ಮಂಡ್ಯ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಕರ್ನಾಟಕ ಸಂಘ ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ‘ಕೆ.ವಿ. ಶಂಕರಗೌಡ ನೆನಪಿನ ನಾಟಕೋತ್ಸವ’ವನ್ನು ದಿನಾಂಕ 09 ಜನವರಿ 2025ರಿಂದ 11 ಜನವರಿ 2025ರವರೆಗೆ ಮಂಡ್ಯದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ರಂಗಮಂದಿರದಲ್ಲಿ ಆಯೋಜಿಸಿದೆ.
ದಿನಾಂಕ 09 ಜನವರಿ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಸಮುದಾಯ ತಂಡದವರಿಂದ ಶ್ರೀ ನಟರಾಜ್ ಹೊನ್ನವಳ್ಳಿ ಇವರ ನಿರ್ದೇಶನದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ ‘ಜುಗಾರಿ ಕ್ರಾಸ್’ ನಾಟಕ ಪ್ರಸ್ತುತಗೊಳ್ಳಲಿದೆ.
ದಿನಾಂಕ 10 ಜನವರಿ 2025ರಂದು ಸಂಜೆ 5-00 ಗಂಟೆಗೆ ಶ್ರೀಮತಿ ಬಿ.ಎನ್. ಶಶಿಕಲಾ ಇವರ ನಿರ್ದೇಶನದಲ್ಲಿ ಮೈಸೂರಿನ ಶಶಿ ಥಿಯೇಟರ್ (ರಿ.) ಪ್ರಸ್ತುತ ಪಡಿಸುವ ನಾಟಕ ಡಾ. ಎಚ್.ಎಸ್. ವೆಂಕಟೇಶ ಮೂರ್ತಿಯವರ ‘ಉರಿಯ ಉಯ್ಯಾಲೆ’.
ದಿನಾಂಕ 11 ಜನವರಿ 2025ರಂದು ಸಂಜೆ 4-00 ಗಂಟೆಗೆ ಮಂಡ್ಯದ ಮಾಂಡವ್ವ ಕಲಾ ಟ್ರಸ್ಟ್ ತಂಡದವರು ಶ್ರೀ ಕಾರಸವಾಡಿ ಸುರೇಶ್ ಇವರ ನಿರ್ದೇಶನದಲ್ಲಿ ‘ಗದಾಯುದ್ಧ’ ಪೌರಾಣಿಕ ನಾಟಕದ ಪ್ರದರ್ಶನ ನೀಡಲಿದ್ದಾರೆ.