ಸ್ವಾಗತಿಸುತ್ತಿದೆ.
ಶ್ರೀ ವಿಠಲ್ ರಾಮಮೂರ್ತಿ 9444021850,
ಕೃತಿ ಭಟ್ 9632694549, ವಿಜಯಶ್ರೀ ವಿಠಲ್ : 9940089448 ವಿಶ್ವಾಸ್ ಕೃಷ್ಣ: 9611308860
ಇಮೇಲ್ : [email protected] [email protected]
ಸಂಗೀತ ಕ್ಷೇತ್ರದ ಮೇರು ವ್ಯಕ್ತಿಗಳಾದ ಡಾ. ಎಂ. ಬಾಲಮುರಳಿಕೃಷ್ಣ, ಲಾಲ್‌ಗುಡಿ ಜಿ. ಜಯರಾಮನ್, ಉಮಯಾಳ್ ಪುರಂ ಕೆ.ಶಿವರಾಮನ್, ಟಿ.ಎಂ.ಕೃಷ್ಣ, ಅಭಿಷೇಕ್, ರಘುರಾಮ್, ಬಾಂಬೆ ಜಯಶ್ರೀ ಹೀಗೆ ಇವರೆಲ್ಲಾ ಈ ಹಿಂದೆ ನಡೆದ ಕರುಂಬಿತ್ತಿಲ್ ಸಂಗೀತ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಕರುಂಬಿತ್ತಿಲ್ ಶಿಬಿರದ ಬಗ್ಗೆ : ವಿಠಲ ರಾಮಮೂರ್ತಿ ಮತ್ತು ಮನೆಯವರು 18 ವರ್ಷ ಹಿಂದೆ ಸೇರಿ ನಡೆಸುತ್ತಿದ್ದ ಸಂಗೀತ ಕಾರ್ಯಕ್ರಮ ಬೆಳೆದು ಈಗ ಎಲ್ಲರೂ ಕಾತರದಿಂದ ಕಾಯುವ ಸಂಗೀತ ಅಧ್ಯಯನ ಶಿಬಿರವಾಗಿ ಮಾರ್ಪಟ್ಟು, ಒಂದು ವಾರ ನಡೆಯುವ ಶಿಬಿರದಲ್ಲಿ ಪ್ರತಿವರ್ಷವೂ 200ಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸುತ್ತಾರೆ. ಶಿಬಿರದ ದಿನಗಳಲ್ಲಿ ಬೆಳಗ್ಗೆ 5ರಿಂದ ಆರಂಭವಾಗುವ ಸಂಗೀತ ಆರಾದನೆ ರಾತ್ರಿ 12 ಗಂಟೆಯವರೆಗೂ ನಡೆಯುತ್ತದೆ. ಪ್ರಮುಖರ ಸಂಗೀತ ಕಛೇರಿಗಳು, ತರಗತಿಗಳು, ಪ್ರಾತ್ಯಕ್ಷಿಕೆ, ಸಂಗೀತಕ್ಕೆ ಸಂಬಂಧಿತ ರಸಪ್ರಶ್ನೆ, ಶಿಬಿರದ ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ, ಸಂದರ್ಶನ ಹೀಗೆ ಕರುಂಬಿತ್ತಿಲ್ ಪರಿಸರವೇ ಸಂಗೀತಮಯವಾಗಿ ಮಾರ್ಪಡುತ್ತದೆ.
ಕರುಂಬಿತ್ತಿಲ್ ಶಿಬಿರದಲ್ಲಿ ಸಂಗೀತ ಕ್ಷೇತ್ರದ ಹಳೆಬೇರು ಮತ್ತು ಹೊಸ ಚಿಗುರಿನ ಸಂಗಮವಾಗುತ್ತದೆ. ಹಿರಿಯ ಸಂಗೀತಗಾರರು ತಮ್ಮ ಅರಿವು, ಜ್ಞಾನ, ಅನುಭವಗಳನ್ನು ಕಿರಿಯರಿಗೆ ಧಾರೆಯೆರೆಯುತ್ತಾರೆ. ಹಿರಿಯ ಸಂಗೀತ ದಿಗ್ಗಜರ ಹಾಡುಗಾರಿಕೆಯ ತರಗತಿಗಳನ್ನು ಕಣ್ಣು, ಕಿವಿ, ಹೃದಯ ಒಂದಾಗಿಸಿ ಶಿಬಿರಾರ್ಥಿಗಳು ಗ್ರಹಿಸಿಕೊಳ್ಳುತ್ತಾರೆ. ಮರೆಯದ ಅನುಭವ ನೀಡುವ ಈ ಶಿಬಿರ ಸಂಗೀತಾಸಕ್ತರನ್ನು ಆಕರ್ಷಿಸುತ್ತದೆ. ಶಿಬಿರಕ್ಕೆ ಬಂದ ಶಿಬಿರಾರ್ಥಿಗಳು ಪ್ರತೀ ವರ್ಷ ಹೊಸ ಅನುಭವಗಳೊಂದಿಗೆ ಹಿಂದಿರುಗುತ್ತಾರೆ.