ಮುಡಿಪು : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಹೋಬಳಿ ಘಟಕ ಹಾಗೂ ವಿಶ್ವಮಂಗಳ ಪ್ರೌಢಶಾಲೆ ಕೊಣಾಜೆ ಸಹಯೋಗದೊಂದಿಗೆ ದಿನಾಂಕ 18-08-2023ರಂದು ಬೆಳಗ್ಗೆ ವಿಶ್ವಮಂಗಳ ಪ್ರೌಢಶಾಲೆಯ ಸಭಾಂಗಣದಲ್ಲಿ ಕನ್ನಡ ಸಂಭ್ರಮ : ‘ಕುವೆಂಪು ಕಂಪು’- ಉಪನ್ಯಾಸ, ವಿಮರ್ಶೆ ಹಾಗೂ ಭಾವಗೀತೆ ಕಾರ್ಯಕ್ರಮ ನಡೆಯಲಿದೆ.
ಸಮಾರಂಭವನ್ನು ವಿಶ್ವಮಂಗಳ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ, ಮಂಗಳೂರು ವಿವಿಯ ಸಮಾಜಶಾಸ್ತ್ರ ವಿಭಾಗ ಅಧ್ಯಕ್ಷರಾದ ಪ್ರೊ.ವಿನಯ್ ರಜತ್ ಉದ್ಘಾಟಿಸಲಿದ್ದಾರೆ. ‘ಕುವೆಂಪು ನೆನಪು’ ವಿಷಯದ ಬಗ್ಗೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಇವರಿಂದ ಉಪನ್ಯಾಸ ನಡೆಯಲಿದೆ. ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕಸಾಪ ಉಳ್ಳಾಲ ಹೋಬಳಿ ಘಟಕದ ಅಧ್ಯಕ್ಷೆಯಾದ ವಿಜಯಲಕ್ಷ್ಮಿ ಪ್ರಸಾದ್ ರೈ ವಹಿಸಲಿದ್ದಾರೆ. ವಿಶ್ವಮಂಗಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಿಯಾ ಎನ್, ಕಸಾಪ ಉಳ್ಳಾಲ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಎಡ್ವರ್ಡ್ ಲೋಬೋ, ಕೋಶಾಧಿಕಾರಿ ಲಯನ್ ಚಂದ್ರಹಾಸ ಶೆಟ್ಟಿ ದೇರಳಕಟ್ಟೆ ಮತ್ತಿತರರು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೃತಿಯ ಕುರಿತು ವಿದ್ಯಾರ್ಥಿಗಳಿಂದ ವಿಮರ್ಶೆ ಮತ್ತು ಕುವೆಂಪು ಭಾವಗೀತೆಗಳ ಗಾಯನ ಕಾರ್ಯಕ್ರಮವಿದೆ.